ಯುನೈಟೆಡ್ ಕಿಂಗ್ ಡಮ್ ನಲ್ಲಿ ಇರುವ ಶ್ರೀಮಂತ ಹಿಂದುಜಾ ಕುಟುಂಬದ ಕಾನೂನು ವ್ಯಾಜ್ಯವೊಂದು ಬಹಿರಂಗವಾಗಿದೆ. ಈ ಕುಟುಂಬಕ್ಕೆ ಸೇರಿದ 1120 ಕೋಟಿ ಅಮೆರಿಕನ್ ಡಾಲರ್ ಆಸ್ತಿಯ ಭವಿಷ್ಯಕ್ಕೆ ಸಂಬಂಧಪಟ್ಟ ಈ ವ್ಯಾಜ್ಯ ಈಗ ಎಲ್ಲರ ಗಮನ ಸೆಳೆದಿದೆ. 2014ರ ಈ ದಾಖಲೆ ಪ್ರಕಾರ, ಒಬ್ಬ ಸೋದರ ಹೊಂದಿರುವ ಆಸ್ತಿಯು ಎಲ್ಲರಿಗೂ ಸೇರಿದ್ದು. ಪ್ರತಿಯೊಬ್ಬರು ಇತರರನ್ನು ಎಕ್ಸ್ ಕ್ಯೂಟರ್ಸ್ ಆಗಿ ನೇಮಿಸಿದ್ದಾರೆ.
ಆದರೆ, ಕುಟುಂಬದ ಹಿರಿಯರಾದ 84 ವರ್ಷದ ಶ್ರೀಚಂದ್ ಹಿಂದುಜಾ ಹಾಗೂ ಅವರ ಮಗಳು ವಿನೂ ಮಾತ್ರ ಈ ಪತ್ರಕ್ಕೆ ಯಾವುದೇ ಬೆಲೆ ಇಲ್ಲ ಎನ್ನುತ್ತಿದ್ದಾರೆ. ಲಂಡನ್ ನಲ್ಲಿ ಜಡ್ಜ್ ಮಂಗಳವಾರ ಆದೇಶ ನೀಡಿದಾಗ ಈ ಕುಟುಂಬ ವ್ಯಾಜ್ಯವು ಬಹಿರಂಗವಾಗಿದೆ. ಅವರು ಹೇಳಿರುವ ಪ್ರಕಾರ, ಮೂವರು ಸೋದರರಾದ ಗೋಪಿಚಂದ್, ಪ್ರಕಾಶ್ ಹಾಗೂ ಅಶೋಕ್ ಸೇರಿಕೊಂಡು ಶ್ರೀಚಂದ್ ಒಬ್ಬರ ಹೆಸರಲ್ಲೇ ಇರುವ ಹಿಂದುಜಾ ಬ್ಯಾಂಕ್ ಅನ್ನು ಹತೋಟಿಗೆ ತೆಗೆದುಕೊಳ್ಳಲು ಆ ಪತ್ರವನ್ನು ಪ್ರಯತ್ನಿಸುತ್ತಿದ್ದಾರೆ.
ಎಲ್ಲವೂ ಎಲ್ಲರಿಗೂ ಸೇರಿದ್ದು ಮತ್ತು ಯಾವುದೂ ಒಬ್ಬರಿಗೆ ಸೇರಿದ್ದಲ್ಲ
ಆ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಹಾಗೂ ಅದನ್ನು ವಿಲ್ ಅಂತ ಪರಿಗಣಿಸಲಾಗದು ಎಂದು ಘೋಷಿಸಬೇಕು ಎಂಬುದು ಶ್ರೀಚಂದ್ ಹಾಗೂ ವಿನೂ ಅವರ ಅಪೇಕ್ಷೆ. ವಿನೂ ಈಗ ಹೇಳುತ್ತಿರುವಂತೆ, 2016ರ ಜುಲೈ ಪತ್ರದ ಪ್ರಕಾರ, ಈಗ ಕೋರ್ಟ್ ಮೆಟ್ಟಿಲೇರಿರುವ ಪತ್ರವು ಕುಟುಂಬ ಆಸ್ತಿ ಪ್ರತ್ಯೇಕವಾಗಬೇಕು ಎಂದು ಶ್ರೀಚಂದ್ ಅವರ ಆಶಯವನ್ನು ತೋರಿಸುವುದಿಲ್ಲ. ಆದರೆ ಈ ಬಗ್ಗೆ ಶ್ರೀಚಂದ್ ವಕೀಲರು ಯಾವುದೇ ಪ್ರತಿಕ್ರಿಯೆಗೆ ಸಿಕ್ಕಿಲ್ಲ.ಮೂವರು ಸೋದರರು ಈ ವ್ಯಾಜ್ಯದ ಬಗ್ಗೆ ಹೇಳಿಕೆ ನೀಡಿದ್ದು, ಈ ವ್ಯಾಜ್ಯವು ನಮ್ಮ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಈ ಕಲಾಪಗಳು ನಮ್ಮ ಸಂಸ್ಥಾಪಕರು ಹಾಗೂ ಕುಟುಂಬ ಮೌಲ್ಯಗಳ ವಿರುದ್ಧವಾಗಿದೆ. ಈ ಮೌಲ್ಯಗಳು ದಶಕಗಳಿಂದಲೂ ಇದೆ. ಎಲ್ಲವೂ ಎಲ್ಲರಿಗೂ ಸೇರಿದ್ದು ಮತ್ತು ಯಾವುದೂ ಒಬ್ಬರಿಗೆ ಸೇರಿದ್ದಲ್ಲ ಎಂಬುದು ಆ ಮೌಲ್ಯ ಎಂದು ಹೇಳಿದ್ದಾರೆ.
ಕುಟುಂಬದ ಆಸ್ತಿ ಮೌಲ್ಯ 11.2 ಬಿಲಿಯನ್ ಅಮೆರಿಕನ್ ಡಾಲರ್
ಒಂದು ವೇಳೆ ಈಗ ಹಾಕಿರುವ ಕೇಸ್ ನಲ್ಲಿ ಆ ಪತ್ರಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದಾಗಿಬಿಟ್ಟರೆ ಶ್ರೀಚಂದ್ ಹೆಸರಿನಲ್ಲಿ ಇರುವ ಎಲ್ಲ ಆಸ್ತಿ ಮಗಳಿಗೆ ಹಾಗೂ ಆಕೆಯ ಕುಟುಂಬಕ್ಕೆ ವರ್ಗಾವಣೆ ಆಗುತ್ತದೆ. ಅದರಲ್ಲಿ ಹಿಂದುಜಾ ಬ್ಯಾಂಕ್ ಷೇರುಗಳು ಕೂಡ ಇವೆ. ಈ ಹಂತದಲ್ಲಿ ನ್ಯಾಯಾಧೀಶರು ಗಮನಿಸಿರುವುದೇನೆಂದರೆ, ಶ್ರೀಚಂದ್ ತಮ್ಮ ವಕೀಲರಿಗೆ ತಾವಾಗಿಯೇ ಸೂಚನೆ ನೀಡುವಷ್ಟು ಸಮರ್ಥರಿಲ್ಲ. ಆದ್ದರಿಂದ ತಮ್ಮ ಪರವಾಗಿ ಮಗಳನ್ನು ನೇಮಿಸಿದ್ದಾರೆ. ವಿಶ್ವದ ಶ್ರೀಮಂತರಲ್ಲಿ ಹಿಂದುಜಾ ಕುಟುಂಬ ಕೂಡ ಒಂದು. ಅವರ ಆಸ್ತಿಯ ಬಹುಪಾಲು ಬರುವುದು ಹಿಂದುಜಾ ಗ್ರೂಪ್ ನಿಂದ. ಶತಮಾನಕ್ಕೂ ಹಿಂದಿನಿಂದ ಅವರ ಉದ್ಯಮಗಳಿವೆ. ನಲವತ್ತು ದೇಶಗಳಲ್ಲಿ ಹಣಕಾಸು, ಮಾಧ್ಯಮ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಣಕಾಸು ಹೂಡಿಕೆ ಮಾಡಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಈ ಕುಟುಂಬದ ಆಸ್ತಿ ಮೌಲ್ಯ 11.2 ಬಿಲಿಯನ್ ಅಮೆರಿಕನ್ ಡಾಲರ್.
ಅಶೋಕ್ ಲೇಲ್ಯಾಂಡ್ ನಲ್ಲಿ ಷೇರು
ಹಿಂದುಜಾ ನಾಲ್ವರು ಸೋದರರು ಮುಂಬೈ ಮೂಲದ ಗ್ರೂಪ್ ಮುನ್ನಡೆಸಲು ಸಹಾಯ ಮಾಡುತ್ತಾರೆ. ಸದ್ಯಕ್ಕೆ ಕೊರೊನಾ ಬಿಕ್ಕಟ್ಟಿನ ಸಮಸ್ಯೆ ಈ ಗ್ರೂಪ್ ಗೂ ಆಗಿದೆ. ಹಿಂದುಜಾ ಗ್ರೂಪ್ ನಿಂದ ಅಶೋಕ್ ಲೇಲ್ಯಾಂಡ್ ನಲ್ಲೂ ಷೇರು ಖರೀದಿ ಮಾಡಲಾಗಿದೆ. ಟ್ರಕ್ ನಿರ್ಮಾಣ ಮಾಡುವ ಈ ಕಂಪೆನಿ ಷೇರುಗಳು ಮಾರ್ಚ್ ನಿಂದ ಈಚೆಗೆ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅದೇ ರೀತಿ ಈ ಗ್ರೂಪ್ ಗೆ ಸೇರಿದ ಗಲ್ಫ್ ಆಯಿಲ್ ಇಂಟರ್ ನ್ಯಾಷನಲ್ ಕೂಡ ಸಮಸ್ಯೆ ಎದುರಿಸುತ್ತಿದೆ. ಇನ್ನು ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ತಮ್ಮ ಷೇರು ಪ್ರಮಾಣ ಹೆಚ್ಚಿಸಿಕೊಳ್ಳಬೇಕು ಎಂದಿದ್ದ ಈ ಸೋದರರ ಪ್ರಯತ್ನಕ್ಕೂ ಆರ್ ಬಿಐ ಅವಕಾಶ ನೀಡಿಲ್ಲ.


Click it and Unblock the Notifications