ಮಾಹಿತಿ ತಂತ್ರಜ್ಞಾನ ದಿನೇ ದಿನೇ ಬದಲಾಗುತ್ತಾ ಇರುತ್ತದೆ. ಹೀಗಾಗಿ ತಂತ್ರಜ್ಞಾನವನ್ನು ಇಷ್ಟ ಪಡುವ ಜನರು ತಾವು ಹೈಟೆಕ್ ಗೆಜೆಟ್‌ಗಳನ್ನು ಹೊಂದಿರಬೇಕು ಎಂದು ಆಸೆ ಹೊಂದಿರುತ್ತಾರೆ. ಅದರಂತೆ ಸ್ಮಾರ್ಟ್ ಫೋನ್‌ಗಳಲ್ಲೂ ದಿನಂಪ್ರತಿ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತದೆ.
ಪ್ರತಿ ತಿಂಗಳು ಮೊಬೈಲ್ ಫೋನ್ ಲವರ್ಸ್‌ಗೆ ಕಂಪಬಿಗಳು ವಿಶೇಷ ಉಡುಗೊರೆ ನೀಡುತ್ತಲೇ ಇರುತ್ತವೆ. ಹಾಗಿದ್ದರೆ ಮುಂಬರು ಮಾರ್ಚ್‌ನಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಫೋನ್‌ಗಳು ಯಾವವು?, ಅದರ ಬೆಲೆ ಎಷ್ಟು ಇಲ್ಲಿದೆ ಮಾಹಿತಿ.

ನಥಿಂಗ್ ಫೋನ್ 2ಎ
ನಥಿಂಗ್ ಕಂಪನಿಯ ಮತ್ತೊಂದು ಸ್ಮಾರ್ಟ್ ಫೋನ್ ಮಾರ್ಚ್ 5 ರಂದು ಬಿಡುಗಡೆ ಆಗಲಿದೆ. ಈ ಫೋನ್ 6.7 ಇಂಚ್ ಒಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಡ್ಯೂಯಲ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 8ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೆಜ್ ಇರಲಿದೆ. ಈ ಸ್ಮಾರ್ಟ್ ಫೋನ್ ಮಿಡಿಯಾ ಟೆಕ್ 7200 SoC ಪ್ರೋಸೆಸರ್ ಹೊಂದಿರಲಿದೆ. ಈ ಸ್ಮಾರ್ಟ್ ಫೋನ್‌ನಲ್ಲಿ ಆಂಡರ್ಯಾಡ್ 14 ಇರುವ ಸಾಧ್ಯತೆ ಇದೆ.
ಸ್ಯಾಮಸಂಗ್ ಗ್ಯಾಲಕ್ಸಿ ಎ55 5ಜಿ
ಈ ಸ್ಮಾರ್ಟ್‌ಫೋನ್ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಗ್ರಾಹಕರ ಕೈ ಸೇರಬಹುದು. ಇದು ಸ್ಯಾಮ್‌ಸಾಂಗ್ ಕಂಪನಿಯ ಮಿಡ್ ರೇಂಜ್ ಮೊಬೈಲ್ ಆಗಿದೆ. ಗ್ಯಾಲಕ್ಸಿ ಎ55 6.5 ಡಿಸ್‌ಪ್ಲೇ ಹೊಂದಿದ್ದು, ಫುಲ್ ಎಚ್‌ಡಿ+, ಒಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್‌ನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳು ಸಿಗುವ ಸಾಧ್ಯತೆ ಇದೆ.
ಜಿಯೋಮಿ 14
ಬಹು ನಿರೀಕ್ಷಿತ ಜಿಯೋಮಿ ಮೊಬೈಲ್ ಮಾರ್ಚ್ 7 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಚೀನಾದ ಈ ಫೋನ್ 6.36 ಇಂಚ್ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಜನರೇಷನ್ 3 ಎಸ್‌ಒಸಿ ಪ್ರೊಸೆಸರ್ ಇರಲಿದೆ. ಈ ಮೊಬೈಲ್ ನಲ್ಲಿ ಹಿಂಬದಿಯಲ್ಲಿ 50 ಎಂಪಿ ಕ್ಯಾಮೆರಾ ಸಿಗಲಿದೆ. ಅಲ್ಲದೆ ಇಷ್ಟೇ ಮೆಗಾ ಫಿಕ್ಸಲ್‌ನ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ.

ರಿಯಲ್‌ಮಿ 12+ 5G
ರಿಯಲ್‌ಮಿ 12 Pro 5G ಮತ್ತು ರಿಯಲ್‌ಮಿ 12 Pro+ 5G ಯ ಇತ್ತೀಚಿಗೆ ಬಿಡುಗಡೆ ಗೊಳಿಸಿ ಯಶ ಕಂಡ ಮೇಲೆ, ಕಂಪನಿಯು ಈಗ ಮಿಡ್-ರೇಂಜರ್ ರಿಯಲ್‌ಮಿ 12+ ಅನ್ನು ಶೀಘ್ರದಲ್ಲಿ ಹೊರ ತರುವ ನಿರೀಕ್ಷೆಯಿದೆ. ಈ ಬಗ್ಗೆ ಕಂಪನಿ ತನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
ವಿವೋ ವಿ30 ಪ್ರೊ
ವಿವೋ ವಿ30 ಪ್ರೊ ಮೋಸ್ಟಲಿ ಇದೇ ತಿಂಗಳು 28 ರಂದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಮಾಹಿತಿಯ ಪ್ರಕಾರ ಈ ಸ್ಮಾರ್ಟ್ ಫೋನ್ ಕವರ್ಡ್ ಡಿಸ್‌ಪ್ಲೇ ಹೊಂದಿದ್ದು ಮೂರು ಕ್ಯಾಮೆರಾ ಗಳನ್ನು ಒಳಗೊಂಡಿರುತ್ತದೆ. ಈ ಮೊಬೈಲ್‌ನಲ್ಲಿ ಮಿಡಿಯಾಟೆಕ್ ಡಿಮೆನ್ಸಿಟಿ 9200+ ಪ್ರೊಸೆಸರ್ ಹೊಂದಿರಲಿದ್ದು, ಆಂಡರ್ಯಾಡ್ 14 ಹೊಂದಿರುವ ಸಾಧ್ಯತೆ ಇದೆ.


Click it and Unblock the Notifications