ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಆದಾಯ ಗಳಿಕೆಯ ಬಗ್ಗೆ ಅಭಿಮಾನಿಗಳಿಗೆ ಭಾರೀ ಕುತೂಹಲ ಇರುತ್ತದೆ. ಯಾವ ಸ್ಟಾರ್ ಪ್ಲೇಯರ್ ವರ್ಷಕ್ಕೆ ಎಷ್ಟು ಸಂಪಾದನೆ ಮಾಡ್ತಾನೆ? ತೆರಿಗೆ ಎಷ್ಟು ಪಾವತಿ ಮಾಡ್ತಾರೆ? ಎಂಬುವುದರ ಬಗ್ಗೆ ಆಸಕ್ತಿ ತುಸು ಹೆಚ್ಚಿರುತ್ತದೆ.ಅದರಲ್ಲೂ 1983ರ ವಿಶ್ವಕಪ್ ವಿನ್ ಆದ ನಂತರ ದೇಶದಲ್ಲಿ ಹೆಚ್ಚಿನ ಜನರು ಕ್ರಿಕೆಟ್ ಹೆಚ್ಚು ನೋಡುತ್ತಾರೆ. ಹಾಗೆಯೇ ಕ್ರಿಕೆಟ್ ಆಟಗಾರರು ಗಳಿಕೆಯ ಜೊತೆಗೆ ಬ್ರ್ಯಾಂಡ್ ಡೀಲ್‌ಗಳು ಮತ್ತು ಎಂಡಾರ್ಸ್‌ಮೆಂಟ್‌ಗಳ ಮೂಲಕ ಸಂಪಾದನೆ ಮಾಡಿದ್ದಾರೆ. ಹಾಗಿದ್ರೆ ಅವರು ಗಳಿಸಿದ ಹಣಕ್ಕೆ ಪ್ರತಿ ವರ್ಷ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯೂ ಎಷ್ಟು ಎಂಬುವುದನ್ನು ತಿಳಿಯೋಣ ಬನ್ನಿ...
ಹೌದು, 1983 ರ ವಿಶ್ವಕಪ್ ಗೆದ್ದ ನಂತರದಿಂದ ದೇಶದಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಅನುಸರಿಸುವ ಜನಪ್ರಿಯವಾದ ಕ್ರೀಡೆಯಾಗಿದೆ. ಅದರಲ್ಲೂ 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭದ ನಂತರ ಕ್ರಿಕೆಟಿಗರ ಆದಾಯ ಮತ್ತಷ್ಟು ಹೆಚ್ಚಾಗಿದ್ದು, ಕ್ರಿಕೆಟ್ ಸಂಭಾವನೆ ಜೊತೆಗೆ ಎಂಡಾರ್ಸ್‌ಮೆಂಟ್ ಡೀಲ್‌ಗಳು ಆಟಗಾರನ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತವೆ. ಹೆಚ್ಚು ಗಳಿಕೆಯಿಂದ ಈ ತಾರೆಯರು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯೂ ಸಹ ಏರುತ್ತದೆ. ಹಾಗಿದ್ರೆ ಯಾವೆಲ್ಲಾ ಕ್ರಿಕೆಟ್ ಆಟಗಾರರು ಈ ವರ್ಷದಲ್ಲಿ ಎಷ್ಟು ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ
ಕಿಂಗ್ ಕೊಹ್ಲಿ, ಶತಕಗಳ ಸರದಾರ ಅರ್ ಸಿಬಿ ಹುಲಿ ಎಂದೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ. ಇತರೆ ಎಲ್ಲಾ ಕ್ರಿಕೆಟಿಗರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ ಸುಮಾರು 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಕ್ರಿಕೆಟ್‌ನಿಂದ ಬ್ರೇಕ್ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.
ಎಂ ಎಸ್ ಧೋನಿ
ಭಾರತದ ಪ್ರೀತಿಯ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಎಂ.ಎಸ್. ಧೋನಿ ಇಂದಿಗೂ ಅನೇಕರ ಫೆವರಿಟ್ ಕ್ರಿಕೆಟರ್ ಆಗಿ ಇವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರು ಎರಡು ಬಾರಿ ಭಾರತ ತಂಡಕ್ಕೆ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. ಇವರು ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಆದಾಯ ಕೂಡ ಕಡಿಮೆ ಏನಿಲ್ಲ. ಸಾಕಷ್ಟು ಬ್ರಾಂಡ್ಗಳ ಎಂಡಾರ್ಸ್‌ಮೆಂಟ್ ಮೂಲಕ ಮಾಹಿ ಹಣ ಗಳಿಸುತ್ತಿದ್ದಾರೆ. ಇವರು 2023-24ನೇ ಸಾಲಿನಲ್ಲಿ 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ.ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್ ಅವರನ್ನು ಲಿಟಲ್ ಮಾಸ್ಟರ್ ಎಂದು ಸಹ ಇವರನ್ನು ಕರೆಯುತ್ತಾರೆ. ಇವರು ಕ್ರಿಕೆಟ್ ಆದಾಯ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ನಿವೃತ್ತಿ ಪಡೆದು ದಶಕಗಳೇ ಕಳೆದು ಹೋಗಿದ್ದರೂ ಸಚಿನ್ ಬ್ರಾಂಡ್ ಮೌಲ್ಯ ಮಾತ್ರ ಕಡಿಮೆನೇ ಆಗಿಲ್ಲ. ಸಚಿನ್ 2023-24ನೇ ಸಾಲಿನಲ್ಲಿ 28 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸೌರವ್ ಗಂಗೂಲಿ
ಸೌರವ್ ಚಂದಿದಾಸ್ ಗಂಗೂಲಿ ಅವರು ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು.ಇವರ ಸಹ ಆಟಗಾರರು ಪ್ರೀತಿಯಿಂದ 'ದಾದಾ'ಯೆಂದು ಕರೆಯುತ್ತಾರೆ. ಸೌರವ್ ಗಂಗೂಲಿ ಭಾರತೀಯ ಪ್ರಿಮಿಯರ್ ಲೀಗ್ ನ ಕೊಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರು ಮತ್ತು 'ಐಕಾನ್ ಆಟಗಾರ'. ಸೌರವ್ ೨೦೦೮ರ ಆಸ್ಟ್ರೇಲಿಯಾ ತಂಡದ ವಿರುದ್ಧ್ದದ ಟೆಸ್ಟ್ ಸರಣಿಯ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿರುವ ಸೆಲೆಬ್ರಿಟಿ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೌರವ್ ಗಂಗೂಲಿ 23 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
ಹಾರ್ದಿಕ್ ಪಾಂಡ್ಯ
ಭಾರತದ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ.ಇವರು ಮಧ್ಯಮ ಕ್ರಮಾಂಕದಲ್ಲಿ ಬಲಗೈ ಬ್ಯಾಟಿಂಗ್ ಮತ್ತು ಬಲಗೈ ವೇಗದ ಮಧ್ಯಮ ಎಸೆತಗಳನ್ನು ಬೌಲ್ ಮಾಡುವ ಆಲ್ ರೌಂಡರ್. ಪ್ರಸ್ತುತ ಇವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಇವರು ಸರ್ಕಾರಕ್ಕೆ 13 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ. ಇವರು ಇತ್ತೀಚಿಗೆ ವೈಯತ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಹೆಚ್ಚಾಗಿ ಸುದ್ದಿಯಲ್ಲಿದ್ದರು.
ಒಟ್ಟಾರೆ ಪಟ್ಟಿಯಲ್ಲಿ ಹೇಳುವುದಾದರೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಎಲ್ಲರಿಗಿಂತಾ ಮುಂದಿದ್ದಾರೆ. ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿರುವ ಶಾರುಖ್, ವರದಿಯ ಪ್ರಕಾರ 92 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.


Click it and Unblock the Notifications