ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ (HMS)ದಿಂದ ಮಂಗಳವಾರ ಸ್ವಯಂ ನಿವೃತ್ತಿ ಯೋಜನೆ ಪರಿಚಯಿಸಲಾಗಿದೆ. ಈಗಿನ ಅನಿಶ್ಚಿತ ಸಮಯದಲ್ಲಿ ಉತ್ಪಾದನೆ ಸ್ಟ್ರಾಟೆಜಿ ಮತ್ತೆ ರೂಪಿಸುವ ಹಾಗೂ ಒಟ್ಟಾರೆ ಕ್ಷಮತೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿಯು ತನ್ನ ಆಂತರಿಕ ಸುತ್ತೋಲೆಯಲ್ಲಿ ಸಿಬ್ಬಂದಿಗೆ ತಿಳಿಸಿದೆ.
40 ವರ್ಷ ಮೇಲ್ಪಟ್ಟವರು ಅಥವಾ ಕಂಪೆನಿಯಲ್ಲಿ 10 ವರ್ಷದ ಸೇವೆಯನ್ನು ಪೂರ್ಣಗೊಳಿಸಿದವರು ಈ ಯೋಜನೆಗೆ ಅರ್ಹರು. ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪೆನಿ ಎಚ್ ಎಂಎಸ್ ಐ. ಈಚೆಗಷ್ಟೇ ಹೋಂಡಾದ ಕಾರು ಉತ್ಪಾದಕ ಅಂಗವಾದ ಹೋಂಡಾ ಕಾರ್ಸ್ ಇಂಡಿಯಾವು ಉತ್ಪಾದನೆಯನ್ನು ಪುನರ್ ಹೊಂದಾಣಿಕೆ ಮಾಡಿದೆ.
ಹೋಂಡಾ ಸ್ಕೂಟರ್ ಒಟ್ಟಾರೆ ಉತ್ಪಾದನೆ ಸಾಮರ್ಥ್ಯ 64 ಲಕ್ಷ ಯೂನಿಟ್ ಇದೆ. ಇದರ ಉತ್ಪಾದನಾ ಘಟಕ್ ಮಾನೇಸರ್ (ಹರ್ಯಾಣ), ಆಳ್ವಾರ್ (ರಾಜಸ್ಥಾನ), ನರಸಾಪುರ (ಕರ್ನಾಟಕ) ಮತ್ತು ವಿಥಲಪುರ್ (ಗುಜರಾತ್)ನಲ್ಲಿ ಇದೆ.
ಜನವರಿ 5ರಿಂದ VRS ಸ್ಕೀಮ್ ಜಾರಿಗೆ
ಸ್ಪರ್ಧಾತ್ಮಕ ದ್ವಿಚಕ್ರ ವಾಹನ ಮಾರ್ಕೆಟ್ ನಲ್ಲಿ ಉಳಿಯಬೇಕು ಅಂದರೆ ಉತ್ತಮ ಮಟ್ಟದ ಕ್ಷಮತೆ ಮತ್ತು ಸ್ಪರ್ಧಾತ್ಮಕತೆ ಮುಖ್ಯ. ಈ ಮೇಲ್ಕಂಡ ಕಾರಣ ಗಮನದಲ್ಲಿ ಇಟ್ಟುಕೊಂಡು "ವಿಆರ್ ಎಸ್" ಯೋಜನೆ ಪರಿಚಯಿಸಲಾಗಿದೆ. ನಿವೃತ್ತಿ ವಯಸ್ಸಿಗೂ ಮುನ್ನ ಸ್ವಯಂನಿವೃತ್ತಿ ಪಡೆಯಲು ಬಯಸುತ್ತಾರೋ ಅಂಥವರಿಗೆ ಕಂಪೆನಿಯಿಂದ ಗೌರವಯುತವಾಗಿ ಬೀಳ್ಕೊಡಲಾಗುತ್ತದೆ ಎಂದು ಕಂಪೆನಿಯಿಂದ ತಿಳಿಸಲಾಗಿದೆ. ವಿಆರ್ ಎಸ್ ಯೋಜನೆ ಜನವರಿ 5ರಿಂದ ಜಾರಿಗೆ ಬಂದಿದ್ದು, ಜನವರಿ 23ರ ತನಕ ಇರಲಿದೆ. ಆದರೆ ಈ ಯೋಜನೆಯನ್ನು ಆಡಳಿತ ಮಂಡಳಿಯ ವಿವೇಚನೆಗೆ ತಕ್ಕಂತೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕೂಡ ಇದೆ.
ಪ್ಯಾಕೇಜ್ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?
ವಿಆರ್ ಎಸ್ ಪ್ಯಾಕೇಜ್ ಲೆಕ್ಕಾಚಾರ ಹೀಗಿದೆ: ಎಷ್ಟು ವರ್ಷ ಸೇವೆ ಪೂರ್ಣಗೊಳಿಸಿರುತ್ತಾರೋ ಅದರ ಮೂರು ತಿಂಗಳ ಗ್ರಾಸ್ ವೇತನ, ಒಂದು ತಿಂಗಳ ಮೂಲ ವೇತನ ಮತ್ತು ವೇರಿಯೆಬಲ್ ಡಿಯರ್ ನೆಟ್ ಅಲೋಯೆನ್ಸ್ (VDA) ಬಾಕಿ ಉಳಿದ ಸೇವಾ ಅವಧಿಗೆ- ಮತ್ತು ಸಂಪೂರ್ಣವಾದ ಸೇವಾ ವರ್ಷಕ್ಕೆ 22 ಸಾವಿರ ರುಪಾಯಿ ಎಕ್ಸ್ ಗ್ರೇಷಿಯಾ. 'ಅರ್ಲಿ ಬರ್ಡ್ ಇನ್ಸೆಂಟಿವ್' ಎಂದು ಮೊದಲ ನಾನೂರು ಅರ್ಜಿದಾರರಿಗೆ 5 ಲಕ್ಷ ರುಪಾಯಿ ನೀಡಲಾಗುತ್ತದೆ. ಒಂದು ವೇಳೆ ವಿಆರ್ ಎಸ್ ಅರ್ಜಿ ನಾನೂರು ದಾಟಿದರೆ ಹೆಚ್ಚುವರಿಯಾಗಿ ಅರ್ಜಿದಾರರಿಗೆ 4 ಲಕ್ಷ ರುಪಾಯಿ ನೀಡಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗರಿಷ್ಠ ಮೊತ್ತದ ಮಿತಿ ಹಾಕಲಾಗಿದೆ
ಇದೇ ವೇಳೆ ಪರ್ಮನೆಂಟ್ ವರ್ಕ್ ಮನ್ ಮತ್ತು ಜೂನಿಯರ್ ಎಂಜಿನಿಯರ್ ಮತ್ತ್ಯ್ ಮೇಲ್ಪಟ್ಟ ಅರ್ಜಿದಾರರಿಗೆ ಗರಿಷ್ಠ ಮೊತ್ತದಲ್ಲಿ ಕಂಪೆನಿಯಿಂದ ಮಿತಿಯನ್ನು ಹಾಕಲಾಗಿದೆ. ಉದಾಹರಣೆಗೆ ಸೀನಿಯರ್ ಮ್ಯಾನೇಜರ್ ಅಥವಾ ಉಪಾಧ್ಯಕ್ಷ ಹುದ್ದೆಯಲ್ಲಿ ಇರುವವರಿಗೆ 72 ಲಕ್ಷ ರುಪಾಯಿ, ಮ್ಯಾನೇಜರ್ 67 ಲಕ್ಷ ರುಪಾಯಿ, ಡೆಪ್ಯೂಟಿ ಮ್ಯಾನೇಜರ್ 48 ಲಕ್ಷ ರುಪಾಯಿ ಹಾಗೂ ಅಸಿಸ್ಟೆಂಟ್ ಎಕ್ಸ್ ಕ್ಯೂಟಿವ್ ಗೆ 15 ಲಕ್ಷ ರುಪಾಯಿ ಮಿತಿ ಹಾಕಲಾಗಿದೆ.


Click it and Unblock the Notifications