ಹಿಂಡೆನ್‌ಬರ್ಗ್ ವರದಿ: ಅದಾನಿ ಗ್ರೂಪ್‌ನಿಂದ ಆರ್ಥಿಕ ಅಪರಾಧ? ತನಿಖೆ ತೀವ್ರಗೊಳಿಸಿದ SEBI

ಮುಂಬೈ, ಜನವರಿ 27: Hindenburg report ಬಂದ ನಂತರ ಮಾರುಕಟ್ಟೆ ನಿಯಂತ್ರಕ ಸೆಬಿ ಕಳೆದ ವರ್ಷದಲ್ಲಿ ಅದಾನಿ ಗ್ರೂಪ್‌ನ ವ್ಯವಹಾರಗಳ ಪರಿಶೀಲನೆಯನ್ನು ಹೆಚ್ಚಿಸಿದೆ. ಅದಾನಿ ಗ್ರೂಪ್‌ನ ವಿದೇಶಿ ಬಂಡವಾಳ ಹೂಡಿಕೆದಾರರ ಬಗ್ಗೆ ತನ್ನದೇ ಆದ ಪ್ರಾಥಮಿಕ ತನಿಖೆಯನ್ನು ಸೆಬಿ ನಡೆಸುತ್ತಿದೆ. ಹಿಂಡೆನ್‌ಬರ್ಗ್ ರಿಸರ್ಚ್ ನೀಡಿದ ವರದಿಯನ್ನು SEBI ಅಧ್ಯಯನ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿಸಂಸ್ಥೆ 'ರಾಯಟರ್ಸ್‌' ವರದಿ ಮಾಡಿದೆ. ಅದಾನಿ ಗ್ರೂಪ್‌ನ ಕಡಲಾಚೆಯ ತೆರಿಗೆ ವ್ಯವಸ್ಥೆಯ ಅಸಮರ್ಪಕ ಬಳಕೆ ಮತ್ತು ಹೆಚ್ಚಿದ ಸಾಲದ ಬಗ್ಗೆ ಸೆಬಿ ಆತಂಕ ವ್ಯಕ್ತಪಡಿಸಿದೆ.

'ಅದಾನಿ ಗ್ರೂಪ್ ನಡೆಸುತ್ತಿರುವ ಎಲ್ಲಾ ವಹಿವಾಟುಗಳನ್ನು SEBI ಪರಿಶೀಲಿಸುತ್ತಿದೆ. ಈ ವಿಚಾರವು ಗೌಪ್ಯವಾಗಿದೆ' ಎಂದು ತಿಳಿದುಬಂದಿದೆ.

ನಾವು ಇಮೇಲ್ ಮೂಲಕ ಪ್ರಶ್ನೆಗಳು ಕೇಳಿದ್ದೇವೆ. ಫೋನ್ ಕರೆಗಳಿನ್ನು ಮಾಡಿದ್ದೇವೆ. ಇದಕ್ಕೆ ಅದಾನಿ ಗ್ರೂಪ್‌ ಉತ್ತರಿಸಿಲ್ಲ ಎಂದು SEBI ಆರೋಪಿಸಿದೆ.

ತನಿಖೆ ತೀವ್ರಗೊಳಿಸಿದ SEBI: ಅದಾನಿ ಗ್ರೂಪ್‌ನಿಂದ ಆರ್ಥಿಕ ಅಪರಾಧ?

ಅದಾನಿ ಈ ವಾರದ ಆರಂಭದಲ್ಲಿ ಹಿಂಡೆನ್‌ಬರ್ಗ್ ವರದಿಯನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ನ್ಯೂಯಾರ್ಕ್ ಮೂಲದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಎಂಬುದನ್ನು ಪರಿಗಣಿಸುವುದಾಗಿ ಅದಾನಿ ಹೇಳಿದ್ದಾರೆ.

ಕಂಪನಿಯ ನಿರ್ದಿಷ್ಟ ವಿಷಯಗಳು ಮತ್ತು ನಡೆಯುತ್ತಿರುವ ತನಿಖೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಚರ್ಚಿಸುವುದಿಲ್ಲ ಎಂದು SEBI ವಕ್ತಾರರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್‌ನಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಹೋಲ್ಸಿಮ್ ಲಿಮಿಟೆಡ್‌ನ ಪಾಲನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡಿತ್ತು. ಆ ಸಂದರ್ಭದಲ್ಲಿ, ಅದಾನಿ ಗ್ರೂಪ್‌ ವಹಿವಾಟಿಗೆ ಬಳಸಿದ ಕಡಲಾಚೆಯ ವಿಶೇಷ ಉದ್ದೇಶದ ಎಸ್‌ಪಿವಿಯನ್ನು ಪರಿಶೀಲಿಸಿಲಿಸಲಾಗಿದೆ ಎಂದು SEBI ಹೇಳಿದೆ.

ತನಿಖೆ ತೀವ್ರಗೊಳಿಸಿದ SEBI: ಅದಾನಿ ಗ್ರೂಪ್‌ನಿಂದ ಆರ್ಥಿಕ ಅಪರಾಧ?

ಇದಕ್ಕೆ ಸಂಬಂಧಿಸಿದ SPV ಯ ಬಳಕೆಯನ್ನು ಮೇ 2022 ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಘೋಷಣೆಯ ಭಾಗವಾಗಿ ಅದಾನಿ ಗ್ರೂಪ್‌ ಬಹಿರಂಗಪಡಿಸಿದೆ. ಕಡಲಾಚೆಯ ವಹಿವಾಟಿನ ಧನಸಹಾಯದಲ್ಲಿ ಒಳಗೊಂಡಿರುವ 17 ವಿದೇಶಿ ಘಟಕಗಳನ್ನು SEBI ಗುರುತಿಸಿದೆ.

2022 ನೇ ವರ್ಷದ ಕ್ಲಿಯರೆನ್ಸ್‌ಗಾಗಿ ಅದಾನಿ ಗ್ರೂಪ್‌ ಸೆಬಿಯನ್ನು ಸಂಪರ್ಕಿಸಿದಾಗ ಈ ಘಟಕಗಳ ಬಗ್ಗೆ ಸ್ಪಷ್ಟತೆ ಕೇಳಲಾಗಿತ್ತು. ಈ ಪ್ರತಿಕ್ರಿಯೆಗಳು ಪರೀಕ್ಷೆಯ ಹಂತದಲ್ಲಿವೆ ಎಂದು ಸೆಬಿ ತಿಳಿಸಿದೆ.

ತನಿಖೆ ತೀವ್ರಗೊಳಿಸಿದ SEBI: ಅದಾನಿ ಗ್ರೂಪ್‌ನಿಂದ ಆರ್ಥಿಕ ಅಪರಾಧ?

ಅದಾನಿ ಗ್ರೂಪ್‌ ಕುರಿತು ಹಿಂಡೆನ್‌ಬರ್ಗ್‌ನ ವರದಿ ನಡಿದೆ. ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನಿಂದ $2.45 ಶತಕೋಟಿ ದ್ವಿತೀಯ ಷೇರು ಮಾರಾಟದ ನಡುವೆ ಈ ವರದಿ ಪ್ರಕಟಗೊಂಡಿದೆ. ಕಳೆದ ಮೂರು ದಿನಗಳಿಂದ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+