ಬೆಂಗಳೂರು, ಏಪ್ರಿಲ್ 17: ಈಗಂತೂ ಯಾವುದರ ಮೇಲೆ ಇಎಂಐ ಸೌಲಭ್ಯ ಇಲ್ಲ ಹೇಳಿ. ಪ್ರತಿನಿತ್ಯ ಬಳಸುವ ಫೋನಿನಿಂದ ಹಿಡಿದು ದೊಡ್ಡ ದೊಡ್ಡ ಕಾರ್ ಗಳ ಖರೀದಿವರೆಗೂ, ಎಲ್ಲದಕ್ಕೂ ಇಎಂಐ ವ್ಯವಸ್ಥೆ ಇದೆ. ಅಂದ್ರೆ ನೀವು 5 ಲಕ್ಷದ ಒಂದು ಪದಾರ್ಥ ಕೊಂಡರೆ ಮೊದಲಿಗೆ ಅದರಲ್ಲಿ ಶೇಕಡ ಇಂತಿಷ್ಟು ಮೊತ್ತವನ್ನು ಮಾತ್ರ ಡೌನ್ ಪೇಮೆಂಟ್ ಮಾಡಿ ಪದಾರ್ಥವನ್ನು ಮನೆಗೆ ತರಬಹುದು. ಉಳಿದ ಬಾಕಿ ಮೊತ್ತವನ್ನು ಕಂತುಗಳ ರೂಪದಲ್ಲಿ ಇಷ್ಟು ತಿಂಗಳು ಪ್ರತಿ ತಿಂಗಳಿಗೆ ಇಷ್ಟರಂತೆ ಕಟ್ಟಿ ತೀರಿಸುವ ವಿಧಾನ ಇಎಂಐ!
ಹೀಗೆ ಒಮ್ಮೆ ನಾವು ಇ.ಎಂ.ಐ ನಿಯಮಗಳಿಗೆ ಒಳಪಟ್ಟ ಮೇಲೆ ನಿಗದಿತ ದಿನಾಂಕದಂದು ಕರಾರುವಕ್ಕಾಗಿ emi ಪೇಮೆಂಟ್ ಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತೆ. ಬಹುತೇಕ ಇಎಂಐ ಗಳು ಆಟೋಮೆಟಿಕ್ ಆಪ್ಶನ್ ಹೊಂದಿರುತ್ತೆ. ಅಂದ್ರೆ ನಿಗದಿತ ದಿನಾಂಕದಂದು ನಮ್ಮ ಬ್ಯಾಂಕ್ ಅಕೌಂಟ್ನಿಂದ ತಾನಾಗಿಯೇ ಈಎಂಐನ ನಿಗದಿಪಡಿಸಿದ ಮೊತ್ತ ಕಡಿತವಾಗುತ್ತೆ. ಇದಕ್ಕಾಗಿ ನಮ್ಮ ಅಕೌಂಟ್ ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಉಳಿಸಿರಬೇಕಾಗುತ್ತೆ.

ಉದಾಹರಣೆಗೆ ನೀವು ಇ ಎಂ ಐ ನಲ್ಲಿ ಕಾರ್ ಖರೀದಿ ಮಾಡಿದ್ದು ಪ್ರತಿ ತಿಂಗಳ ಇಎಂಐ ಮೊತ್ತ 12,000 ಎಂದು ಭಾವಿಸಿದರೆ ಪ್ರತಿ ತಿಂಗಳ 8ನೇ ತಾರೀಕು ನಿಮ್ಮ ಇಎಂಐ ದಿನಾಂಕ ನಿಗದಿಯಾಗಿದ್ದರೆ, ಮೂರು ವರ್ಷಗಳಿಗೆ ನೀವು ಕಾರ್ ಲೋನ್ ಪಡೆದುಕೊಂಡು ಇಎಂಐ ಮಾಡಿಸಿಕೊಂಡಿದ್ದರೆ, ಪ್ರತಿ ತಿಂಗಳು 8 ನೇ ತಾರೀಕು ನಿಮ್ಮ ಅಕೌಂಟ್ ನಲ್ಲಿ ಅಷ್ಟು ಮೊತ್ತ ಇರೋದನ್ನ ನೀವು ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಎಂಐ ಕಟ್ಟಲು ವಿಫಲವಾದರೆ ಫೈನ್ ವಿಧಿಸಲಾಗ್ತಿತ್ತು , ಜೊತೆಗೆ ಅದು ನಿಮ್ಮ ಸಿಬಿಲ್ ರಿಪೋರ್ಟ್ ನ ಮೇಲು ಪರಿಣಾಮ ಬೀರುತ್ತಿತ್ತು . ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿಯಮವನ್ನ ಬದಲಾವಣೆ ಮಾಡಿ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.
ಈಎಂಐ ಪಾವತಿದಾರರಿಗೆ ಗುಡ್ ನ್ಯೂಸ್ !
ಏಪ್ರಿಲ್ ಒಂದರ ನಂತರ ಲೋನ್ ಪಡೆದಿರುವವರಿಗೆ ಈ ನಿಯಮ ಈಗಾಗಲೇ ಅನ್ವಯಾಗಲಿದೆ. ಇದಕ್ಕೂ ಮುಂಚಿನ ಲೋನ್ ಗಳ ಇಎಂಐ ಪಡೆದುಕೊಂಡವರಿಗೆ ಜೂನ್ 30ರ ನಂತರ ಈ ನಿಯಮ ಅನ್ವಯವಾಗಲಿದೆ ಎಂಬುದನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಈ ನಿಯಮದ ಪ್ರಕಾರ ನಿಗದಿ ಪಡಿಸಿದ ದಿನಾಂಕದಂದು ಒಂದು ವೇಳೆ ಇಎಂಐ ಪಾವತಿ ಸಾಧ್ಯವಾಗದಿದ್ದರೆ, ಅದಕ್ಕಾಗಿ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ವಿಧಿಸುವ ಹಾಗಿಲ್ಲ ಎಂಬ ನಿಯಮವನ್ನ ಆರ್‌ಬಿಐ ಜಾರಿಗೆ ತಂದಿದೆ.
ಒಂದು ವೇಳೆ ಕಾರಣಾಂತರಗಳಿಂದ ನಿಗದಿಪಡಿಸಿದ ದಿನಾಂಕದಲ್ಲಿ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಮೆಂಟೇನ್ ಮಾಡಿಲ್ಲ ಅನ್ನೋದಾದ್ರೆ ಪರ್ಯಾಯ ದಿನಾಂಕ ಪರ್ಯಾಯ ವ್ಯವಸ್ಥೆಯ ಮೂಲಕ ಈಎಂಐ ಪಾವತಿ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಹೊರತಾಗಿ ಇಎಂಐ ಪೇಮೆಂಟ್ ಆಗಿಲ್ಲ ಎಂಬ ನೆಪ ಹೇಳಿ ಬ್ಯಾಂಕ್ ಗ್ರಾಹಕರಿಗೆ ಹೆಚ್ಚುವರಿ ಶುಲ್ಕವನ್ನ ವಿಧಿಸಿ ಫೈನ್ ಹಾಕುವಂತಿಲ್ಲ ಎಂಬ ನಿಯಮ ಇದು.
ಸೊ ಇನ್ಮುಂದೆ ಅಪ್ಪಿ ತಪ್ಪಿ ನಿಮ್ಮ ಇಎಂಐ ಪಾವತಿ ತಡವಾದರೆ ಬ್ಯಾಂಕ್ ನವರು ನಿಮಗೆ ಫೈನ್ ಶುಲ್ಕ ವಿಧಿಸಿದರೆ ಯಾವುದೇ ಕಾರಣಕ್ಕೂ ಫೈನ್ ಪಾವತಿ ಮಾಡದೆ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿ. ಆರ್ ಬಿ ಐ ಹೊಸ ನಿಯಮಗಳನ್ನು ಅವರ ಗಮನಕ್ಕೆ ತನ್ನಿ. ನಿಮ್ಮ ಲೋನ್ ಏಪ್ರಿಲ್ ಒಂದರ ನಂತರ ಪಡೆದುಕೊಂಡಿರುವುದಾದರೆ ಈಗಾಗಲೇ ಈ ನಿಯಮ ನಿಮಗೆ ಅನ್ವಯವಾಗಲಿದೆ. ಈ ಹಿಂದಿನ ಹಳೆಯ ಲೋನ್ ಇಎಂಐ ಗಳಾಗಿದ್ದರೆ ಜೂನ್ 30ರ ನಂತರ ನಿಯಮ ನಿಮಗೂ ಅನ್ವಯವಾಗಲಿದೆ.


Click it and Unblock the Notifications