ಕೊರೊನಾದಿಂದ ಆರ್ಥಿಕತೆಗೆ ಏಕೆ ಹೊಡೆತ ಬೀಳುತ್ತದೆ ಗೊತ್ತಾ?

ಕೊರೊನಾ ಕಾಯಿಲೆ ಹರಡುತ್ತಿರುವುದೇ ಹೇಗೆ ಆರ್ಥಿಕ ಕುಸಿತಕ್ಕೆ ಕಾರಣ ಆಗಬಹುದು ಎಂಬ ಪ್ರಶ್ನೆ ಹಲವರಲ್ಲಿ ಇದೆ. ಕೊರೊನಾದಿಂದ ಹೇಗೆ ಆರ್ಥಿಕ ಚಕ್ರ ನಿಧಾನವಾಗುತ್ತಿದೆ ಎಂಬುದು ಹಾಗೂ ಯಾವ ಕ್ಷೇತ್ರಗಳಿಗೆ ಹೊಡೆತ ಬೀಳುತ್ತಿದೆ ಎಂಬುದನ್ನು ಒಮ್ಮೆ ಸಾದ್ಯಂತವಾಗಿ ಕಣ್ಣೆದುರು ತಂದುಕೊಂಡರೆ ಆಗ ಅರಿವಿಗೆ ಬರುತ್ತದೆ. ಅದನ್ನೇ ವಿವರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

* ಈಗಾಗಲೇ ನಗರ ಪ್ರದೇಶಗಳ ಮಾಲ್, ಚಿತ್ರಮಂದಿರಗಳು ಹಾಗೂ ಎಲ್ಲೆಲ್ಲಿ ಜನ ಸೇರುತ್ತಾರೋ ಅಂಥವುಗಳನ್ನು ಬಂದ್ ಮಾಡಲು ಆದೇಶ ನೀಡಲಾಗುತ್ತಿದೆ. ಇದರಿಂದ ಜನರು ಖರೀದಿ ಮಾಡುವುದೇ ಕಡಿಮೆ ಆಗುತ್ತದೆ. ಹಲವು ಬ್ರ್ಯಾಂಡ್ ಗಳ ಮಾರಾಟಕ್ಕೆ ಪೆಟ್ಟು ಬೀಳುವುದರಿಂದ ಅವುಗಳ ಆದಾಯಕ್ಕೆ ಕತ್ತರಿ ಬೀಳುತ್ತದೆ.

* ಮುಖ್ಯವಾಗಿ ಜನರು ಮನೆ ಬಿಟ್ಟು ಬಾರದಂತೆ ಯೋಜನೆ ರೂಪಿಸಲಾಗುತ್ತಿದೆ. ವರ್ಕ್ ಫ್ರಂ ಹೋಮ್ ನೀಡಲಾಗುತ್ತಿದೆ. ಶಾಲೆಗಳಿಗೆ ರಜಾ ನೀಡಲಾಗಿದೆ. ಅಲ್ಲಿಗೆ ಬಸ್, ಆಟೋ, ಉಬರ್, ಓಲಾ, ಹೋಟೆಲ್, ರಸ್ತೆ ಬದಿ ಅಂಗಡಿಗಳ ವ್ಯಾಪಾರ ಎಲ್ಲಕ್ಕೂ ಪೆಟ್ಟು ಬೀಳುತ್ತದೆ.

ಕೊರೊನಾದಿಂದ ಆರ್ಥಿಕತೆಗೆ ಏಕೆ ಹೊಡೆತ ಬೀಳುತ್ತದೆ ಗೊತ್ತಾ?

* ಕ್ರೀಡೆಗಳ ಆಯೋಜನೆ ರದ್ದು ಮಾಡಲಾಗುತ್ತಿದೆ ಅಥವಾ ಪ್ರೇಕ್ಷಕರಿಲ್ಲದೆ ನಡೆಸಲು ನಿರ್ಧರಿಸಲಾಗಿದೆ. ಆ ಕಾರಣಕ್ಕೆ ಜಾಹೀರಾತು ಮೂಲಕ ಬರುವ ಆದಾಯಗಳಿಗೆ ಕತ್ತರಿ ಬಿದ್ದಿದೆ.

* ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಪ್ರವಾಸಿ ಕ್ಷೇತ್ರಗಳು ಖಾಲಿ ಖಾಲಿಯಾಗಿದ್ದು, ಅದರ ಮೇಲೆ ಅವಲಂಬಿಸಿರುವವರಿಗೆ ಉದ್ಯೋಗ ಇಲ್ಲದಂತಾಗಿದೆ. ವಿಮಾನ ಯಾನ ಸಂಸ್ಥೆಗಳು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿವೆ.

* ಮಾಂಸಾಹಾರ ಸೇವನೆ ಬಗ್ಗೆ ದಿನಕ್ಕೊಂದರಂತೆ ನಾನಾ ವದಂತಿಗಳು ಹಬ್ಬುತ್ತಿರುವುದರಿಂದ ಕೋಳಿ ಸೇರಿದಂತೆ ಮಾಂಸ ಮಾರಾಟದ ಮೇಲೆ ಪರಿಣಾಮ ಬೀರಿದ್ದು, ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ನಷ್ಟ ಎದುರಾಗಿದೆ.

* ಆಮದು- ರಫ್ತು ಉದ್ಯಮದ ಮೇಲೂ ಕೊರೊನಾದ ಪರಿಣಾಮ ಆಗಿದೆ.

ಒಟ್ಟಾರೆಯಾಗಿ ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಹೇಗೆ ಕೊರೊನಾದ ಪ್ರಭಾವ ಎದುರಾಗಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಅಲ್ಲವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+