ಮೇ 6ರ ವರೆಗೂ ಕರ್ನಾಟಕದಲ್ಲಿ ಮಳೆ: ಇಷ್ಟುದಿನ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕರ್ನಾಟಕದ ಜನರು ನಿಟ್ಟುಸಿರು ಬಿಡುವಂತ ಸಮಯ ಬಂದೇಬಿಟ್ಟಿದೆ. ಅದೇನೆಂದರೆ ಕರ್ನಾಟಕದ ಹಲವೆಡೆ ಮಳೆಯ ಮುನ್ಸೂಚನೆ ಕಾಣುತ್ತಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಅಂದರೆ ಇಂದಿನಿಂದ (ಮೇ 1) ಮೇ 6ರವರೆಗೂ ಕರ್ನಾಟಕದಲ್ಲಿ ಮಳೆಯಾಗಲಿದೆ.

ಇನ್ನು ಈ ವರ್ಷ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಸ್ಥಿತಿ ಶುರುವಾಗಿದ್ದು, ಇದರಿಂದ ಕರಾವಳಿ ರಾಜ್ಯಗಳಲ್ಲಿ ಮಳೆಯುಂಟಾಗಲಿದೆ. ಕರ್ನಾಟಕ ಮತ್ತು ತಮಿಳುನಾಡಿನ ಕಡೆಗೆ ಈ ಚಂಡಮಾರುತದ ಪರಿಣಾಮ ಚಲಿಸುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಹವಾಮಾನವಿರಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಲ್ಲೆಲ್ಲಿ ಮಳೆಯಾಗಬಹುದು..?
ಇನ್ನು ಭಾರತೀಯ ಹವಾಮಾನ ಇಲಾಖೆ ಹಂಚಿಕೊಂಡಿರುವ ಮಾಹತಿತಿ ಪ್ರಕಾರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ ಮತ್ತು ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಮೇ 6ರ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದೆ. ಈ ಮಳೆ ಬಹುತೇಕ ಹಗುರ ಅಥವಾ ಮಧ್ಯಮ ಗುಡುಗು ಸಹಿತವಾಗಿರಲಿದ್ದು, ಕೆಲವೆಡೆ ಗಾಳಿ ಬೀಸುವ ಸಂಭವವೂ ಇದೆ ಎನ್ನಲಾಗಿದೆ.
ಅಂದಹಾಗೆ ಈ ಬಾರಿ ಬಂಗಾಳ ಕೊಲ್ಲಿಯಲ್ಲಿ ತಾಂಡವವಾಡುತ್ತಿರುವ ಚಂಡಮಾರುತದ ಪರಿಣಾಮ, ಒತ್ತಡದ ಕೆಂದ್ರದ ಸುತ್ತಲೂ ಗಾಳಿಯ ವೇಗ ಹೆಚ್ಚಾಗಿದೆ. ಇದರಿಂ ಮಳೆಮೂಕದ ವಾತಾವರಣ ಸೃಷ್ಟಿಸುತ್ತಿದೆ. ಇದು ತಮಿಳುನಾಡು ಮತ್ತು ಕರ್ನಾಟಕದ ಕರಾವಳಿ ಭಾಗಗಳಿಗೆ ಮುಟ್ಟುತ್ತಿರುವುದರಿಂದ ದಕ್ಷಿಣ ಒಳನಾಡುಗಳಲ್ಲಿ ಸಹ ಮಳೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಹವಾಮಾನ ತಜ್ಞರ ಪ್ರಕಾರ, ಈ ಚಂಡಮಾರುತವು ಪ್ರಬಲವಾದ ಪ್ರವಾಹವನ್ನಾದರೂ ಉಂಟುಮಾಡುವ ಸಾಧ್ಯತೆ ಕಡಿಮೆ ಇದ್ದರೂ, ಬೆಳೆ ಹಾನಿ, ವಿದ್ಯುತ್ ವ್ಯತ್ಯಯ, ಹಾಗೂ ದಿನಚರಿ ಬದುಕಿನಲ್ಲಿ ತೊಂದರೆ ಉಂಟುಮಾಡಬಹುದಾದಷ್ಟು ಪ್ರಮಾಣದಲ್ಲಿ ಮಳೆಯು ಸಂಭವಿಸಬಹುದಾಗಿದೆ.
ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಹೇಗಿರುತ್ತೆ..?
ಮೇ 1ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯ ಸಂಭವವಿದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ. ಈ ಮುನ್ಸೂಚನೆಯೊಂದಿಗೆ ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಅಂದಾಜಿಸಲಾಗಿದೆ.
ಮೇ 2ರ ವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರುವ ನಿರೀಕ್ಷೆಯಿದೆ. ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಮತ್ತು ಗಾಳಿಯ ತೀವ್ರತೆ ಕುರಿತು ಎಚ್ಚರಿಕೆ ನೀಡಲಾಗಿದೆ. ಗರಿಷ್ಠ ತಾಪಮಾನ 34 ಡಿಗ್ರಿಗೆ ತಲುಪಬಹುದು ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಬೆಳಗಾವಿ, ಧಾರವಾಡ, ಬೀದರ್, ವಿಜಯಪುರ, ಗದಗ ಮುಂತಾದ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲೂ ಮುಂದಿನ ವಾರದಲ್ಲಿ ಹಗುರದಿಂದ ಮಧ್ಯಮ ಮಳೆಯ ನಿರೀಕ್ಷೆ ಇದೆ ಎಂದು ಇಲಾಖೆಯು ತಿಳಿಸಿದೆ.
ಮೇ ತಿಂಗಳ ತಾಪಮಾನ ತೀವ್ರತೆ:
ಈ ವರ್ಷ ಭಾರತದಲ್ಲಿ ಬೇಸಿಗೆ ತೀವ್ರವಾಗಿದೆ. ಐಎಂಡಿಯು ವಿಶೇಷವಾಗಿ ಮೇ ತಿಂಗಳಿಗೆ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದ್ದು, ದೇಶದ ಹಲವಾರು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಉತ್ತರ ಭಾರತದ ಕೆಲ ಭಾಗಗಳಲ್ಲಿ ತೀವ್ರ ಶಾಖದ ಅಲೆಗಳು ಬೀರುವ ಸಾಧ್ಯತೆ ಇದ್ದು, ಜನರು ತಂಗಾಳಿಗೆ ಸರಿಯಾದ ತಯಾರಿ ಮಾಡಿಕೊಂಡು, ತಂಪು ವಾತಾವರಣದಲ್ಲಿ ಉಳಿಯಬೇಕು ಎಂದು ಸಲಹೆ ನೀಡಲಾಗಿದೆ.
ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದಂತೆ, ಈ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ದಾಖಲಾಗಿರುವ ಗರಿಷ್ಠ ದಿನದ ತಾಪಮಾನಗಳು ಇತಿಹಾಸದಲ್ಲಿನ ಎಂಟನೇ ಅತಿ ಹೆಚ್ಚು ಮಟ್ಟದಲ್ಲಿದೆ. ಕನಿಷ್ಠ ತಾಪಮಾನಗಳು ಸಹ ಇತಿಹಾಸದಲ್ಲಿನ ಒಂಬತ್ತನೇ ಅತಿ ಹೆಚ್ಚು ಮಟ್ಟದಲ್ಲಿವೆ. ವಾಯುವ್ಯ, ಮಧ್ಯ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಹಗಲಿನ ತಾಪಮಾನ ದಾಖಲಾಗುತ್ತಿದ್ದು, ಕೆಲ ದ್ವೀಪ ಪ್ರದೇಶಗಳು ಮಾತ್ರ ಈ ತೀವ್ರ ಶಾಖದಿಂದ ತಪ್ಪಿಸಿಕೊಂಡಿವೆ.
ಕರ್ನಾಟಕದ ಜನರು ಮುಂದಿನ ಒಂದು ವಾರದವರೆಗೆ ಬದಲಾಗುತ್ತಿರುವ ಹವಾಮಾನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ದಿನಚರಿಯನ್ನು ರೂಪಿಸಿಕೊಳ್ಳಬೇಕು. ರೈತರು ತಮ್ಮ ಬೆಳೆಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು. ನಗರ ನಿವಾಸಿಗಳು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳಾದವರು ಮಳೆಗಾಲದ ರೋಗಗಳು, ಶಾಖದ ಅಲೆಗಳಿಂದ ಮುನ್ನೆಚ್ಚರಿಕೆ ವಹಿಸಬೇಕು. ಹವಾಮಾನ ಬದಲಾವಣೆಗೆ ತಕ್ಷಣ ಸ್ಪಂದಿಸುವಂತೆ, ಉಷ್ಣತೆ ಅಥವಾ ತೇವಾಂಶ ಬದಲಾಗುವ ಪ್ರಕ್ರಿಯೆಗಳನ್ನು ಗಮನಿಸುತ್ತಾ ನಿತ್ಯದ ತಜ್ಞರ ವರದಿಗಳನ್ನು ಗಮನಿಸುವುದು ಅನಿವಾರ್ಯವಾಗಿದೆ.


Click it and Unblock the Notifications