ಬೆಂಗಳೂರು (Bengaluru) ಸೇರಿ ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಲೇ ಇದೆ. ಮಳೆಗಾಲ ಕಡಿಮೆಯಾಗುತ್ತಿದ್ದಂತೆ, ಚಳಿ ಕೂಡಾ ಜನರನ್ನು ಆವರಿಸುತ್ತಿದೆ. ಈಗಾಗಲೇ ನೈಋತ್ಯ ಮಾನ್ಸೂನ್ ಹಿಂದೆ ಸರಿಯುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಕರ್ನಾಟಕದಲ್ಲಿ (Karnataka) ಮಳೆ ಅಲರ್ಟ್ ಘೋಷಣೆ (Rain Alert) ಮಾಡಿತ್ತು. ಇನ್ನು ನೈಋತ್ಯ ಮಾನ್ಸೂನ್ (Monsoon) ಇದೀಗ ಮತ್ತಷ್ಟು ಚುರುಕುಗೊಂಡಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ (ಅ.17,18) ಎರಡು ದಿನ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಿಗೆ ಹೈ ಅಲರ್ಟ್!
ರಾಜ್ಯದಲ್ಲಿ ಎರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆ 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿ ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಗದಗ, ವಿಜಯನಗರ, ತುಮಕೂರು, ಚಾಮರಾಜನಗರ, ರಾಮನಗರ, ಕೋಲಾರ, ಕೊಪ್ಪಳ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ಹಾಸನ ಮತ್ತು ಕೊಡಗಿನಲ್ಲೂ ವರುಣಾರ್ಭಟ ಜೋರಾಗಿಯೇ ಇರಲಿದ್ದು, ಈ ಜಿಲ್ಲೆಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ, ಇಂದು ಮತ್ತು ನಾಳೆ ಹಾಸನ ಮತ್ತು ಕೊಡಗಿನಲ್ಲಿ ಭಾರೀ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಮಳೆ ಹೇಗಿದೆ?
ನಿನ್ನೆ ಸಂಜೆಯಿಂದ, ರಾತ್ರಿಯಿಡೀ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಇಂದು ಕೂಡಾ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಈಗಾಗಲೇ ಯೆಲ್ಲೋ ಅಲರ್ಟ್ ಕೂಡಾ ಘೋಷಿಸಲಾಗಿದೆ. ಇನ್ನು ವಾಹನ ಸವಾರರು ಈ ಸಂದರ್ಭದಲ್ಲಿ ಜಾಗರೂಕತೆಯಿಂದ ಇರುವಂತೆ, ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಲಾಗಿದೆ.
ಇನ್ನು ಅಕ್ಟೋಬರ್ 19 ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಪರಿಣಾಮ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಅದೇ ರೀತಿ ಅಕ್ಟೋಬರ್ 20 ಮತ್ತು 21 ರಂದು ನಗರದಲ್ಲಿ ಮಧ್ಯಮ ಮಳೆಯಾಗಲಿದ್ದು, ತಾಪಮಾನ ಮಾತ್ರ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ವರದಿಯಾಗಿದೆ.
ಪ್ರಯಾಣಿಕರಿಗೆ ಸಲಹೆ ಏನು?
ಕಳೆದೆರಡು ದಿನಗಳಿಂದಲೂ ಸಂಜೆಯಾದ್ರೆ ಸಾಕು ಮಳೆ ಬರಲು ಶುರುವಾಗುತ್ತೆ. ಈ ವೇಳೆಯೇ ಜನರು ಹೆಚ್ಚಾಗಿ ಓಡಾಡುತ್ತಾರೆ. ಆದ್ದರಿಂದ ಮಳೆ ಅಲರ್ಟ್ ಬಗ್ಗೆ ಗಮನಿಸಿಕೊಂಡು ಹೊರ ಹೋಗುವಂತೆ ಸೂಚನೆ ನೀಡಲಾಗಿದೆ. ಮಳೆ ಬರುವ ಕಾರಣ ಆದಷ್ಟು ಬೇಗ ಹೊರಡುವ ಪ್ಲಾನ್ ಮಾಡುವುದು ಸೂಕ್ತ ಎಂದು ಹೇಳಲಾಗಿದೆ.


Click it and Unblock the Notifications