ಭಾರತದಲ್ಲಿ ಶಾಲಾ-ಕಾಲೇಜು, ಕಚೇರಿ, ಸರ್ಕಾರಿ ಕಚೇರಿ, ಬ್ಯಾಂಕ್, ಹೀಗೆ ಹಲವಾರು ಕಡೆಗಳಲ್ಲಿ ಹಬ್ಬ ಹರಿದಿನದಿಂದು ರಜೆ ಇರಲಿದೆ. ಅದರಂತೆಯೇ ಸ್ಟಾಕ್ ಮಾರುಕಟ್ಟೆಯೂ ಕೂಡಾ ವರ್ಷದಲ್ಲಿ ಕೆಲವು ದಿನಗಳು ವಹಿವಾಟು ಸ್ಥಗಿತಗೊಳಿಸಲಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಷೇರುಪೇಟೆ ವಹಿವಾಟು ಇರುವುದಿಲ್ಲ. ಅದನ್ನು ಹೊರತುಪಡಿಸಿ ಹಲವಾರು ದಿನ ವಹಿವಾಟು ಇರುವುದಿಲ್ಲ. ಈಗ ನಾವು ಹೋಳಿ ಆಚರಣೆಯ ಸಂಭ್ರಮದಲ್ಲಿದ್ದೇವೆ, ಆದರೆ ಈಗ ಸ್ಟಾಕ್ ಮಾರುಕಟ್ಟೆ ವಹಿವಾಟು ಇರಲಿದೆಯೇ?
ಇಲ್ಲ, ಭಾರತೀಯ ಸ್ಟಾಕ್ ಮಾರುಕಟ್ಟೆಯ ಟ್ರೇಡಿಂಗ್ ಮಾರ್ಚ್ 7, 2023ರ ಪೂರ್ಣ ದಿನ (ಇಂದು) ಸ್ಥಗಿತವಾಗಲಿದೆ. ಯಾವುದೇ ಟ್ರೇಡಿಂಗ್ ಇಂದು ನಡೆಯುವುದಿಲ್ಲ. ನಾಳೆಯಿಂದ ಅಂದರೆ ಮಾರ್ಚ್ 8ರಿಂದ ಟ್ರೇಡಿಂಗ್ ಸಾಮಾನ್ಯವಾಗಿಯೇ ಆರಂಭವಾಗಲಿದೆ. ಪ್ರಮುಖವಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮಂಗಳವಾರ ಪೂರ್ಣ ದಿನ ಯಾವುದೇ ವಹಿವಾಟನ್ನು ನಡೆಸುವುದಿಲ್ಲ ಎಂದು ಬಿಎಸ್‌ಇ, ಎನ್‌ಎಸ್‌ಇ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬೇರೆ ಯಾವೆಲ್ಲ ದಿನ ಸ್ಟಾಕ್ ಮಾರುಕಟ್ಟೆ ಬಂದ್
ಮಾರ್ಚ್ 7ರಂದು ವಹಿವಾಟು ಸ್ಥಗಿತಗೊಂಡಂತೆ ಇನ್ನು ಮಾರ್ಚ್ 30ರಂದು ಕೂಡಾ ಷೇರುಪೇಟೆ ವಹಿವಾಟು ಇರುವುದಿಲ್ಲ. ರಾಮನವಮಿ ದಿನದಂದು ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. 2023ರ ಮಾರ್ಚ್ ತಿಂಗಳಿನಲ್ಲಿ ಒಟ್ಟು ಎರಡು ದಿನ ಸ್ಟಾಕ್ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. ಮಾರ್ಚ್ 7ರಂದು ಹೋಳಿ ಕಾರಣ ಮತ್ತು ಮಾರ್ಚ್ 30ರಂದು ರಾಮನವಮಿ ಹಬ್ಬದ ಕಾರಣದಿಂದಾಗಿ ಸ್ಟಾಕ್ ಮಾರುಕಟ್ಟೆ ಬಂದ್ ಆಗಿರಲಿದೆ.
ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಸ್ಟಾಕ್ ಮಾರುಕಟ್ಟೆ ರಜಾದಿನಗಳ ಬಗ್ಗೆ ವಿವರವಿದೆ. ಆದರೆ ಈಕ್ವಿಟಿ ಸೆಗ್‌ಮೆಂಟ್, ಈಕ್ವಿಟಿ ಡಿರಿವ್ಯಾಟಿವ್ ಸೆಗ್‌ಮೆಂಟ್, ಎಸ್ಎಲ್‌ಬಿ ಸೆಗ್‌ಮೆಂಟ್‌ನಲ್ಲಿ ಇಂದು ಯಾವುದೇ ಬದಲಾವಣೆ ಇರಲಾರದು. ಇದು ಈ ವಹಿವಾಟು ಕೂಡಾ ಸ್ಥಗಿತವಾಗಲಿದೆ. ಇನ್ನು ಎಂಎಸ್‌ಇ, ಇಜಿಆರ್ ಕೂಡಾ ಮುಂಜಾನೆ 9ರಿಂದ ಸಂಜೆ 5ಗಂಟೆಯ ವಹಿವಾಟನ್ನು ನಡೆಸಲ್ಲ. ಇಜಿಆರ್ ಸಂಜೆಯ ಸೆಷನ್ ಅನ್ನು ಆರಂಭಿಸಲಿದೆ.
ಇನ್ನು ಹೋಳಿ 2023ರ ಎರಡನೇ ರಜೆಯಾಗಿದೆ. ಇದಕ್ಕೂ ಮುನ್ನ ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ಸ್ಟಾಕ್ ಮಾರುಕಟ್ಟೆ ಬಂದ್ ಆಗಿದೆ. ಫೆಬ್ರವರಿಯಲ್ಲಿ ಯಾವುದೇ ಸ್ಟಾಕ್ ಮಾರುಕಟ್ಟೆ ರಜಾದಿನಗಳು ಇರಲಿದೆ. ಏಪ್ರಿಲ್ 4, 7, 14ರಂದು ಕ್ರಮವಾಗಿ ಮಹಾವೀರ ಜಯಂತಿ, ಶುಭ ಶುಕ್ರವಾರ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಗೆ ಷೇರುಪೇಟೆ ವಹಿವಾಟು ಇರುವುದಿಲ್ಲ. ಒಟ್ಟಾಗಿ ವರ್ಷದಲ್ಲಿ 15 ದಿನಗಳ ಸ್ಟಾಕ್ ಮಾರುಕಟ್ಟೆ ರಜೆಯಿದೆ.


Click it and Unblock the Notifications