ಮೇ 21 ಕ್ಕೆ (ಶುಕ್ರವಾರ) ಕೊನೆಗೊಂಡ ವಾರದಲ್ಲಿ ಭಾರತೀಯ ಷೇರುಪೇಟೆಯು ಶೇಕಡಾ 3ಕ್ಕಿಂತ ಹೆಚ್ಚಾಗಿದೆ. ಸತತ ಕುಸಿತಕ್ಕೆ ಸಾಕ್ಷಿಯಾಗಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಎರಡು ವಹಿವಾಟುಗಳಲ್ಲಿ ಸಕಾರಾತ್ಮಕ ಹಾದಿಗೆ ಮರಳಿತು. ಇದಕ್ಕೆ ಪ್ರಮುಖ ಕಾರಣ ಕೋವಿಡ್-19 ಪಾಸಿಟಿವ್ ಸಂಖ್ಯೆಗಳ ಇಳಿಕೆಯು ಆಗಿದೆ.
ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರೇರಿತ ಲಾಕ್‌ಡೌನ್ ಅನ್ನು ಸಡಿಲಗೊಳಿಸುವಿಕೆ ಅಥವಾ ತೆಗೆದುಹಾಕುವ ಆಶಯದೊಂದಿಗೆ ಷೇರುಪೇಟೆ ಚೇತರಿಕೆ ಕಾಣುತ್ತಿದೆ. ದೇಶಾದ್ಯಂತ ದೈನಂದಿನ ಹೊಸ ಕೋವಿಡ್-19 ಪ್ರಕರಣಗಳು ಮೂರು ಲಕ್ಷಕ್ಕಿಂತ ಕಡಿಮೆ ಉಳಿದಿವೆ. ಇದು ದೇಶಿಯ ಹೂಡಿಕೆದಾರರು, ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಹೆಚ್ಚು ಪ್ರೇರೇಪಿಸಿದೆ.
ಕಳೆದ ವಾರ ಬಿಎಸ್‌ಇ ಸೆನ್ಸೆಕ್ಸ್ 1,807.93 ಪಾಯಿಂಟ್ಸ್ (3.70 %) ಏರಿಕೆ ಕಂಡು 50,540.48 ಪಾಯಿಂಟ್ಸ್ ತಲುಪಿದ್ದರೆ, ನಿಫ್ಟಿ 497.5 ಪಾಯಿಂಟ್ಸ್ (3.38%) ಸೇರಿಸಿ 15,175.3 ಮಟ್ಟಕ್ಕೆ ತಲುಪಿದೆ.
ಬಿಎಸ್‌ಇ ಮಿಡ್ ಕ್ಯಾಪ್ ಏರಿಕೆ
ಬಿಎಸ್‌ಇ ಮಿಡ್-ಕ್ಯಾಪ್ ಸೂಚ್ಯಂಕ ಶೇ 4.77 ರಷ್ಟು ಏರಿಕೆಯಾಗಿದ್ದು, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಐಸಿಐಸಿಐ ಸೆಕ್ಯುರಿಟೀಸ್, ಇಂಡಿಯನ್ ಹೋಟೆಲ್ ಕಂಪನಿ, ಒಬೆರಾಯ್ ರಿಯಾಲ್ಟಿ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಬೆಂಬಲಿಸಿವೆ.
ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಹೆಚ್ಚಳ
ಚೆವಿಯಟ್ ಕಂಪನಿ, ಟಿಸಿಐ ಎಕ್ಸ್‌ಪ್ರೆಸ್, ಎಚ್‌ಎಫ್‌ಸಿಎಲ್, ಆಟೋಮೋಟಿವ್ ಆಕ್ಸಲ್ಸ್, ಯೂನಿವರ್ಸಲ್ ಕೇಬಲ್ಸ್ ಮತ್ತು ವಿಂಧ್ಯಾ ಟೆಲಿಲಿಂಕ್ ಶೇಕಡಾ 25 ರಿಂದ 41ರಷ್ಟು ಏರಿಕೆಯೊಂದಿಗೆ ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ. 4.19 ರಷ್ಟು ಏರಿಕೆಗೊಂಡಿದೆ. ಬಜಾಜ್ ಹಿಂದೂಸ್ಥಾನ್ ಶುಗರ್, ಡೈಮೈನ್ ಮತ್ತು ಕೆಮಿಕಲ್ಸ್, ವಿಮ್ಟಾ ಲ್ಯಾಬ್ಸ್, ನವ ಭಾರತ್ ವೆಂಚರ್ಸ್, ಸ್ಟರ್ಲಿಂಗ್ ಮತ್ತು ವಿಲ್ಸನ್ ಸೋಲಾರ್ ಶೇಕಡಾ 10 ರಿಂದ 15ರಷ್ಟು ಕುಸಿದಿದೆ.
ಬಿಎಸ್‌ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 3.26 ರಷ್ಟು ಹೆಚ್ಚಳ
ಬಿಎಸ್‌ಇ ಲಾರ್ಜ್ ಕ್ಯಾಪ್ ಸೂಚ್ಯಂಕವು ಇಂಡಸ್ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಾಷ್, ಹಿಂದೂಸ್ತಾನ್ ಜಿಂಕ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾಗಳೊಂದಿಗೆ ಶೇ 3.26 ರಷ್ಟು ಸೇರಿಸಿದೆ. ಭಾರತಿ ಏರ್‌ಟೆಲ್, ಎನ್‌ಎಂಡಿಸಿ, ಗೇಲ್ ಇಂಡಿಯಾ, ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮತ್ತು ಮಾರಿಕೊ ಪ್ರಮುಖವಾಗಿ ನಷ್ಟ ಅನುಭವಿಸಿವೆ.
ಸೆನ್ಸೆಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚು ಗಳಿಕೆ
ಬಿಎಸ್ಇ ಸೆನ್ಸೆಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯದ ವಿಷಯದಲ್ಲಿ ಹೆಚ್ಚಿನದನ್ನು ಸೇರಿಸಿದೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಭಾರ್ತಿ ಏರ್‌ಟೆಲ್ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಹೆಚ್ಚಿನದನ್ನು ಕಳೆದುಕೊಂಡಿತು.
ಇನ್ನು ನಿಫ್ಟಿ ಬ್ಯಾಂಕ್ ಶೇಕಡಾ 7.5ರಷ್ಟು ಲಾಭದೊಂದಿಗೆ ಹೆಚ್ಚಾಗಿದ್ದು, ನಂತರದ ಸ್ಥಾನಗಳಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇಕಡಾ 7 ಮತ್ತು ನಿಫ್ಟಿ ರಿಯಾಲ್ಟಿ ಶೇಕಡಾ 6.7ರಷ್ಟು ಹೆಚ್ಚಾಗಿದೆ.
ಎಫ್‌ಐಐ 1,753.9 ಕೋಟಿ ರೂ. ಮೌಲ್ಯದ ಷೇರು ಮಾರಾಟ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,753.9 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಸಮಯದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 1,318.52 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.
ಇದುವರೆಗೂ ಮೇ ತಿಂಗಳಿನಲ್ಲಿ ಎಫ್‌ಐಐ ಎಫ್‌ಐಐಗಳು 10,467.15 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಡಿಐಐಗಳು 2,209.72 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.


Click it and Unblock the Notifications