ಒಂದು ವೇಳೆ ನೀವು ನ್ಯಾಯಬೆಲೆ ಅಂಗಡಿಗೆ ಅರ್ಜಿ ಹಾಕಲು ಯೋಚಿಸುತ್ತಿದ್ದರೇ, ನೀವು ಈ ಲೇಖನವನ್ನು ಓದಿ ಹೊಸ ಮಾನದಂಡದ ಬಗ್ಗೆ ತಿಳಿದುಕೊಳ್ಳಲೇಬೇಕು. ಏಕೆಂದರೆ ನ್ಯಾಯಬೆಲೆ ಅಂಗಡಿ ಇಟ್ಟಿರುವವರಿಗೆ ಕಹಿಸುದ್ದಿ ಸಿಕ್ಕಿದೆ. ಅದೇನೆಂದರೆ ಹೈಕೋರ್ಟ್ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಇನ್ಮುಂದೆ ನ್ಯಾಯಬೆಲೆ ಅಂಗಡಿ ಇಡಬೇಕೆಂದರೆ ಅಂಗಡಿ ಇಡುವ ಸ್ಥಳವು ಸೂಕ್ತ ವ್ಯಾಪಾರ ಆವರಣ ಆಗಿರಬೇಕು ಎಂದು ತಿಳಿಸಿದೆ. ಇದು ಕಾನೂನುಬದ್ಧವಾದ ಹೊಸ ಷರತ್ತಾಗಲಿದೆ. ಇದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಾಗಿದೆ.

ಹೌದು, ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ಅರ್ಜಿ ಹಾಕುವ ಪ್ರಕ್ರಿಯೆಗೂ, ಮಂಜೂರಾತಿಯ ಸಿಂಪಲ್ ಹಾದಿಗೂ ತಡೆಯಾಗಲಿದ್ದು, 'ಸೂಕ್ತ ವ್ಯಾಪಾರ ಆವರಣ' ಎಂಬ ಹೊಸ ಮಾನದಂಡ ಈಗ ಮುಖ್ಯವಾದ ಅಡ್ಡಕಟ್ಟೆಯಾಗುತ್ತಿದೆ. ಇದರಿಂದ ಅನೇಕ ಅಂಗಡಿದಾರರಿಗೆ ಶಾಕ್ ಎದುರಾಗಿದೆ. ಇಷ್ಟು ದಿನ ಈ ಸೂಕ್ತ ವ್ಯಾಪಾರ ಆವರಣ ಶಬ್ದ ನಿಯಮಗಳಲ್ಲಿ ಇದ್ದರೂ, ಅದಕ್ಕೆ ಸ್ಪಷ್ಟವಾಗಿ ಯಾವುದೇ ಅರ್ಥವಿರಲಿಲ್ಲ. ಆಗ ಅನೇಕ ಅರ್ಜಿಗಳನ್ನು ತಿರಸ್ಕರಿಸುವುದು ಎದ್ದು ಕಾಣುತ್ತಿತ್ತು. ಹೀಗಾಗಿ ಹೈಕೋರ್ಟ್ ಇದೀಗ ಖಡಕ್ ಆದೇಶ ನೀಡಿ, ಸರ್ಕಾರವನ್ನೇ ಈ ಶಬ್ದದ ವ್ಯಾಖ್ಯಾನ ಮಾಡಲು ಬಲವಂತಪಡಿಸಿದೆ.
ಸೂಕ್ತ ವ್ಯಾಪಾರ ಆವರಣ ಅಂದ್ರೆನು?
1992ರ ಅಗತ್ಯ ಸರಕುಗಳ ನಿಯಂತ್ರಣ ಆದೇಶದಲ್ಲಿ ಈ ಪದ ಬಳಕೆಯಾಗಿದದೆ. ಇದರ ಅರ್ಥ ನ್ಯಾಯಬೆಲೆ ಅಂಗಡಿಗಳನ್ನು ಎಲ್ಲಿ ತೆರೆಯಬೇಕು. ಅಂಡಗಿ ಇಡುವ ಜಾಗ ಎಷ್ಟಿರಬೇಕು. ಕಟ್ಟಡ ಹೇಗೆ ನಿರ್ಮಿತವಾಗಿರಬೇಕು. ಕಟ್ಟಡದಲ್ಲಿ ಎಷ್ಟು ಬೆಳಕು-ಗಾಳಿ ಇರಬೇಕು ಎಂಬ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಆದರೆ ಸರ್ಕಾರ ಮಾತ್ರ ಇವೆಲ್ಲದರ ಬಗ್ಗೆ ಯಾವುದೇ ಸ್ಪಷ್ಟ ನಿಯಮವನ್ನು ಈವರೆಗೆ ನೀಡಿರಲಿಲ್ಲ. ಹೀಗಾಗಿ, ಅಧಿಕಾರಿಗಳು ತಮ್ಮ ಇಚ್ಛೆಯಂತೆ "ಇದು ಸೂಕ್ತ ಅಲ್ಲ" ಎಂದು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ.
ಹೈಕೋರ್ಟ್ ನೀಡಿದ ಮಾರ್ಗಸೂಚಿಗಳೇನು..?
ಸೂಕ್ತ ವ್ಯಾಪಾರ ಆವರಣ ಪದಕ್ಕೆ ರಾಜ್ಯ ಸರ್ಕಾರವು ಸ್ಪಷ್ಟ ವ್ಯಾಖ್ಯಾನ ರೂಪಿಸಬೇಕು. ಹಾಗೂ ಸ್ಥಳಾಂತರದ ಪ್ರಕಾರ ವ್ಯತ್ಯಾಸವಾದ ಮಾನದಂಡಗಳು ಇರಬೇಕು. ಅಂದರೆ ಮಹಾನಗರ, ನಗರ, ಪಟ್ಟಣ ಮತ್ತು ಗ್ರಾಮ ಪ್ರದೇಶಗಳ ಅನುಸಾರ ಅಂಗಡಿಗಳಿರಬೇಕು. ಡಿಪೋ ಕಾರ್ಯಾಚರಣೆಗೆ ಬೇಕಾಗುವ ವಾತಾಯನ, ಸಂಗ್ರಹ ಸಾಮರ್ಥ್ಯ, ಸುರಕ್ಷತಾ ಅಂಶಗಳನ್ನು ನಿರ್ದಿಷ್ಟವಾಗಿ ಸೂಚಿಸಬೇಕು. ಆಹಾರ ಧಾನ್ಯಗಳ ಪೂರೈಕೆ ಮತ್ತು ಹಂಚಿಕೆಯ ಅಗತ್ಯತೆಗೆ ಅನುಗುಣವಾಗಿ ಪ್ರಾಮಾಣಿಕವಾಗಿ ತೀರ್ಮಾನಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ತೀರ್ಪಿಗೆ ಕಾರಣವಾಗಿದ್ದು ಮೈಸೂರು ಜಿಲ್ಲೆಯ ರಾಮನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ಅರ್ಜಿ. ಅವರು 2002ರಿಂದ ನ್ಯಾಯಬೆಲೆ ಅಂಗಡಿ ನಿರ್ವಹಿಸುತ್ತಿದ್ದರು. ಆದರೆ ಇನ್ನೊಬ್ಬ ಅರ್ಜಿದಾರರಾದ ಶಿವಕುಮಾರ್ ಅವರು ಮಂಜುನಾಥ್ ಅವರ ಅರ್ಹತೆಗೆ ಪ್ರಶ್ನೆ ಎತ್ತಿ, ನ್ಯಾಯಾಂಗದ ಬಾಗಿಲು ತಟ್ಟಿದರು. ಆ ಸಂಬಂಧಿತ ವಿವಾದದ ನಡುವೆ "ಸೂಕ್ತ ಆವರಣ" ಎಂಬ ಅಂಶವೇ ಪ್ರಮುಖವಾಗಿ ಎದ್ದು ಬಂದಿದೆ.
ಇನ್ನು ನ್ಯಾಯಬೆಲೆ ಅಂಗಡಿಗೆ ಅರ್ಜಿ ಹಾಕುವುದೆಂದರೆ ಅದು ಕೇವಲ ಒಂದು ಕೆಲಸವಲ್ಲ. ಅದು ಒಂದು ಕಾನೂನು ಪ್ರಕ್ರಿಯೆಯೂ ಆಗಿದೆ. ಹೀಗಾಗಿ ಎಲ್ಲವನ್ನೂ ಕಾನೂನಿನ ಅಡಿಯಲ್ಲಿಯೇ ಕಾರ್ಯಗತಗೊಳಿಸಬೇಕಾಗುತ್ತದೆ. ಸೂಕ್ತ ವ್ಯಾಪಾರ ಆವರಣ ಎಂಬ ಹೆಸರಿನಲ್ಲಿ ಬಂದಿರುವ ಹೊಸ ಮಾನದಂಡವು ಕೇವಲ ಕಾಗದದ ನಿಯಮವೂ ಅಲ್ಲ. ಅದು ಅದು ಅರ್ಜಿದಾರನ ಭವಿಷ್ಯವನ್ನು ನಿಭಾಯಿಸಬಲ್ಲ ಅಂಶವಾಗಿದೆ. ಈ ತೀರ್ಪಿನ ಬೆಳಕುದಲ್ಲಿ, ಇದೀಗ ಹಳೆಯ ಅಂಗಡಿದಾರರೂ ತಮ್ಮ ಅಂಗಡಿಯನ್ನು ಮರುಪರಿಶೀಲಿಸಿಕೊಳ್ಳಬೇಕಾದ ಅಗತ್ಯವಿದೆ. ವ್ಯಾಪಾರ ಆವರಣದಲ್ಲಿನ ಚುಕ್ಕಾನೆಗಳ ಕಾರಣಕ್ಕೆ ಸಾವಿರಾರು ಮಂದಿ ಅರ್ಹತೆಯಿಂದ ವಂಚಿತರಾಗಬಾರದು ಎಂಬ ಹಿತದೃಷ್ಟಿಯಿಂದಲೇ ಹೈಕೋರ್ಟ್ ಈ ಮಾರ್ಗಸೂಚಿಯನ್ನು ರೂಪಿಸಲು ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಅಂತಿಮವಾಗಿ ಹೇಳುವುದಾದದರೆ ಇನ್ನು ಮುಂದೆ ನ್ಯಾಯಬೆಲೆ ಅಂಗಡಿ ನಡೆಸಬೇಕು ಅಂದರೆ ಕೇವಲ ಅರ್ಜಿ ಸಲ್ಲಿಸಿ ಕಾದು ಕುಳಿತುಕೊಳ್ಳುವುದಲ್ಲ. ಆ ಅಂಗಡಿಯ ಸ್ಥಳ, ಗಾತ್ರ, ಸುರಕ್ಷತೆ, ಸಂಗ್ರಹ ಸಾಮರ್ಥ್ಯ, ಬೆಳಕು-ಗಾಳಿ ಇವೆಲ್ಲವೂ ಸರಿಯಾದ ಮಾನದಂಡಗಳನ್ನು ಪೂರೈಸಬೇಕು. ಇಲ್ಲದಿದ್ದರೆ, ಹೊಸ ಅರ್ಜಿ ತಿರಸ್ಕಾರವಾಗಬಹುದು, ಹಳೆಯ ಅಂಗಡಿ ಮರುಪರಿಶೀಲನೆಗೊಳಗಾಗಬಹುದು.


Click it and Unblock the Notifications