ಮುಸ್ಲಿಂ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬ ಕೂಡ ಒಂದಾಗಿದೆ. ಇದು ಇಸ್ಲಾಂರ ಹೊಸ ವರ್ಷದ ಆರಂಭವನ್ನು ಸೂಚಿಸುವ ದಿವನ್ನು ಮೊಹರಂ ಎಂದು ಕೆರೆಯಲಾಗುತ್ತದೆ. ಈ ವರ್ಷ ಭಾರತದಲ್ಲಿ ಜುಲೈ 6 ಅಥವಾ 7, 2025 ರಂದು ಆಚರಿಸಲಾಗುತ್ತದೆ. ಇವರು ಮೊಹರಂ ಹಬ್ಬ ಶುರವಾಗಬೇಕಾದ್ದರೆ ಅರ್ಧ ಚಂದ್ರ ದರ್ಶನವಾದ್ದರೆ ಮಾತ್ರ ಇವರು ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಲ್ಲವಾದ್ದರೆ ಮುಂದಿನ ದಿನ ಜುಲೈ 7 ಕ್ಕೆ ಬದಲಾಗಬಹುದು. ಈ ದಿನ ದೇಶಾದ್ಯಂತ ಶಾಲೆಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆಗಳಿಗೆ ರಜೆ ಇರುತ್ತದೆಯೇ..? ಎಂಬ ಹೆಚ್ಚಿನ ವಿವರವನ್ನು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಹೌದು,ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಮೊಹರಂ ಹಬ್ಬ. ಈ ಹಬ್ಬ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈ ಹಬ್ಬ ಇಸ್ಲಾಮಿಕ್ ಕ್ಯಾಲಂಡರ್ನಲ್ಲಿ ಒಂದು ಮಾಸದ ಹೆಸರು. ಕ್ಯಾಲಂಡರ್ನ ಮೊದಲ ತಿಂಗಳು ಕೂಡ ಆಗಿದ್ದು ಎಲ್ಲರ ಒಟ್ಟಾಗಿ ಸೇರಿ ನವಾಜ್ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಜುಲೈ 7 ಸಾರ್ವಜನಿಕ ರಜೆ: ಮೊಹರಂ ರಜೆ ಚಂದ್ರನ ದರ್ಶನದ ಮೇಲೆ ಬದಲಾಗುತ್ತದೆ
ಮುಹರಂ ಇಸ್ಲಾಮಿಕ್ ಧರ್ಮದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ ಮತ್ತು ಇದನ್ನು ಭಾರತದಲ್ಲಿ ಸಾರ್ವಜನಿಕ ರಜಾದಿನವಾಗಿ ಆಚರಣೇಯನ್ನು ಮಾಡಲಾಗುತ್ತದೆ. ಆದರೆ ರಜೆಯ ಅಂತಿಮ ದಿನ ನಿರ್ಧಾರವಾಗುವುದು ಚಂದ್ರನ ದರ್ಶನ ಮೇಲೆ ಮುಸ್ಲಿಂ ಸಮುದಾಯದವರು ಹಬ್ಬವನ್ನು ಆಚರಣೆ ಮಾಡುತ್ತಾರೆ. ನಿರೀಕ್ಷಿತ ದಿನಾಂಕದಂದು ಚಂದ್ರ ದರ್ಶನವಾಗದಿದ್ದರೆ, ಮರುದಿನ ಮುಹರಂ ಹಬ್ಬದ ಆಚರಣೆಯನ್ನು ಮಾಡುತ್ತಾರೆ.
ಮುಹರಂ ಹಬ್ಬಕ್ಕೆ ಎಲ್ಲಾ ಶಾಲೆಗಳು, ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಸರ್ಕಾರಿ ಕಚೇರಿಗಳು ಮತ್ತು ಕೆಲವು ಖಾಸಗಿ ಕಚೇರಿಗಳಿಗೆ ರಜೆ ಇರುತ್ತದೆ. ಭಾರತದಲ್ಲಿ ಸರ್ಕಾರ ರಜೆ ಇದೆ. ಈ ಬಾರಿ ಮೊಹರಂ ಹಬ್ಬ ಜುಲೈ 6ರಂದು ಬಂದಿರುವುದರಿಂದ ಅಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ವಾರದ ರಜಾದಿನವು ಕೂಡ ಬಳಗೊಂಡಿದೆ. ಅಂತೆಯೇ ಕರ್ನಾಟಕವೂ ಒಳಗೊಂಡಂತೆ ಬಹುತೇಕ ಕಡೆಯಲ್ಲಿ ಬ್ಯಾಂಕ್‌ಗಳಿಗೆ ರಜೆಯನ್ನು ನೀಡಲಾಗುತ್ತದೆ. ಮೊಹರಂ/ಅಶೂರ/ಯು ತಿರೋತ್ ಸಿಂಗ್ ದಿನದ ರಜಾದಿನಗಳು ಆರ್‌ಬಿಐನ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿಯಲ್ಲಿ ರಜಾದಿನಗಳ ವರ್ಗಕ್ಕೆ ಸೇರಿವೆ. ಆದ್ದರಿಂದ, ಭಾರತದ ಎಲ್ಲಾ ನಗರಗಳು ಬ್ಯಾಂಕ್ ರಜಾದಿನಗಳನ್ನು ಹೋಂದಿರುವುದಿಲ್ಲ.
ಭಾರತದಾದ್ಯಂತ ಬ್ಯಾಂಕ್ ರಜಾದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸುತ್ತದೆ. ಸಾರ್ವಜನಿಕ ರಜಾದಿನಗಳು, ಪ್ರಾದೇಶಿಕ ರಜಾದಿನಗಳು ಮತ್ತು ಹಬ್ಬಗಳನ್ನು ಆಧರಿಸಿ ರಜಾದಿನಗಳನ್ನು ನಿರ್ಧರಿಸಲಾಗುತ್ತದೆ. ಜುಲೈ ತಿಂಗಳಲ್ಲಿ ಒಟ್ಟು 13 ದಿನ ಬ್ಯಾಂಕ್ ಗಳಿಗೆ ರಜೆ ಇದೆ.
ಷೇರು ಮಾರುಕಟ್ಟೆಗೆ ಮೊಹರಂ ಹಬ್ಬದಂದು ರಜೆ
ಮೊಹರಂ ಹಬ್ಬಕ್ಕೆ ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಈ ಮೊಹರಂ ದಿನದಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಗಳಿಗೆ ರಜೆ ಇರುತ್ತದೆ. ಇದು ಯಾವುದೇ ವಾಹಿವಾಟು ಪ್ರಕ್ರಿಯೆಗಳು ನಡೆಯುವುದಿಲ್ಲ. ಇದರಲ್ಲಿ ಈಕ್ವಿಟಿ, ಈಕ್ವಿಟಿ ಉತ್ಪನ್ನಗಳು, ಎಸ್‌ಎಲ್‌ಬಿ (ಸೆಕ್ಯುರಿಟೀಸ್ ಲೆಂಡಿಂಗ್ ಮತ್ತು ಎರವಲು), ಕರೆನ್ಸಿ ಉತ್ಪನ್ನಗಳು ಮತ್ತು ಬಡ್ಡಿದರ ಉತ್ಪನ್ನಗಳ ವ್ಯಾಪಾರವು ಸಹ ಮುಚ್ಚಿರುತ್ತದೆ.
ಮೊಹರಂನ ಮಹತ್ವ
ಮೊಹರಂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಪವಿತ್ರ ತಿಂಗಳುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.10ನೇ ದಿನದಂದು ಬರುವ ಅಶುರಾ ದಿನವು ಮೊಹರಂನ ವಿಶೇಷ ಮಹತ್ವವನ್ನು ಹೊಂದಿದೆ. ಅನೇಕ ಮುಸ್ಲಿಮರಿಗೆ, ವಿಶೇಷವಾಗಿ ಶಿಯಾ ಪಂಥದವರಿಗೆ, ಅಶುರಾ ಶೋಕದ
ದಿನವಾಗಿದೆ. ಸಂಭ್ರಮ ಸಡಗರದಿಂದ ಎಲ್ಲರೂ ಒಟ್ಟಾಗಿ ಆಚರಣೆಯನ್ನು ಮಾಡುತ್ತಾರೆ.


Click it and Unblock the Notifications