ಬೆಂಗಳೂರು: ನಗರದ ಪ್ರಮುಖ ಸಂಚಾರಿ ರಸ್ತೆಗಳಲ್ಲಿ ಹೊಸೂರು ರೋಡ್‌ನಲ್ಲಿ (NH-44) ನಡೆಯುತ್ತಿರುವ ಗ್ರೇಡ್ ಸಪರೇಟರ್ ಮತ್ತು ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ಇದರಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (NHAI) ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸೂರು ರಸ್ತೆಯ ನಾಲ್ಕು ಪ್ರಮುಖ ಜಂಕ್ಷನ್‌ಗಳಲ್ಲಿ ನಡೆಯುತ್ತಿರುವ ಗ್ರೇಡ್-ಸೆಪರೇಟರ್ ಕಾಮಗಾರಿಗಳಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ಹೊಸೂರು ರಸ್ತೆ (NH-44) ಉದ್ದಕ್ಕೂ ಮೂರು-ಪಥದ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ.

ಪ್ರತಿದಿನ 1.2 ಲಕ್ಷಕ್ಕೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಸಾಗಿಹೋಗುವ ಉದ್ದೇಶದಿಂದ, ಕಾಮಗಾರಿಗಳ ನಡುವೆಯೂ ಸುಗಮ ಸಂಚಾರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ, ಗೆಸ್ಟ್‌ಲೈನ್ ಸರ್ಕಲ್, ಗುಡ್ಡಹಟ್ಟಿ ಗೇಟ್, ಮತ್ತು ಚಂದಾಪುರ ಮಾರ್ಗಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ. ವೀರಸಂದ್ರದಲ್ಲಿ ಇನ್ನೂ ಆರಂಭವಾಗಿಲ್ಲ. ಇನ್ನು ಮುಖ್ಯ ಕ್ಯಾರೇಜ್‌ವೇಯಲ್ಲಿ ಆರು-ಪಥದ ಅಂಡರ್‌ಪಾಸ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದು ಅಪಘಾತ ವಲಯಕ್ಕೆ ಬ್ರೇಕ್ ನೀಡಿ, ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲಿದೆ.
ಮಹತ್ವದ ಕ್ರಮ!
ಅಂಡರ್‌ಪಾಸ್‌ಗಳ ನಿರ್ಮಾಣ ಮಾಡುವ ಹಿನ್ನೆಲೆ, ಮುಖ್ಯ ರಸ್ತೆಯಲ್ಲಿ ಅಗೆಯುವ ಕಾರ್ಯ ನಡೆಸಲಾಗುತ್ತದೆ. ಈ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ, ಕಾಮಗಾರಿ ಮುಗಿಯುವವರೆಗೆ ವಾಹನಗಳನ್ನು ಹೆದ್ದಾರಿಯ ಎರಡೂ ಬದಿಯಲ್ಲೂ ವಿಸ್ತರಿಸಿದ ಮೂರು-ಪಥದ ಸರ್ವಿಸ್ ರಸ್ತೆಗಳಿಗೆ ತಿರುಗಿಸಲಾಗುತ್ತದೆ. ಇದೇ ಕಾರಣದಿಂದ, ಇದೀಗ ಸರ್ವೀಸ್ ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಇರುವ ಎರಡು-ಪಥದ ರಸ್ತೆಗಳನ್ನು ವಿಸ್ತರಿಸಿ ಸುಮಾರು 7 ಕಿ.ಮೀ.ಗಳಷ್ಟು ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಈ ಕ್ರಮದ ಕುರಿತು NHAI ಅಧಿಕಾರಿಯೊಬ್ಬರು, "ಹೊಸೂರು ರಸ್ತೆಯು ಅತ್ಯಂತ ಜನನಿಬಿಡ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಈ ರಸ್ತೆಗಳಲ್ಲಿ ಭಾರೀ ಗಾತ್ರದ ಟ್ರಕ್‌ಗಳು ಮತ್ತು ಟ್ಯಾಂಕರ್‌ಗಳು ಸಹ ಓಡಾಡುತ್ತದೆ. ಆದ್ದರಿಂದ ಮುಖ್ಯ ಕ್ಯಾರೇಜ್‌ವೇನಲ್ಲಿ ಅಂಡರ್‌ಪಾಸ್ ಕಾಮಗಾರಿಗಳನ್ನು ಕೈಗೊಳ್ಳುವುದು ಸಂಚಾರದಲ್ಲಿ ಭಾರೀ ತೊಂದರೆಗಳು ಆಗಲಿದೆ. ಆದ್ದರಿಂದ, ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಸಂಚಾರವನ್ನು ಮೂರು-ಪಥದ ಸರ್ವಿಸ್ ರಸ್ತೆಗಳಿಗೆ ತಿರುಗಿಸಬೇಕು. ಅಸ್ತಿತ್ವದಲ್ಲಿರುವ ಎರಡು-ಪಥದ ಸರ್ವಿಸ್ ರಸ್ತೆಗಳನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ. ಈ ಪ್ರಸ್ತಾವನೆಯನ್ನು NHAI ಪ್ರಧಾನ ಕಚೇರಿಗೆ ಕಳುಹಿಸಲಾಗಿದ್ದು, ಕೆಲಸವು ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ರಸ್ತೆಯ ಎರಡೂ ಬದಿಗಳಲ್ಲಿರುವ ಸರ್ವೀಸ್ ರಸ್ತೆಗ್ನು 3 ಲೇನ್‌ಗಳುಗೆ ವಿಸ್ತರಿಸಲಾಗುತ್ತದೆ. ಅಲ್ಲೇ ಈ ಮೂರು ಲೇನ್ ಸರ್ವೀಸ್ ರಸ್ತೆಗಳಿಗೆ ವಾಹನಗಳನ್ನು ಡೈವರ್ಟ್ ಮಾಡಲಾಗುತ್ತದೆ. ಅಂದರೆ ಅಂಡರ್‌ಪಾಸ್ ಕಾಮಗಾರಿ ಮುಗಿಯುವವರೆಗೆ ಈ ಸೇವೆ ಕಾರ್ಯಚರಿಸಲಿದೆ ಎಂದು ಹೇಳಲಾಗಿದೆ. ಈ ಮೂಲಕ ಸಂಚಾರಕ್ಕೆ ಯೋಗ್ಯವಾದ ಹೊಸೂರು ರಸ್ತೆ, ಮತ್ತಷ್ಟು ವಿಸ್ತರಿಸಲಿದ್ದು ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಜನರಿಗೆ ಪ್ರಯೋಜನವಾಗಲೆಂಡು ಈ ಪ್ರಕಟಣೆ ಹೊರಡಿಸಲಾಗಿದೆ.
More From GoodReturns

Hebbal Tunnel Project: ಹೆಬ್ಬಾಳ 6 ಪಥದ ಸುರಂಗ ರಸ್ತೆಗೆ ಟೆಂಡರ್... 4 ಪ್ರಮುಖ ಕಂಪನಿಗಳಲ್ಲಿ ಬಿಡ್ಡಿಂಗ್ ಸ್ಪರ್ಧೆ!

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Bengaluru Water Cut: ಬೆಂಗಳೂರಿಗರೇ…ಈ ಭಾಗಗಳಲ್ಲಿ ನಾಳೆವರೆಗೂ ಕಾವೇರಿ ನೀರು ಬರಲ್ಲ! ಎಲ್ಲೆಲ್ಲಿ ತಿಳಿಯಿರಿ

Suburban Railway: ಬೆಂಗಳೂರು ಉಪನಗರ ರೈಲು 40,000 ಬಸ್ಗಳಿಗೆ ಸಮ…ದಿನಕ್ಕೆ 19 ಲಕ್ಷ ಪ್ರಯಾಣಿಕರಿಗೆ ಸುಲಭ!

Bengaluru Metro: ಮೆಟ್ರೋ ದರ ಏರಿಕೆ ಬಿಸಿ, ಮತ್ತೆ ಖಾಸಗಿ ವಾಹನಗಳು ರಸ್ತೆಗೆ! ಹೊಸ ದರದಲ್ಲಿ ಎಷ್ಟು ಬದಲಾವಣೆ?

ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಗೆ ಇನ್ನು ಹೆಚ್ಚು ದಿನ ಕಾಯಬೇಕಿಲ್ಲ…ಆದಷ್ಟು ಬೇಗ 2 ಗಂಟೆಗಳ ಪ್ರಯಾಣ!



Click it and Unblock the Notifications