ಭಾರತೀಯ ರೈಲ್ವೇ ಇಲಾಖೆ (Indian Railways) ಪ್ರಯಾಣಿಕರ ಅನುಕೂಲಕ್ಕಾಗಿ ಸದಾ ಏನಾದರೊಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಭಾರತದ ಹೈಸ್ಪೀಡ್ ರೈಲು ಜಾಲದ (Highspeed Railways) ವಿಸ್ತರಣೆಗೆ ಮಹತ್ವದ ಪ್ರಸ್ತಾವನೆ ಸಿದ್ಧವಾಗಿದೆ. ಇದರಿಂದ ಕರ್ನಾಟಕಕ್ಕೆ ದೊಡ್ಡ ಪ್ರಯೋಜನ ನೀಡುವ ನಿರೀಕ್ಷೆಯಿದೆ. ಬೆಂಗಳೂರು, ಬೆಳಗಾವಿ ಮತ್ತು ಮುಂಬೈ ನಗರಗಳನ್ನು ಸಂಪರ್ಕಿಸುವ ಸಂಭಾವ್ಯ ರೈಲ್ವೇ ಕಾರಿಡಾರ್‌ಗೆ ಪ್ರಸ್ತಾವನೆಗಳು ಸಿದ್ಧಗೊಂಡಿದ್ದು, ಯಾವಾಗ ಆರಂಭವಾಗುತ್ತೆ ಎಂದು ಕಾದುನೋಡಬೇಕಿದೆ. ಒಂದು ವೇಳೆ ಈ ಯೋಜನೆಗೆ ಅನುಮೋದನೆ ಸಿಕ್ಕರೆ, ಈ ಯೋಜನೆಯು ರಾಜ್ಯಗಳ ನಡುವಿನ ಪ್ರಯಾಣ ಸಮಯ ಕಡಿಮೆ ಮಾಡುವುದಲ್ಲದೆ, ದಕ್ಷಿಣ ಮತ್ತು ಪಶ್ಚಿಮ ಭಾರತದ ಆರ್ಥಿಕ ಸಂಪರ್ಕ ಬಲಪಡಿಸಲಿದೆ.

ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಜಿಲ್ಲೆಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕುರಿತು ಹಲವಾರು ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಿದ ನಂತರ ಈ ಯೋಜನೆ ಇದೀಗ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ, ಬೆಂಗಳೂರು-ಬೆಳಗಾವಿ-ಮುಂಬೈ ಮಾರ್ಗವನ್ನು ದೇಶದ 8ನೇ ಹೈಸ್ಪೀಡ್ ರೈಲು ಕಾರಿಡಾರ್ ಆಗಿ ಪರಿಗಣಿಸುವಂತೆ ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಬಜೆಟ್ ಬೆನ್ನಲ್ಲೇ ಹೊಸ ನಿರ್ಧಾರ!
2026-27ರ ಕೇಂದ್ರ ಬಜೆಟ್‌ನಲ್ಲಿ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಮುಖ ನಗರಗಳಾದ್ಯಂತ ಪರಿಚಯಿಸುವ ಘೋಷಣೆ ಮಾಡಿದೆ. ಈ ಘೋಷಣೆ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರ ಪ್ರಸ್ತಾವನೆ ಮಹತ್ವ ಪಡೆದಿದೆ. ಬೆಳಗಾವಿ ಮೂಲಕ ಇಂತಹ ಹೈಸ್ಪೀಡ್ ಕಾರಿಡಾರ್, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರೀ ಅನುಕೂಲವಾಗಲಿದೆ. ಅಲ್ಲದೇ, ವಿಶೇಷವಾಗಿ ಮಾರ್ಗದ ಉದ್ದಕ್ಕೂ ಇರುವ ಸಣ್ಣ ಪಟ್ಟಣಗಳು ಮತ್ತು ಅರೆ-ನಗರ ಕೇಂದ್ರಗಳಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈಸ್ಪೀಡ್ ರೈಲು ಪ್ರಸ್ತಾವನೆಯ ಜೊತೆಗೆ, ಪ್ರದೇಶದಲ್ಲಿನ ಸಾಂಪ್ರದಾಯಿಕ ರೈಲ್ವೆ ಮೂಲಸೌಕರ್ಯ ಸುಧಾರಣೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಪರಕನಟ್ಟಿ-ಗೋಕಾಕ್-ಯಾದವಾಡ ಮಾರ್ಗದ ಮೂಲಕ ಬಾಗಲಕೋಟೆ ನಗರವನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗದ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಮಾರ್ಗವು ಹಲವು ಸಿಮೆಂಟ್ ಮತ್ತು ಸಕ್ಕರೆ ಕೈಗಾರಿಕೆಗಳು ಇರುವ ಪ್ರದೇಶಗಳ ಮೂಲಕ ಹಾದು ಹೋಗುವುದರಿಂದ, ಕೈಗಾರಿಕಾ ಸಾಗಾಣಿಕೆ ಮತ್ತು ಪ್ರಯಾಣಿಕರ ಸಂಚಾರ ಸುಧಾರಣೆಗೆ ಇದು ಆಯಕಟ್ಟಿನ ಪ್ರಮುಖವಾಗಿದೆ ಎಂದು ಸಂಸದರು ವಿವರಿಸಿದರು.
ವಂದೇ ಭಾರತ್ ಸಂಚಾರದಲ್ಲಿ ಬದಲಾವಣೆ?
ಅಲ್ಲದೇ ಈ ಸಭೆಯಲ್ಲಿ, ಬೆಳಗಾವಿ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊರಡುವ ಸಮಯವನ್ನು ಪರಿಷ್ಕರಿಸುವಂತೆ ಮನವಿ ಮಾಡಲಾಯಿತು. ಪ್ರಸ್ತುತ ಬೆಳಗಿನ 5:35ರ ಬದಲಿಗೆ 6:15ಕ್ಕೆ ಹೊರಡುವಂತೆ ಸಮಯವನ್ನು ಬದಲಾಯಿಸಲು ಮನವಿ ಮಾಡಲಾಗಿದೆ. ಈ ಬದಲಾವಣೆಯು ಪ್ರಯಾಣಿಕರಿಗೆ ಸೇವೆಯನ್ನು ಇನ್ನಷ್ಟು ಸುಲಭ ಹಾಗೂ ಅನುಕೂಲಕರವಾಗಿಸಲಿದೆ ಎಂದು ಹೇಳಲಾಗಿದೆ. ಈ ಮೂಲಕ ಕರ್ನಾಟಕ ರೈಲ್ವೇ ಹೊಸ ಮೈಲಿಗಲ್ಲನ್ನ ನಿರ್ಮಿಸಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications