ಭಾರತವಾಗಲಿ ಅಥವಾ ಇತರೆ ಯಾವುದೇ ದೇಶವಾಗಲಿ ಅದರ ಮೇಲೆ ಯುಎಸ್‌ನಲ್ಲಿ ಆಗುವ ಎಲ್ಲ ಬೆಳವಣಿಗೆಗಳು ಪ್ರಭಾವ ಉಂಟು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಯುಎಸ್ ಫೆಡರಲ್ ಬಡ್ಡಿದರ ಬದಲಾವಣೆಯು ಹೆಚ್ಚಿನ ಪ್ರಭಾವ ಉಂಟು ಮಾಡುತ್ತದೆ. ಚಿನ್ನದ ಬೆಲೆಯ ಮೇಲೆ ಯುಎಸ್ ಫೆಡರಲ್ ದರ ಪ್ರಭಾವ ತಿಳಿಯುವುದಕ್ಕೂ ಮುನ್ನ ನಾವು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಎಂದರೇನು ಎಂದು ತಿಳಿಯೋಣ.
ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಫೆಡರಲ್ ಫಂಡ್ ದರ ಎಂದು ಕೂಡಾ ಕರೆಯಲಾಗುತ್ತದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡಿದಾಗ ಓವರ್‌ನೈಟ್ ಅವಧಿಗೆ ದೊಡ್ಡ ವಾಣಿಜ್ಯ ಬ್ಯಾಂಕುಗಳು ವಿಧಿಸುವ ಬಡ್ಡಿದರವು ಏರಿಕೆಯಾಗುತ್ತದೆ. ಅಂದರೆ ಯುಎಸ್ ಫೆಡ್ ಬಡ್ಡಿದರ ಹೆಚ್ಚಾದರೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರವು ಕೂಡಾ ದುಬಾರಿಯಾಗುತ್ತಾ ಸಾಗುತ್ತದೆ. ಭಾರತದಲ್ಲಿ ಆರ್‌ಬಿಐ ರೆಪೋ ದರ ಏರಿಸಿದಾಗ, ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರ ಹೆಚ್ಚಳವಾಗುತ್ತದೆ.

ಇದರಿಂದಾಗಿ ಭಾರತದಲ್ಲಿ ನಾವು ಬ್ಯಾಂಕ್‌ಗಳಲ್ಲಿ ಪಡೆಯುವ ಸಾಲದ ಬಡ್ಡಿದರವು ಹೆಚ್ಚಳವಾಗುತ್ತದೆ. ಸಾಲವು ದುಬಾರಿಯಾಗುವ ಸಂದರ್ಭದಲ್ಲೇ ಭಾರತದಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗುತ್ತದೆ ಎಂಬುವುದು ಗಮನಾರ್ಹವಾಗಿದೆ. ಅದರಿಂದಾಗಿ ಬಡ್ಡಿದರ ಹೆಚ್ಚಾದಾಗ ಫಿಕ್ಸಿಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡುವುದು ಆಕರ್ಷಕವಾಗಿರುತ್ತದೆ.
ಫೆಡರಲ್ ಬಡ್ಡಿದರ ಹೆಚ್ಚಳ ಚಿನ್ನ ದರದ ಮೇಲೆ ಪ್ರಭಾವ
ಯುಎಸ್‌ನಲ್ಲಿ ಅಥವಾ ಪ್ರಪಂಚದಾದ್ಯಂತ ಎಲ್ಲಿಯಾದರೂ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಜನರು ಚಿನ್ನದಂತಹ ಹೂಡಿಕೆಯನ್ನು ಫಿಕ್ಸಿಡ್ ಡೆಪಾಸಿಟ್‌ನಂತಹ ಸ್ಥಿರ ಬಡ್ಡಿದರ ನೀಡುವ ಹೂಡಿಕೆಗೆ ಬದಲಾವಣೆ ಮಾಡುತ್ತಾರೆ. ಇದು ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಬಂಗಾರ ದರವು ಇಳಿಕೆಯಾಗುತ್ತಾ ಸಾಗುತ್ತದೆ. ಆದರೆ ಇದು ಯಾವಾಗಲೂ ಕೂಡಾ ಆಗದು.
ಬಡ್ಡಿದರ ಏರಿಕೆಯು ಒಂದು ಪ್ರಭಾವ ಬೀರಬಹುದಾದ ಅಂಶವಾಗಿರುತ್ತದೆ. ಉದಾಹರಣೆಗೆ, ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಆದರೆ, ಚಿನ್ನದ ದರವು ಹೆಚ್ಚು ಏರಿಳಿತ ಕಂಡಿಲ್ಲ. ಏಕೆಂದರೆ ಬಡ್ಡಿದರದಲ್ಲಿನ ಹೆಚ್ಚಳವು ಯಾವಾಗಲೂ ಒಂದು ಪ್ರಭಾವ ಬೀರಬಹುದಾದ ಅಂಶವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಯುಎಸ್ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ವ್ಯಾಖ್ಯಾನವು ಹೆಚ್ಚು ಮಹತ್ವದ್ದಾಗಿದೆ.
"ಬಡ್ಡಿದರ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದರೆ, ಚಿನ್ನವು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ. ಬಡ್ಡಿದರಗಳ ಹೆಚ್ಚಳವು ಈಗಾಗಲೇ ಅಂಶವಾಗಿರುವ ಕಾರಣ, ಚಿನ್ನವು ಇಂದು ಔನ್ಸ್‌ಗೆ 1883 ಡಾಲರ್ ಆಗಿದ್ದು ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ," ಎಂದು ಯುಎಸ್ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ತಿಳಿಸುತ್ತಾರೆ.
ಭಾರತದಲ್ಲಿ ಚಿನ್ನದ ಬೆಲೆಗಳ ಕಥೆಯೇನು?
ಭಾರತದಲ್ಲಿ, ಚಿನ್ನದ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಂದ ಪ್ರಭಾವಿತವಾಗಿವೆ. ಅದಕ್ಕೆ ಮುಖ್ಯ ಕಾರಣ ನಾವು ಚಿನ್ನವನ್ನು ಆಮದು ಮಾಡಿಕೊಳ್ಳುವುದು ಅಗಿದೆ. ನಮ್ಮ ದೇಶದಲ್ಲಿ ನಾವಾಗಿಯೇ ಚಿನ್ನದ ಗಣಿಗಾರಿಕೆಯನ್ನು ನಡೆಸುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದರೆ, ಭಾರತದಲ್ಲೂ ಏರಿಕೆಯಾಗುತ್ತದೆ. ಆದ್ದರಿಂದ, ಯುಎಸ್ ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದಾಗ, ಅದು ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ನೇರ ಪ್ರಭಾವ ಬೀರಬಹುದು.
ಬಡ್ಡಿದರಗಳನ್ನು ಹೆಚ್ಚಿಸಿದಾಗ ಹೂಡಿಕೆದಾರರು ಚಿನ್ನದಿಂದ ಹಣವನ್ನು ಬೇರೆಡೆ ವರ್ಗಾವಣೆ ಮಾಡುತ್ತದೆ. ಹೆಚ್ಚಾಗಿ ಸ್ಥಿರ ಬಡ್ಡಿದರ ಇರುವ ಹೂಡಿಕೆ ಆಯ್ಕೆಗಳಿಗೆ ವರ್ಗಾವಣೆ ಮಾಡುತ್ತಾರೆ. ಈ ರೀತಿಯಾಗಿ ಬದಲಾವಣೆ ಮಾಡದಿದ್ದರೂ ಕೂಡಾ ಬಡ್ಡಿದರವು ಹೆಚ್ಚಾಗುತ್ತಿದೆ ಎಂಬ ಭಾವನಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿನ್ನದ ಬೆಲೆಯು ಸಂಪೂರ್ಣವಾಗಿ ಕುಸಿಯಬಹುದು.


Click it and Unblock the Notifications