Bank Holidays: ಡಿಸೆಂಬರ್‌ನಲ್ಲಿ 19 ದಿನ ಬ್ಯಾಂಕ್‌ಗಳಿಗೆ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

ಯಾವುದೇ ಹಣಕಾಸು, ಚೆಕ್‌ ಬುಕ್‌, ಎಟಿಎಂ ಸಂಬಂಧಿತ ಕೆಲಸಗಳನ್ನು ಮಾಡಬೇಕೆಂದರೆ ಬ್ಯಾಂಕ್‌ಗೆ ಹೋಗಲೇಬೇಕು. ಬಹುತೇಕರು ಡಿಜಿಟಲ್‌ ಮೂಲಕ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೂ, ಸಾಲ ಸೌಲಭ್ಯ, ಚೆಕ್‌ ಸಮಸ್ಯೆ, ಪಾಸ್‌ಬುಕ್‌ ಸಂಬಂಧಿಸಿದ ಕೆಲಸಗಳಿಗೆ ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಆದ್ರೆ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ (Bank Holidays) ಇರಲಿದೆ. ಆದ್ದರಿಂದ ಬ್ಯಾಂಕ್‌ ಗ್ರಾಹಕರು ಇದನ್ನು ತಿಳಿದಿರಲೇಬೇಕು.

ಡಿಸೆಂಬರ್‌ನಲ್ಲಿ 19 ದಿನ ಬ್ಯಾಂಕ್‌ಗಳಿಗೆ ರಜೆ! ಗ್ರಾಹಕರೇ ಇಲ್ಲಿ ನೋಡಿ

ಡಿಸೆಂಬರ್ 2025 ರಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 19 ದಿನಗಳ ರಜೆ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ಕ್ಯಾಲೆಂಡರ್ ಪ್ರಕಾರ, ಹಲವು ಸಾರ್ವಜನಿಕ ಮತ್ತು ಪ್ರಾದೇಶಿಕ ರಜಾದಿನಗಳಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಹೇಳಲಾಗಿದೆ. ಡಿಸೆಂಬರ್ 25 ರಂದು ಬರುವ ಕ್ರಿಸ್‌ಮಸ್ ಈ ತಿಂಗಳ ಪ್ರಮುಖ ರಾಷ್ಟ್ರೀಯ ರಜಾದಿನವಾಗಿದ್ದು, ಈ ದಿನ ದೇಶದೆಲ್ಲೆಡೆ ಬ್ಯಾಂಕ್‌ಗಳು ಮುಚ್ಚಿರುತ್ತದೆ.

ವರ್ಷಾಂತ್ಯದ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ರಜೆ!
ವರ್ಷದ ಕೊನೆಯ ತಿಂಗಳು, ಡಿಸೆಂಬರ್‌ನಲ್ಲಿ ರಾಜ್ಯ, ರಾಷ್ಟ್ರೀಯ ರಜಾದಿನಗಳು ಮತ್ತು ವಾರದ ರಜೆಗಳು ಸೇರಿದಂತೆ ಅನೇಕ ಬ್ಯಾಂಕ್ ರಜಾದಿನಗಳಿವೆ. ಆದ್ದರಿಂದ ಬ್ಯಾಂಕ್‌ ಗ್ರಾಹಕರು ರಜಾದಿನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ. ಆರ್‌ಬಿಐ ಅಧಿಕೃತ ಕ್ಯಾಲೆಂಡರ್ ಪ್ರಕಾರ, ಬ್ಯಾಂಕ್‌ಗಳು ಸಾರ್ವಜನಿಕ ಮತ್ತು ಪ್ರಾದೇಶಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ.

ಇನ್ನು ಬ್ಯಾಂಕ್‌ ರಜೆಗಳು ಆಯಾ ರಾಜ್ಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಏಕೆಂದರೆ ಹಲವು ಹಬ್ಬಗಳು ಅಥವಾ ಆಚರಣೆಗಳು ಆಯಾ ನಗರಗಳಿಗೆ ಸಂಬಂಧಿಸಿರುವುದರಿಂದ ಈ ರೀತಿ ವ್ಯತ್ಯಾಸಗಳಾಗುತ್ತದೆ. ಆದರೆ ಕೆಲವು ರಾಷ್ಟ್ರೀಯವಾಗಿ ರಜಾದಿನಗಳಿರುತ್ತವೆ. ಅಂದರೆ, ಕೆಲವು ದಿನಾಂಕಗಳಲ್ಲಿ, ಒಂದು ರಾಜ್ಯದಲ್ಲಿ ಸ್ಥಳೀಯ ರಜೆಯಿಂದ ಬ್ಯಾಂಕ್‌ಗಳು ಮುಚ್ಚಿದ್ದರೆ, ಇತರ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತದೆ.

ಆರ್‌ಬಿಐ ರಾಷ್ಟ್ರೀಯ ರಜಾದಿನಗಳು ಮತ್ತು ರಾಜ್ಯ- ಪ್ರಾದೇಶಿಕ ರಜಾದಿನಗಳನ್ನು ಒಳಗೊಂಡ ರಜಾದಿನಗಳ ಕ್ಯಾಲೆಂಡರ್ ಪ್ರಕಟಿಸುತ್ತದೆ. ಡಿಸೆಂಬರ್ 25 ರಂದು ಬರುವ ಕ್ರಿಸ್‌ಮಸ್ ಪ್ರಮುಖ ರಾಷ್ಟ್ರೀಯ ರಜಾದಿನವಾಗಿದೆ. ಅಂದು ಭಾರತದ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ.

ಗ್ರಾಹಕರು ತಮ್ಮ ರಾಜ್ಯದ ನಿರ್ದಿಷ್ಟ ರಜಾದಿನಗಳನ್ನು ನೋಡಿಕೊಂಡು ಬ್ಯಾಂಕ್‌ ಕೆಲಸಗಳನ್ನು ಮುಗಿಸುವಂತೆ ತಿಳಿಸಲಾಗಿದೆ. ರಜಾದಿನಗಳಲ್ಲಿ, ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂನಂತಹ ಡಿಜಿಟಲ್ ಮೂಲಕ ತಮ್ಮ ಬ್ಯಾಂಕ್‌ ಕೆಲಸಗಳನ್ನು ಮಾಡುವ ಅವಕಾಶವಿದೆ..

ಡಿಸೆಂಬರ್ 2025 ರ ವಾರಾಂತ್ಯದ ಬ್ಯಾಂಕ್ ರಜಾದಿನಗಳು:
ಡಿಸೆಂಬರ್ 07 ಭಾನುವಾರ, ಡಿಸೆಂಬರ್ 13 ಶನಿವಾರ, ಡಿಸೆಂಬರ್ 14 ಭಾನುವಾರ, ಡಿಸೆಂಬರ್ 21 ಭಾನುವಾರ, ಡಿಸೆಂಬರ್ 27 ಶನಿವಾರ, ಡಿಸೆಂಬರ್ 28 ಭಾನುವಾರ. ಈ ರಜಾದಿನಗಳು ದೇಶಾದ್ಯಂತ ಒಂದೇ ರೀತಿ ಇರಲಿದೆ

ಡಿಸೆಂಬರ್ 2025 ರ ರಾಜ್ಯವಾರು ಬ್ಯಾಂಕ್ ರಜಾದಿನಗಳು ಇಲ್ಲಿವೆ:

  • ಡಿಸೆಂಬರ್ 01: ರಾಜ್ಯ ಸ್ಥಾಪನಾ ದಿನ/Indigenous Faith Day - ಇಟಾನಗರ ಮತ್ತು ಕೊಹಿಮಾದಲ್ಲಿ ಡಿಸೆಂಬರ್‌ ಆರಂಭದಲ್ಲೇ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 03: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ - ಪಣಜಿಯಲ್ಲಿ ಮಾತ್ರ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 12: ಪಾ ತೋಗನ್ ನೆಂಗ್ಮಿಂಜಾ ಸಂಗ್ಮಾ ಅವರ ಪುಣ್ಯತಿಥಿ - ಶಿಲ್ಲಾಂಗ್‌ನಲ್ಲಿ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
  • ಡಿಸೆಂಬರ್ 18: ಯು ಸೋಸೊ ಥಾಮ್ ಅವರ ಪುಣ್ಯತಿಥಿ - ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 19: ಗೋವಾ ವಿಮೋಚನಾ ದಿನ - ಪಣಜಿಯಲ್ಲಿ ಬ್ಯಾಂಕ್‌ಗಳಿಗೆ ರಜೆ.
  • ಡಿಸೆಂಬರ್ 20 ಮತ್ತು ಡಿಸೆಂಬರ್ 22: ಲೋಸೂಂಗ್ / ನಾಮ್ಸೂಂಗ್ - ಗ್ಯಾಂಗ್‌ಟಾಕ್‌ನಲ್ಲಿ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 24: ಕ್ರಿಸ್‌ಮಸ್ ಈವ್ - ಐಜ್ವಾಲ್, ಕೊಹಿಮಾ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ.
  • ಡಿಸೆಂಬರ್ 25: ಕ್ರಿಸ್‌ಮಸ್ - ಭಾರತದಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
  • ಡಿಸೆಂಬರ್ 26: ಕ್ರಿಸ್‌ಮಸ್ ಆಚರಣೆ - ಐಜ್ವಾಲ್, ಕೊಹಿಮಾ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 27: ಕ್ರಿಸ್‌ಮಸ್ - ಕೊಹಿಮಾದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಡಿಸೆಂಬರ್ 30: ಯು ಕಿಯಾಂಗ್ ನಂಗ್‌ಬಾ ಅವರ ಪುಣ್ಯತಿಥಿ - ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
  • ಡಿಸೆಂಬರ್ 31: ಹೊಸ ವರ್ಷದ ಈವ್/ಇಮೋನು ಇರತ್ಪಾ - ಐಜ್ವಾಲ್ ಮತ್ತು ಇಂಫಾಲ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+