ಕರ್ನಾಟಕದಲ್ಲಿ ಹಲವು ದಿನಗಳಿಂದ ಹವಾಮಾನ ಇಲಾಖೆ ಮಳೆ ಎಚ್ಚರಿಕೆಯನ್ನು (Rain Alert) ನೀಡುತ್ತಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರೀ ಮಳೆಯಾಗಿದೆ. ದಿತ್ವಾ ಚಂಡಮಾರುತದ (Ditwah Cyclone) ಅಬ್ಬರದಿಂದಾಗಿ ಕರ್ನಾಟಕದಲ್ಲೂ ಪರಿಣಾಮ ಬೀರಿತ್ತು. ಈ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆಯಾಗಿತ್ತು. ಅಲ್ಲದೇ ಕೇರಳ ಮತ್ತು ತಮಿಳುನಾಡಿನಲ್ಲಿ ಇಂದಿಗೂ ಮಳೆಯಾರ್ಭಟ ನಿಲ್ಲುತ್ತಿಲ್ಲ. ಇದೀಗ ಮತ್ತೆ ರಾಜ್ಯದಲ್ಲಿ ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು-ಮಿಂಚಿನೊಂದಿಗೆ ಮಳೆ!
ಇದೀಗ ಕರ್ನಾಟಕಕ್ಕೆ ಹವಾಮಾನ ಇಲಾಖೆ (IMD) ಮಳೆ ಎಚ್ಚರಿಕೆ ನೀಡಿದೆ. ಆ ಪ್ರಕಾರ, ಮುಂಬರುವ ದಿನಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಚಳಿ ಜೊತೆ ಜೊತೆ ಮಳೆ!
ಈಗಾಗಲೇ ಬಹುತೇಕ ಮೋಡ ಕವಿದ ವಾತಾವರಣ ಕಡಿಮೆಯಾಗಿದ್ದು, ಕೆಲವೆಡೆ ಬಿಸಿಲು, ಇನ್ನೂ ಕೆಲವೆಡೆ ಚಳಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲೂ ಮೈಕೊರೆವ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಲ್ಲೆಲ್ಲಾ ಭಾರೀ ಚಳಿ:
ಶಿವಮೊಗ್ಗ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಮಳೆ ಕಡಿಮೆಯಾಗಿ ಚಳಿ ಹೆಚ್ಚಾಗಲಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಆವರಿಸಿದೆ. ಇದೀಗ ಮುಂದಿನ ದಿನಗಳಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನ ಹವಾಮಾನ ಹೇಗಿದೆ?
ಈಗಾಗಲೇ ಬೆಂಗಳೂರಿನಲ್ಲಿ ಚಳಿ ವಿಪರೀತವಾಗಿದೆ. ಆದರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಚಳಿ ಮುಂದುವರೆಯುವ ಸಾಧ್ಯತೆ ಇದೆ. ಬೆಳಗ್ಗಿನ ವೇಳೆ ದಟ್ಟ ಮಂಜು ಆವರಿಸಲಿದ್ದು, ನಂತರ ಚಳಿ ಹೆಚ್ಚಾಗಲಿದೆ. ಇನ್ನೂ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದ್ದು, ಇದರಿಂದ ತಾಪಮಾನದಲ್ಲಿ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇಲ್ಲೆಲ್ಲಾ ಮಳೆ:
ಬೆಳಗಾವಿ, ಬೀದರ್, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ತಾಪಾಮಾನದಲ್ಲಿ ಸ್ವಲ್ಪ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಮೋಡ ಕವಿದ ವಾತಾವರಣ ಇರಲಿದ್ದು, ತಕ್ಕ ಮಟ್ಟಿಗೆ ಮಳೆಯೂ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಜನರಿಗೆ ಸಲಹೆ:
ಯಾರೇ ಆಗಲಿ, ಎಲ್ಲಾದರು ಹೋಗುವಾಗ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿಕೊಂಡು ಹೋದರೆ ಉತ್ತಮ. ಹೆಚ್ಚಿನವರು ವಾರಾಂತ್ಯದಲ್ಲಿ, ವರ್ಷಾಂತ್ಯದಲ್ಲಿ, ಹೊಸ ವರ್ಷದ ಪ್ರಯುಕ್ತ ಟ್ರಾವೆಲ್ ಪ್ಲಾನ್ ಮಾಡುತ್ತಾರೆ. ಆದ್ರೆ ಕೆಲವು ಕಡೆಗಳಲ್ಲಿ ವಿಪರೀತ ಚಳಿ ಇರುವುದರಿಂದ, ಇನ್ನೂ ಕೆಲವೆಡೆ ಮಳೆ ಪರಿಣಾಮ ವಾಹನ ಚಲಾಯಿಸುವುದು ಕೂಡಾ ಕಷ್ಟಸಾಧ್ಯ. ಆದ್ದರಿಂದ ಮಳೆ, ಚಳಿಯನ್ನು ಗಮನಿಸಿಕೊಂಡು ಟ್ರಾವೆಲ್ ಪ್ಲಾನ್ ಮಾಡಿದರೆ ಉತ್ತಮ.


Click it and Unblock the Notifications