ಮುಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಕಡಿಮೆಯಾಗಲಿದ್ದು, ಚಳಿಗಾಲ ಶುರುವಾಗುವ ಸಮಯ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ನಿನ್ನೆಯಷ್ಟೇ ತೆಲಂಗಾಣದಲ್ಲಿ (Telangana) ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿತ್ತು. ಇದೀಗ ಅಕ್ಟೋಬರ್ 13 ರವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Karnataka Rain Alert) ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (IMD) ಸೋಮವಾರ ಮುನ್ಸೂಚನೆ ನೀಡಿತ್ತು. ಇದೀಗ ಈ ಎಚ್ಚರಿಕೆ ಮತ್ತಷ್ಟು ವಿಸ್ತರಿಸಿದೆ. ಈಶಾನ್ಯ ಮಾನ್ಸೂನ್ ಆರಂಭವಾಗುವ ಮುನ್ನ ನೈಋತ್ಯ ಮಾನ್ಸೂನ್ ಹಿಂದೆ ಕೊನೆಗೊಳ್ಳುತ್ತಿರುವುದರಿಂದ ಮಳೆ ಬರುವ ಸಾಧ್ಯತೆ ಇದೆ.

ಇನ್ನು ಅಕ್ಟೋಬರ್ 13, ಸೋಮವಾರದ ಸಂಜೆ ವೇಳೆಗೆ ನೈಋತ್ಯ ಮಾನ್ಸೂನ್ ಉತ್ತರ ಕರ್ನಾಟಕದ ಕೆಲವು ಭಾಗಗಳಿಂದ ಹಿಂದೆ ಸರಿದಿದೆ. ಇನ್ನೇನು ಮುಂದಿನ ವಾರದೊಳಗೆ ಇಡೀ ರಾಜ್ಯದಿಂದ ನೈಋತ್ಯ ಮಾನ್ಸೂನ್ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಅಲರ್ಟ್ ನೀಡಿದ್ದು, ಹವಾಮಾನ ಇಲಾಖೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಅನ್ನೂ ಘೋಷಣೆ ಮಾಡಿ, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ.
2025 ರಲ್ಲಿ ಮಳೆ ಹೇಗಿತ್ತು?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಈ ಬಾರಿ ರಾಜ್ಯದಲ್ಲಿ ಯಾವ ರೀತಿ ಮಳೆಯಾಗಿದೆ ಎಂದು ಹಂಚಿಕೊಂಡಿದೆ. ಆ ಪ್ರಕಾರ, ಈ ಸೀಸನ್‌ನಲ್ಲಿ ನೈಋತ್ಯ ಮಾನ್ಸೂನ್ ಮಳೆ ಬಂದಿದ್ದರೂ, ಅಕ್ಟೋಬರ್ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾಗಿದೆ ಎನ್ನಲಾಗಿದೆ. ಆದರೆ ಉತ್ತರ ಒಳನಾಡು ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ಅಲ್ಲಿ ಕ್ರಮವಾಗಿ ಸಾಮಾನ್ಯಕ್ಕಿಂತ ಶೇ. 69, ಶೇ. 21 ಮತ್ತು ಶೇ. 49 ರಷ್ಟು ಮಳೆ ಪ್ರಮಾಣ ಇಳಿಕೆಯಾಗಿದೆ. ಇನ್ನು ಬೆಂಗಳೂರು ಭಾಗವಾಗಿರುವ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸುರಿದ ಮಳೆ ಭಾರೀ ಏರಿಕೆಯಾಗಿದೆ.
ಇಂದು ಮತ್ತೆ ನಾಳೆ ಮಳೆ ಅಲರ್ಟ್!
ಹವಾಮಾನ ಇಲಾಖೆ 14 ಜಿಲ್ಲೆಗಳಿಗೆ ಇಂದು ಮತ್ತು ನಾಳೆ (ಅ.14,15) ಯೆಲ್ಲೋ ಅಲರ್ಟ್ ನೀಡಿದ್ದು, ಈ ಪರಿಣಾಮ ದಕ್ಷಿಣ ಕನ್ನಡ, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಬೆಂಗಳೂರು ನಗರ, ಚಾಮರಾಜನಗರ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ನೈಋತ್ಯ ಮಾನ್ಸೂನ್ ಹಿಂದೆ ಸರಿಯುತ್ತಿರುವ ಪರಿಣಾಮ ತೆಲಂಗಾಣದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರಿಂದ ಹನುಮಕೊಂಡ, ಜನಗಮ, ನಾಗರ್ಕರ್ನೂಲ್, ವನಪರ್ತಿ, ಜೋಗುಳಂಬ ಗಡ್ವಾಲ, ಮೇಡ್ಚಲ್ ಮಲ್ಕಾಜ್ಗಿರಿ, ಭದ್ರದ್ರಿ ಕೊಥಗುಡೆಮ್, ವಾರಂಗಲ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಖಮ್ಮಂ, ನಲ್ಗೊಂಡ, ಸೂರ್ಯಪೇಟೆ, ಮಹಬೂಬಾಬಾದ್, ರಂಗ ರೆಡ್ಡಿ ಮತ್ತು ಹೈದರಾಬಾದ್ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications