ಬಿಬಿಎಂಪಿಗೆ ಬೆಂಗಳೂರು ನಿವಾಸಿ ದೂರು: 24 ಗಂಟೆಗಳಲ್ಲಿ ಡ್ರೈನೇಜ್ ಸಮಸ್ಯೆಗೆ ಸಿಕ್ತು ಪರಿಹಾರ!

ಬೆಂಗಳೂರು : ಬೆಂಗಳೂರಿನಲ್ಲಿ ಡ್ರೈನೇಜ್‌ ಸಮಸ್ಯೆಗಳು ಬಂದಾಗ ಸಾಮನ್ಯವಾಗಿ ಬಿಬಿಎಂಪಿ ಬಂದು ಅದನ್ನ ಸ್ವಚ್ಛ ಮಾಡೋದ್ರೊಳಗೆ ದಿನಗಳು ಬೇಕಾಗುತ್ತದೆ. ಮಲ್ಲೇಶ್ವರಂನಲ್ಲಿರುವ ನಿವಾಸಿವೊಬ್ಬರು ದುರ್ವಾಸನೆ ಬೀರುತ್ತಿದ್ದ ಒಳಚರಂಡಿ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿಗೆ ದೂರು ನೀಡಿದ್ದಾರೆ. ನಂತರ ದೂರು ನೀಡಿದ ಒಂದು ದಿನದೊಳಗೆ ಬಿಬಿಎಂಪಿ ಒಳಚರಂಡಿ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ.

ಆರಂಭದಲ್ಲಿ ತಮ್ಮ ನಿವಾಸದ ಸುತ್ತ ಬರುತ್ತಿದ್ದ ದುರ್ವಾಸನೆಯಿಂದ ಆತಂಕಗೊಂಡ ನಿವಾಸಿ, ಸತ್ತ ಪ್ರಾಣಿಯ ದುರ್ವಾಸನೆ ಎಂದು ಭಾವಿಸಿದ್ದರು. ಆದ್ರೂ ಸುತ್ತಲೂ ವಾಸನೆ ಹರಡುತ್ತಾ ಬಂದಾಗ ಪರಿಸ್ಥಿತಿ ಮತ್ತಷ್ಟು ಹಾಳಾಗತೊಡಗಿತು. ಇದನ್ನ ಗಮನಿಸಿದ ನಿವಾಸಿ ವಾಸನೆ ಎಲ್ಲಿಂದ ಬರುತ್ತಿದೆ ಎಂಬುದನ್ನ ಪತ್ತೆ ಹಚ್ಚಿದರು. ಹೀಗಾಗಿ ನಿವಾಸಿಗಳು ನಗರದ ನಾಗರಿಕ ಸಂಸ್ಥೆಯನ್ನು ಸಂಪರ್ಕಿಸಲು ನಿರ್ಧರಿಸಿದರು. ಇನ್ನು ಇವರ ಕರೆಗೆ ಓಗೊಟ್ಟು ಬಿಬಿಎಂಪಿ ಒಂದೇ ದಿನದಲ್ಲಿ ಈ ಸಮಸ್ಯೆಯನ್ನ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

24 ಗಂಟೆಗಳಲ್ಲಿ ಡ್ರೈನೇಜ್‌ ಸಮಸ್ಯೆಗೆ ಸಿಕ್ತು ಪರಿಹಾರ!

ಈ ಬಗ್ಗೆ ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ಹೀಗೆ, ನಾನು ಮಲ್ಲೇಶ್ವರಂನಲ್ಲಿ ವಾಸಿಸುತ್ತಿದ್ದೇನೆ. ಬೆಂಗಲೂರಿನಲ್ಲಿ ಈ ಡ್ರೈನೇಟ್‌ ಸಮಸ್ಯೆ ಎನ್ನುವುದು ಬಹಳ ಸಾಮಾನ್ಯ ಸಮಸ್ಯೆ ಇಂತಹದ್ದೆ ಸಮಸ್ಯೆಯನ್ನ ನಾವು ಇತ್ತೀಚೆಗೆ ಅನುಭವಿಸಬಾಕಾಯಿತು. ಒಳಚರಂಡಿಯಿಂದಾಗಿ ನಮ್ಮ ನಿವಾಸದ ಸುತ್ತಾ ದುರ್ವಾಸನೆ ಬರಲು ಶುರುವಾಯಿತು. ನಂತರ ದಿನಕಳೆದಂತೆ ವಾಸನೆ ಹೆಚ್ಚಾಗ ತೊಡಗಿತು. ಹೀಗಾಗಿ ನಾನು ಬಿಬಿಎಂಪಿಗೆ ದೂರು ನೀಡಿದೆ. ಅದರಲ್ಲಿ ನಾನು 'ಕುಂದುಕೊರತೆ' ಬಟನ್ ಮೇಲೆ ಕ್ಲಿಕ್ ಮಾಡಿದೆ. ಅಲ್ಲಿ ಪಟ್ಟಿ ಮಾಡಲಾದ ವಾಟ್ಸಾಪ್ ಸಂಖ್ಯೆಗೆ ನಾನು 'ಹಾಯ್' ಎಂದು ಸಂದೇಶ ರವಾನಿಸಿದೆ. ಸುಮಾರು ಒಂದು ಗಂಟೆಯ ನಂತರ, ನನಗೆ ಒಂದು ಕರೆ ಬಂದಿತು. ಅವರಿಗೆ ನಾನು ಸಮಸ್ಯೆಯನ್ನು ವಿವರಿಸಿದೆ, ಮತ್ತು ಅವರು ನನಗೆ ನನ್ನ ವಾರ್ಡ್‌ನ ಸಹಾಯವಾಣಿ ಸಂಖ್ಯೆಯನ್ನು ನೀಡಿದರು.

ಅದೇ ರೀತಿ ನಾನು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದೆ. ಮರುದಿನ ಬೆಳಿಗ್ಗೆ, ಒಳಚರಂಡಿ ನಿರ್ವಹಣಾ ದಳವು ಸ್ಥಳದಲ್ಲಿತ್ತು. ಅವರು ಒಳಚರಂಡಿಯನ್ನು ತೆರೆದು ಎಲ್ಲಿರುವ ಸಮಸ್ಯೆಯನ್ನ ಗುರುತಿಸಿದರು. ಆಂತರಿಕ ನೀರಿನ ನಿಶ್ಚಲತೆಯಿಂದಾಗಿ ಅಡಚಣೆ ಉಂಟಾಗಿದೆ ಎಂದರು. ಸುಮಾರು ಒಂದು ಗಂಟೆ ತೆಗೆದುಕೊಂಡು ಸಂಪೂರ್ಣ ದುರಸ್ತಿ ಕಾರ್ಯಾಚರಣೆ ಮಾಡಿದ್ರು. ಮತ್ತು ಈಗ ವಾಸನೆಯು ಹೋಗಿದೆ ಮತ್ತು ಸಮಸ್ಯೆಯನ್ನು ಸಂಪೂರ್ಣ ಪರಿಹರಿಸಲಾಗಿದೆ . ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಮಸ್ಯೆಯನ್ನ ದೂರು ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಬಹುದಾದ ಅಪ್ಲಿಕೇಶನ್ ಅನ್ನು ಬಿಬಿಎಂಪಿ ಹೊಂದಿದೆ ಎಂದು ನಿವಾಸಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ನಿವಾಸಿಯ ಈ ಪೋಸ್ಟ್‌ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಇವರು ಸಮಸ್ಯೆಯನ್ನ ತ್ವರಿತವಾಗಿ ಬಗೆಹರಿಸಿದ ರೀತಿ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಪೋಸ್ಟ್‌ಗೆ ಒಬ್ಬ Reddit ಬಳಕೆದಾರರು ಪ್ರತಿಕ್ರಿಯಿಸಿದ್ದು, ಯಾವುದೇ ನಗರವು ಪರಿಪೂರ್ಣವಾಗಿಲ್ಲ, ಅದನ್ನು ಹಂತ ಹಂತವಾಗಿ ಸುಧಾರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೂರು ನೀಡುವ ವಿಧಾನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಈ ಸುಂದರ ನಗರದ ಬಗ್ಗೆ ಒಳ್ಳೆಯದನ್ನು ಓದಲು ಸಂತೋಷವಾಗಿದೆ ಎಂದು ಓರ್ವ ವ್ಯಕ್ತಿ ಬರೆದಿದ್ದಾರೆ. ಹಾಗೆ ಇನ್ನೊಬ್ಬರು ಬರೆದಿದ್ದು, ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಕೇಳಲು ಅದ್ಭುತವಾಗಿದೆ, ನಾನು ಅದೇ ರೀತಿ ಮಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಬೆಂಗಳೂರು ನಿವಾಸಿಯ ಸಮಸ್ಯೆ ಬಗೆ ಹರಿಸುವ ರೀತಿಯನ್ನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಬಿಬಿಎಂಪಿಗೂ ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆಗಳ ನಡುವೆ ಬಿಬಿಎಂಪಿ ಸಾರ್ವಜನಿಕರ ಸಮಸ್ಯೆಯನ್ನ ಇಷ್ಟು ಗಣನೀಯವಾಗಿ ತೆಗೆದುಕೊಂಡು ತ್ವರಿತವಾಗಿ ಬಗೆಹರಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಇದೇ ರೀತಿ ಸಾರ್ವಜನಿಕರು ಸಮಸ್ಯೆಗಳನ್ನ ಎತ್ತಿಹಿಡಿದರೆ, ನಿಜವಾಗ್ಲೂ ಮುಂದಿನ ದಿನಗಳಲ್ಲಿ ನಾವು ಸ್ವಚ್ಛ ಬೆಂಗಳೂರನ್ನ ಕಾಣಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+