ಬೆಂಗಳೂರು, ಮೇ 16: ನೋಟು ಅಮಾನ್ಯಗೊಳಿಸಿದ ಸರ್ಕಾರದ ಕಠಿಣ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಎಲ್ಲ ಟೀಕೆಗಳನ್ನು ತಳ್ಳಿಹಾಕಿ , ಇದು ಭ್ರಷ್ಟಾಚಾರದ ವಿರುದ್ದದ ಹೋರಾಟ, ಕಳೆದುಕೊಳ್ಳಲು ನನ್ನ ಬಳಿ ಏನೇನು ಇಲ್ಲ"ಹಮ್ ತೋ ಫಕೀರ್ ಆದ್ಮಿ ಹೈಂ, ಜೊಲಾ ಲೇ ಕೆ ಚಲ್ ಪಡೆಂಗೆ" (ನಾನೊಬ್ಬ ಸನ್ಯಾಸಿ, ಜೋಳಿಗೆ ಹಿಡಿದು ಹೊರಡುಬಿಡುತ್ತೇನೆ) ಎಂದು ಡಿಸೆಂಬರ್ 2016 ರಲ್ಲಿ ಮೋದಿ ಅವರು ಘಂಟಾಘೋಷ ಘೋಷಣೆ ಮಾಡಿದ್ದರು.
ನಿರ್ದಿಷ್ಟವಾಗಿ ಹೇಳಬೇಕೆಂದರೆ " ನಾನು ಬಡವ" ಹಾಗೂ "ಸಾಧಾರಣ ಮನುಷ್ಯ " ಎಂಬ ಅವರ ಈ ಹೇಳಿಕೆ, 2014 ರ ಚುನಾವಣೆಗೆ ಮುಂಚಿತವಾಗಿ ಅವರ 'ಚಾಯ್ ವಾಲಾ ' ಇಮೇಜ್ ಮತ್ತಷ್ಟು ಸಹಾಯ ಮಾಡಿತೆಂದರೆ ತಪ್ಪಗಲಾರದು. ಇದಕ್ಕೂ ಮೊದಲು ಅಂದರೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಅಫಿಡವಿಟ್‌ನಲ್ಲಿ 1.65 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.

ಕಳೆದ 10 ವರ್ಷಗಳಲ್ಲಿ ಮೋದಿಯವರ ಆಸ್ತಿಯಲ್ಲಿ ಹೆಚ್ಚಳವಾಗಿದ್ದು, ಅಂದರೆ 2014 ರಲ್ಲಿ 1.65 ಕೋಟಿ ರೂ.ಗಳಿಂದ 2024 ರಲ್ಲಿ 3.02 ಕೋಟಿ ರೂ. ಗೆ ಏರಿಕೆ ಆಗಿದೆ. 2019ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಧಾನಿ ನಾಮಪತ್ರ ಸಲ್ಲಿಸುವಾಗ ನೀಡಲಾದ ಅಫಿಡವಿಟ್ ನಲ್ಲಿ ಅವರ ಆಸ್ತಿ 2.51 ಕೋಟಿ ರೂ. ಘೋಷಿಸಿಕೊಂಡಿದ್ದರು.
ನರೇಂದ್ರ ಮೋದಿ ಆಸ್ತಿ ವಿವರ: ಸಾಲಗಳೂ ಇಲ್ಲ, ಆಸ್ತಿಯೂ ಇಲ್ಲ.!
ಪ್ರಧಾನಿ ಅಫಿಡವಿಟ್ ಪ್ರಕಾರ, ಅವರು ಸ್ವಂತವಾಗಿ ಯಾವುದೇ ಸ್ಥಿರ ಆಸ್ತಿ, ಮನೆ, ಜಮೀನು ಅಥವಾ ವಾಹನ ಹೊಂದಿಲ್ಲ. ಬ್ಯಾಂಕ್ ಠೇವಣಿಗಳಲ್ಲಿ 2.86 ಕೋಟಿ ರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ವಿತ ಠೇವಣಿ ರೂಪದಲ್ಲಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ 9 ಲಕ್ಷ ರೂ. ಹೂಡಿಕೆ ಮಾಡಿದ್ದು, ಸುಮಾರು 2.7 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ.
ಇದಲ್ಲದೇ ಅವರು ಯಾವುದೇ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಸೆಕ್ಯೂರಿಟಿ ಬಾಂಡ್ ಗಳನ್ನು ಹೊಂದಿಲ್ಲ. 52,920 ರೂಪಾಯಿ ನಗದು ಹೊಂದಿದ್ದು, ಅವರು ಯಾವುದೇ ಸಾಲ ಅಥವಾ ಬಾಕಿ ಉಳಿಸಿಕೊಂಡಿಲ್ಲ. ಪ್ರಧಾನಿ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಮೊದಲು 2014 ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿಗೆಲುವು ಸಾಧಿಸಿದ್ದರು.
ರಾಹುಲ್ ಗಾಂಧಿ ಮೋದಿಗಿಂತ ಆರು ಪಟ್ಟು ಶ್ರೀಮಂತರು.!
ಕೇರಳದ ವಯನಾಡ್‌ನಿಂದ ಹಾಲಿ ಸಂಸದರಾಗಿರುವ ಮತ್ತು ಈ ವರ್ಷದ ಆರಂಭದಲ್ಲಿ ತಾಯಿ ಸೋನಿಯಾ ಗಾಂಧಿ ಅವರಿಂದ ತೆರವಾದ ರಾಯ್ ಬರೇಲಿಯಿಂದ ಕಣದಲ್ಲಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕಥೆಯು ಇದಕ್ಕೆ ವ್ಯತಿರಿಕ್ತವಾಗಿದೆ.
ಭಾರತದ ಬಡವರು ಮತ್ತು ದೀನದಲಿತರ ಸಮಸ್ಯೆಗಳನ್ನು ಗುರುತಿಸುವ ಮತ್ತು ಅರ್ಥಮಾಡಿಕೊಳ್ಳುವ ಮತ್ತು ಅವರ ದುಃಖದಿಂದ ಅವರನ್ನು ನಿವಾರಿಸುವ ಮೂಲಕ ಭರವಸೆಯ ನಾಯಕರಾಗಿ , ಭಾರತ್ ಜೋಡೋ ಯಾತ್ರೆ ಮೂಲಕ ಈ ಸ್ಥಾನ ಪಡೆದಿದ್ದಾರೆ. ವಯನಾಡ್ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದ ಅಫಿಡವಿಟ್‌ಗಳ ಪ್ರಕಾರ, ರಾಹುಲ್ ಅವರು 20.34 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಇದು ಪ್ರಸ್ತುತ ಪ್ರಧಾನಿ ಮೋದಿಯವರ ಆಸ್ತಿಗಿಂತ ಆರು ಪಟ್ಟು ಹೆಚ್ಚಾಗಿದೆ. ರಾಹುಲ್ ಅವರು 9.24 ಕೋಟಿ ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದು, ಅವರ ಸ್ಥಿರ ಆಸ್ತಿ ಮೌಲ್ಯ 11.14 ಕೋಟಿ ರೂ.ಆಗಿದೆ.
ರಾಹುಲ್ ಅವರು 4.3 ಕೋಟಿ ರೂ. ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂ. ಮ್ಯೂಚುವಲ್ ಫಂಡ್ ಠೇವಣಿ, ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂ. ಮತ್ತು ಚಿನ್ನದ ಬಾಂಡ್ 15.21 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ರಾಹುಲ್ ಅವರ ಸ್ಥಿರಾಸ್ತಿಗಳಲ್ಲಿ ಅವರು 9.04 ಕೋಟಿ ರೂಪಾಯಿ ಮೌಲ್ಯದ ಮತ್ತು 2.10 ಕೋಟಿ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ.
ಸ್ಥಿರ ಆಸ್ತಿಗಳಲ್ಲಿ ನವದೆಹಲಿಯ ಮೆಹ್ರೌಲಿ ಗ್ರಾಮದ ಸುಲ್ತಾನ್‌ಪುರದಲ್ಲಿ ಸುಮಾರು 3.778 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜಂಟಿಯಾಗಿ ಹೊಂದಿದ್ದಾರೆ . ಜೊತೆಗೆ 5,838 ಚದರ ಅಡಿ ಅಳತೆಯ ಗುರುಗ್ರಾಮ್‌ನ ಸಿಗ್ನೇಚರ್ ಟವರ್ಸ್‌ನಲ್ಲಿರುವ ವಾಣಿಜ್ಯ ಅಪಾರ್ಟ್‌ಮೆಂಟ್‌ಗಳು (ಕಚೇರಿ ಸ್ಥಳ) ಸೇರಿವೆ.
ರಾಹುಲ್ ಅವರ ಕೈಯಲ್ಲಿ 55,000 ರೂ. ನಗದು ಹೊಂದಿದ್ದಾರೆ. ವೇತನ, ರಾಯಲ್ಟಿ, ಬಾಡಿಗೆ, ಬಾಂಡ್‌ಗಳಿಂದ ಬಂದ ಬಡ್ಡಿ, ಲಾಭಾಂಶ ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಬಂಡವಾಳ ಲಾಭಾಂಶ ಸೇರಿದಂತೆ 2022-23ರ ಆರ್ಥಿಕ ವರ್ಷದಲ್ಲಿ ಅವರ ಒಟ್ಟು ಆದಾಯ 1.02 ಕೋಟಿ ರೂ.ಗಳಷ್ಟಿದೆ. 4.2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದು, ಸುಮಾರು 49.7 ಲಕ್ಷ ರೂಪಾಯಿಗಳ ಹೊಣೆಗಾರಿಕೆಯನ್ನು ಹೊಂದಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications