ಡಿಸೆಂಬರ್ 26 ಗುರುವಾರ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಕ್ರಿಸ್‌ಮಸ್ ನಂತರ RBI ಮತ್ತೊಂದು ರಜೆ ಘೋಷಣೆ ಮಾಡಿದೆ. RBI ಪ್ರಕಾರ ಗುರುವಾರ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೆಘಾಲಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಹಿನ್ನೆಲೆ ಅಲ್ಲಿನ ಭಾಗದ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಹಾಗೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಶಾಖೆಗಳು ಎಂದಿನಂತೆ ನಡೆಯುತ್ತವೆ. ಆದ್ರೆ ಈ ಭಾರಿ RBI ಗುರುವಾರ ಯಾವ ಯಾವ ಬ್ಯಾಂಕ್‌ಗಳು ತೆರೆದಿರುತ್ತವೆ. ಹಾಗೆ ಯಾವೆಲ್ಲಾ ಬ್ಯಾಂಕ್‌ಗಳಿಗೆ ಏಕೆ ರಜೆ ನೀಡಿದೆ ಎನ್ನುವುದನ್ನ ನೀವು ಇಲ್ಲಿ ತಿಳಿಯಿರಿ.
ಡಿಸೆಂಬರ್ 26ರಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ
ಗುರುವಾರ ಡಿಸೆಂಬರ್ 26ರಂದು ಕ್ರಿಸ್‌ಮಸ್ ಆಚರಣೆ ಹಿನ್ನೆಲೆ ಮಿಜೋರಾಂ, ನಾಗಾಲ್ಯಾಂಡ್ ಹಾಗೆ ಮೆಘಾಲಯ ಬ್ಯಾಂಕುಗಳಿಗೆ ರಜೆ ಇರಲಿದೆ. ಕ್ರಿಸ್‌ಮಸ್ ಆಚರಣೆಯ ಕಾರಣ ಈ ಭಾಗದ ರಾಜ್ಯಗಳಿಗೆ ರಜೆ ನೀಡಲಾಗುತ್ತದೆ. ಈ ಭಾಗದ ರಾಜ್ಯಗಳಲ್ಲಿ ಕ್ರಿಸ್‌ಮಸ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವನ್ನ ಎಲ್ಲರೂ ಬಹಳ ವೈಭವದಿಂದ ಆಚರಣೆ ಮಾಡುತ್ತಾರೆ. ಕ್ರಿಸ್‌ಮಸ್ ಮರುದಿನ ರಜೆ ನೀಡಲು ಕಾರಣ ಜನರು ತಮ್ಮ ಕುಟುಂಬದೊಂದಿಗೆ ಸಂಭ್ರಮಾಚರಣೆ ಮಾಡಲಿ ಎಂದು ಅಲ್ಲಿನ ಭಾಗದ ಬ್ಯಾಂಕ್‌ಗಳಿಗೆ ರಜೆಯನ್ನ ಘೋಷಣೆ ಮಾಡಿರುತ್ತಾರೆ. ಅಲ್ಲದೆ ಇದೇ ಕಾರಣಕ್ಕಾಗಿ ಬ್ಯಾಂಕ್‌ಗಳಿಗೆ ಮುಂಚಿತವಾಗೆ ಎಲ್ಲಾ ರೀತಿಯ ಹಣಕಾಸಿನ ಕೆಲಸಗಳನ್ನ ಮಾಡುವಂತೆ ಜನರಿಗೆ ಮನವಿಯನ್ನ ಕೂಡ ಮಾಡಲಾಗುತ್ತದೆ.

ದೇಶದ ಈ ಭಾಗರ ರಾಜ್ಯಗಳಲ್ಲಿ ಕ್ರಿಸ್ಮಸ್ ವೇಳೆ ಮಾರುಕಟ್ಟೆಗಳು, ಶಾಲೆಗಳು, ಕಚೇರಿಗಳು ಮತ್ತು ಬ್ಯಾಂಕುಗಳು ಮುಚ್ಚಿರುತ್ತವೆ. ಈ ಹಬ್ಬವು ಧಾರ್ಮಿಕವಲ್ಲದೇ ಸಾಮಾಜಿಕ ಜೊತೆಗೆ ಸಾಂಸ್ಕೃತಿಕ ಆಚರಣೆ ಕೂಡ ಆಗಿದೆ. ಇಲ್ಲಿನ ಜನರು ಈ ಹಬ್ಬದ ವೇಳೆ ಪ್ರಾರ್ಥನೆ, ಕೇಕ್ ಕತ್ತರಿಸುವುದು, ಹೀಗೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇನ್ನು ಈ ರಜೆ ಸಮಯದಲ್ಲಿ, ಬ್ಯಾಂಕ್‌ಗಳು ಮುಚ್ಚಿದಾಗ, ಗ್ರಾಹಕರು ನೆಟ್ ಬ್ಯಾಂಕಿಂಗ್ ಹಾಗೆ ಮೊಬೈಲ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳೊಂದಿಗೆ ತಮ್ಮ ಕೆಲಸವನ್ನ ಮಾಡಿಕೊಳ್ಳಬಹುದು.
ಡಿಸೆಂಬರ್ 26ರಂದು ಗುರುವಾರ ದೇಶದ ಕೆಲವು ಭಾಗಗಳಿಗೆ ಮಾತ್ರ ರಜೆ ಇರಲಿದೆ. ಅದನ್ನ ಹೊರತುಪಡಿಸಿ ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಇತರೆ ರಾಜ್ಯಗಳ ಬ್ಯಾಂಕ್‌ಗಳಿಗೆ ರಜೆ ಇರುವುದಿಲ್ಲ ಅಲ್ಲಿನ ಶಾಖೆಗಳು ಎಂದಿನಂತೆ ನಡೆಯಲಿವೆ. ಹಾಗೆ ಎಂದಿನಂತೆ ಜನರಿಗೆ ಸೇವೆಗಳನ್ನ ನೀಡಲಿವೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ
ಡಿಸೆಂಬರ್ 26 (ಗುರುವಾರ): ದೇಶದ ಕೆಲವು ರಾಜ್ಯಗಳಿಗೆ ಮಾತ್ರ ರಜೆ ಇರಲಿದೆ. ಅಂದರೆ ಮಿಜೋರಾಂ, ನಾಗಾಲ್ಯಾಂಡ್ ಹಾಗೆ ಮೆಘಾಲಯದಲ್ಲಿರುವ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ರೆ ಇತರೆ ರಾಜ್ಯಗಳು ಅಂದರೆ ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಇನ್ನುಳಿದ ಭಾಗಗಳಲ್ಲಿ ಎಂದಿನಂತೆ ಬ್ಯಾಂಕ್‌ಗಳು ನಡೆಯಲಿವೆ.
ಡಿಸೆಂಬರ್ 27 (ಶುಕ್ರವಾರ): ಶುಕ್ರವಾರದಂದು ಕೂಡ ಕ್ರಿಸ್‌ಮಸ್ ಹಿನ್ನೆಲೆ ಭಾರತದ ಕೆಲವು ರಾಜ್ಯಗಳಿಗೆ ಮಾತ್ರ ರಜೆ ಇರಲಿದೆ. ಹಾಗೆ ಇನ್ನೂ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು ಎಂದಿನಂತೆ ಜನರಿಗೆ ಸೇವೆಯನ್ನ ನೀಡಲಿವೆ.
ಡಿಸೆಂಬರ್ 28 (ಶನಿವಾರ): ಇನ್ನು ನಾಲ್ಕನೇ ಶನಿವಾರ ಆದ್ದರಿಂದ ಎಲ್ಲಾ ಬ್ಯಾಂಕ್‌ಗಳಿಗೂ ಅಂದು ರಜೆ ಇರಲಿದೆ.
ಡಿಸೆಂಬರ್ 29 (ಭಾನುವಾರ): ಭಾನುವಾರ ಸಾಪ್ತಾಹಿಕ ರಜೆ ಅಂದು ಎಲ್ಲಾ ಶಾಲಾ ಕಾಲೇಜು, ಹಾಗೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಡಿಸೆಂಬರ್ 30 (ಸೋಮವಾರ): U Kiang Nangbah ಕಾರಣದಿಂದಾಗಿ ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ರೆ ಇತರೆ ಬ್ಯಾಂಕ್‌ಗಳು ಎಂದಿನಂತೆ ನಡೆಯಲಿವೆ.
ಡಿಸೆಂಬರ್ 31 (ಮಂಗಳವಾರ): ಹೊಸ ವರ್ಷದ ಹಿಂದಿನ ದಿನ ಸ್ಥಳೀಯ ರಜೆ ಇರುವುದರಿಂದ ಕೆಲವು ರಾಜ್ಯಗಳಲ್ಲಿ ಕೆಲವು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.


Click it and Unblock the Notifications