ಸ್ಯಾಂಡಲ್ ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

ಸ್ಯಾಂಡಲ್ ವುಡ್‌ನಲ್ಲಿ ಸ್ಟಾರ್ ನಟರ ಸಂಭಾವನೆ, ಆ ಸಿನಿಮಾದ ಬಜೆಟ್, ಲಾಭ ಎಲ್ಲವೂ ಚರ್ಚೆಯಾಗುತ್ತೆ. ಆದರೆ ನಟಿಯರ ಸಂಭಾವನೆ ಕುರಿತು ಸಿನಿ ಅಭಿಮಾನಿಗಳು ಅಷ್ಟಾಗಿ ಗಮನ ಹರಿಸಲ್ಲ.

ಬೇಡಿಕೆ ಇದ್ದವರಿಗೆ ಮಾತ್ರ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಂಭಾವನೆ ಕೊಡಲಾಗುತ್ತೆ ಎನ್ನುವುದು ವಾಸ್ತವ. ಎಷ್ಟೇ ದೊಡ್ಡ ನಟಿಯಾದರೂ ಬೇಡಿಕೆ ಕುಸಿದರೆ ಸಂಭಾವನೆಯೂ ಸಹಜವಾಗಿ ಕಮ್ಮಿಯಾಗುತ್ತೆ. ಸಿನಿಮಾಗಳು ಕಮ್ಮಿಯಾಗುತ್ತೆ. ಒಂದು ಕಾಲದಲ್ಲಿ ಟಾಪ್ ನಟಿಯರಾಗಿ ಮಿಂಚಿದ್ದ ತಾರೆಯರು ಇಂದು ಕಡಿಮೆ ಸಂಭಾವನೆ ಪಡೆದು ನಟಿಸುತ್ತಿದ್ದಾರೆ.

ಒಂದೇ ಸಿನಿಮಾ ಮಾಡಿ ಸ್ಟಾರ್ ಆದವರು, ಸಂಭಾವನೆಯನ್ನು ಕೂಡ ಡಬಲ್, ತ್ರಿಬಲ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಬ್ಯುಸಿಯಾಗಿರುವ ನಟಿಯರು ಯಾರು? ಒಂದು ಸಿನಿಮಾಗೆ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು? ಯಾರಿಗೆ ಸಿಗುತ್ತಿದೆ ಹೆಚ್ಚು ಸಂಭಾವನೆ ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ.

ರಶ್ಮಿಕಾಗೆ ಬೇಡಿಕೆ ಜಾಸ್ತಿ, ಸಿನಿಮಾ ಕಮ್ಮಿ

ರಶ್ಮಿಕಾಗೆ ಬೇಡಿಕೆ ಜಾಸ್ತಿ, ಸಿನಿಮಾ ಕಮ್ಮಿ

'ಕಿರಿಕ್ ಪಾರ್ಟಿ' ಸಿನಿಮಾದ ಬಳಿಕ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ರಶ್ಮಿಕಾ ಮಂದಣ್ಣ ಈಗ ಸ್ಯಾಂಡಲ್ ವುಡ್ ಪಾಲಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ತೆಲುಗು, ತಮಿಳಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿರುವ ರಶ್ಮಿಕಾ, ಕನ್ನಡದಲ್ಲಿ ಸಿನಿಮಾ ಮಾಡೋದು ಕಮ್ಮಿ ಮಾಡಿದ್ದಾರೆ. ಅದಕ್ಕೆ ಕಾರಣ, ರಶ್ಮಿಕಾ ಅವರ ದುಬಾರಿ ಸಂಭಾವನೆ. ಗಾಂಧಿನಗರದ ಕೆಲವು ನಿರ್ದೇಶಕ, ನಿರ್ಮಾಪಕರು ಹೇಳಿದ ಪ್ರಕಾರ ಕನ್ನಡದಲ್ಲಿ ರಶ್ಮಿಕಾ ಒಂದು ಸಿನಿಮಾ ಮಾಡಲು 60-65 ಲಕ್ಷ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಾರಂತೆ. ತೆಲುಗು ಮತ್ತು ತಮಿಳಿನಲ್ಲಿ ಇದಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

ಓಡುವ ಕುದುರೆ ರಚಿತಾ ರಾಮ್

ಓಡುವ ಕುದುರೆ ರಚಿತಾ ರಾಮ್

ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡುವ ರಚಿತಾ ಸದ್ಯ ಸ್ಯಾಂಡಲ್ ವುಡ್‌ನಲ್ಲಿ ಬೇಡಿಕೆಯ ನಟಿ. ಒಂದು ಸಮಯದಲ್ಲಿ ರಕ್ಷಿತಾ, ರಮ್ಯಾ ಇದ್ದಂತೆ ಈಗ ರಚಿತಾ ಟ್ರೆಂಡ್ ನಡೆಯುತ್ತಿದೆ. ಸ್ಟಾರ್ ನಟರ ಚಿತ್ರಗಳ ಜೊತೆ ಹೊಸಬರ ಚಿತ್ರಗಳಿಗೂ ರಚಿತಾ ಲಕ್ಕಿ ಎನಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ರಚಿತಾ ರಾಮ್ ಒಂದು ಸಿನಿಮಾಗೆ 35-40 ಲಕ್ಷದವರೆಗೂ ಚಾರ್ಜ್ ಮಾಡ್ತಾರಂತೆ.

 

ಶಾನ್ವಿ ಶ್ರೀವಾಸ್ತವ್

ಶಾನ್ವಿ ಶ್ರೀವಾಸ್ತವ್

ತೆಲುಗಿನಲ್ಲಿ ಸಿನಿ ಜರ್ನಿ ಆರಂಭಿಸಿ, ಈಗ ಕನ್ನಡದಲ್ಲೇ ಉಳಿದುಕೊಂಡಿರುವ 'ಮಾಸ್ಟರ್ ಪೀಸ್' ಖ್ಯಾತಿಯ ಶಾನ್ವಿ ಶ್ರೀವಾಸ್ತವ್ ಇಂಡಸ್ಟ್ರಿಯಲ್ಲಿ ಬೇಡಿಕೆ ಹೊಂದಿದ್ದಾರೆ. ಆದರೆ, ಕಳೆದ ನಾಲ್ಕೈದು ವರ್ಷದಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾತ್ರ ಮಾಡ್ತಿದ್ದಾರೆ ಶಾನ್ವಿ. ಮೂಲಗಳ ಪ್ರಕಾರ, ಶಾನ್ವಿ ಒಂದು ಸಿನಿಮಾ 20-25 ಲಕ್ಷ ಸಂಭಾವನೆ ಪಡೆಯುತ್ತಾರಂತೆ.

ಶ್ರದ್ಧಾ ಸಂಭಾವನೆ ಗಗನಕ್ಕೆ

ಶ್ರದ್ಧಾ ಸಂಭಾವನೆ ಗಗನಕ್ಕೆ

ಉರ್ವಿ ಸಿನಿಮಾ ಬಳಿಕ ತೆಲುಗು, ತಮಿಳು, ಹಿಂದಿಯಲ್ಲಿ ಹೆಚ್ಚು ಬ್ಯುಸಿಯಾದ ಶ್ರದ್ಧಾ ಶ್ರೀನಾಥ್, ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾ ಮಾಡ್ತಿದ್ದಾರೆ. ಹಾಗಿದ್ದರೂ ಬೇಡಿಕೆ ಮಾತ್ರ ಕಮ್ಮಿಯಾಗಿಲ್ಲ. ಸೆಲೆಕ್ಟೆಡ್ ಸಿನಿಮಾಗಳನ್ನ ಮಾತ್ರ ಮಾಡುವ ಶ್ರದ್ಧಾ ಶ್ರೀನಾಥ್, ಕನ್ನಡದಲ್ಲಿ ಒಂದು ಸಿನಿಮಾಗೆ 20 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರಂತೆ. ಬೇರೆ ಭಾಷೆಯಲ್ಲಿ ಇದಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತಿದೆ.

ರಾಗಿಣಿ ಎಷ್ಟು ಪಡೆಯುತ್ತಾರೆ?

ರಾಗಿಣಿ ಎಷ್ಟು ಪಡೆಯುತ್ತಾರೆ?

ಸ್ಯಾಂಡಲ್ ವುಡ್‌ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಕಳೆದ ಎರಡು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ದಾರೆ. ಸಕ್ಸಸ್ ನಲ್ಲಿ ಸೋಲು-ಗೆಲುವು ಕಾಣುತ್ತಿರುವ ರಾಗಿಣಿ ಸಿನಿಮಾವೊಂದಕ್ಕೆ 15-20 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

 

ಆಶಿಕಾ ರಂಗನಾಥ್

ಆಶಿಕಾ ರಂಗನಾಥ್

ಮುಗುಳುನಗೆ, ರಾಜು ಕನ್ನಡ ಮೀಡಿಯಂ, Rambo 2, ತಾಯಿಗೆ ತಕ್ಕ ಮಗ ಅಂತಹ ಸಿನಿಮಾಗಳಲ್ಲಿ ಮೋಡಿ ಮಾಡಿರುವ ಆಶಿಕಾ ರಂಗನಾಥ್ ಅವರಿಗೂ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿದೆ. ಆಶಿಕಾ ಒಂದು ಸಿನಿಮಾಗೆ 15 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ರೇಮೊ, ಅವತಾರ್ ಪುರುಷ, ರಂಗಮಂದಿರ ಅಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅಧಿತಿ ಪ್ರಭುದೇವ

ಅಧಿತಿ ಪ್ರಭುದೇವ

ಸದ್ಯ, ಗಾಂಧಿನಗರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ನಟಿ ಅದಿತಿ ಪ್ರಭುದೇವ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುತ್ತಿರುವ ಅದಿತಿ, ಒಂದು ಸಿನಿಮಾಗೆ 8-10 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಬ್ರಹ್ಮಾಚಾರಿ, ತೋತಾಪುರಿ, ದಿಲ್ಮಾರ್, ಒಂಬತ್ತನೇ ದಿಕ್ಕು ಅಂತಹ ಚಿತ್ರಗಳು ಇವರ ಕೈಯಲ್ಲಿದೆ.

ಮಾನ್ವಿತಾ ಕಾಮತ್

ಮಾನ್ವಿತಾ ಕಾಮತ್

ಕೆಂಡಸಂಪಿಗೆ, ಟಗರು ಅಂತಹ ಚಿತ್ರಗಳ ಮೂಲಕ ಸ್ಟಾರ್ ನಟಿ ಆದ ಮಾನ್ವಿತಾ ಕಾಮತ್ ಕೂಡ ಸದ್ಯದ ನಾಯಕಿಯರ ಪೈಕಿ ರೇಸ್ ನಲ್ಲಿದ್ದಾರೆ. ರಿಲೆಕ್ಸ್ ಸತ್ಯ, ದಾರಿ ತಪ್ಪಿದ ಮಗ, ಇಂಡಿಯಾ ವರ್ಸಸ್ ಇಂಗ್ಲೆಂಡ್, ರಾಜಸ್ತಾನ್ ಡೈರೀಸ್, ರೈನ್ ಬೋ ಅಂತಹ ಚಿತ್ರಗಳನ್ನ ಕೈಯಲ್ಲಿಟ್ಟುಕೊಂಡಿರುವ ಮಾನ್ವಿತಾ ಒಂದು ಸಿನಿಮಾ 6 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+