ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅಧಿಕಾರವಧಿ ಮತ್ತೆ ಐದು ವರ್ಷಗಳ ಕಾಲ ಮುಂದುವರಿದಿದೆ. ಮುಕೇಶ್ ಅಂಬಾನಿ 2029 ರವರೆಗೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಲಿದ್ದಾರೆ. ಅಂದರೆ ಮುಕೇಶ್‌ಗೆ ಮತ್ತೊಂದು ಐದು ವರ್ಷಗಳ ಅವಧಿಯನ್ನು ನೀಡಲು ಷೇರುದಾರರ ಅನುಮೋದನೆಯನ್ನು ಕೋರಲಾಗಿದೆ.
ಸಂಸ್ಥೆಯ ನಿಯಮದ ಪ್ರಕಾರ ಯಾವುದೇ ವ್ಯಕ್ತಿಗೆ 70 ವರ್ಷವಾದರೆ ಅವರು ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡುವಂತಿಲ್ಲ. ನಿವೃತ್ತಿಯನ್ನು ಪಡೆಯಬೇಕು. ಪ್ರಸ್ತುತ 66ರ ಹರೆಯದ ಮುಕೇಶ್ ಅಂಬಾನಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸುವಾಗ ಅವರ ವಯಸ್ಸು 70 ವರ್ಷ ವಯಸ್ಸನ್ನು ದಾಟುತ್ತದೆ. ಆ ವಯಸ್ಸಿನ ಮಿತಿಯನ್ನು ಮೀರಿ ಅವರನ್ನು ನೇಮಕ ಮಾಡಲು ಷೇರುದಾರರಿಂದ ವಿಶೇಷ ನಿರ್ಣಯದ ಅಗತ್ಯವಿದೆ.

ಮುಕೇಶ್ ಅಂಬಾನಿ ಅವರು 1977 ರಿಂದ ರಿಲಯನ್ಸ್ ಮಂಡಳಿಯಲ್ಲಿದ್ದಾರೆ ಮತ್ತು ಜುಲೈ 2002 ರಲ್ಲಿ ಅವರ ತಂದೆ ಮತ್ತು ಗುಂಪಿನ ಪಿತಾಮಹ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ ಕಂಪನಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅಂಬಾನಿ ಸಂಬಳವು ಶೂನ್ಯವಾಗಿದೆ. ಆದರೂ ಕೂಡಾ ದೇಶದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವುದು ಹೇಗೆ, ಇಲ್ಲಿದೆ ವಿವರ.
ಶೂನ್ಯ ವೇತನ ಪಡೆಯುವ ಅಂಬಾನಿ
ಮುಕೇಶ್ ಅಂಬಾನಿ 2008-09ರ ಹಣಕಾಸು ವರ್ಷದಿಂದ 2019-20ರವರೆಗೆ 15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಕಾರಣಿಸಿಕೊಂಡ ಬಳಿಕ ಅಂದರೆ ಹಣಕಾಸು ವರ್ಷ 2020-21ರಿಂದ ಮುಕೇಶ್ ಅಂಬಾನಿ ಯಾವುದೇ ವೇತನವನ್ನು ಪಡೆದುಕೊಳ್ಳುತ್ತಿಲ್ಲ. ಪ್ರಸ್ತುತ ಮುಕೇಶ್ ಅಂಬಾನಿಗೆ ಯಾವುದೇ ಸಂಬಳ ಅಥವಾ ಲಾಭ ಆಧಾರಿತ ಕಮಿಷನ್ ನೀಡಬಾರದು ಎಂದು ರಿಲಯನ್ಸ್ ಮಂಡಳಿ ಶಿಫಾರಸು ಮಾಡಿದೆ.
ಸವಲತ್ತುಗಳು ಏನಿದೆ?
ವ್ಯಾಪಾರ ಪ್ರವಾಸಗಳಲ್ಲಿ ಸಂಗಾತಿ ಮತ್ತು ಸಹಾಯಕರು ಸೇರಿದಂತೆ ಪ್ರಯಾಣ, ಬೋರ್ಡಿಂಗ್ ಮತ್ತು ವಸತಿಗಾಗಿ ತಗಲುವ ವೆಚ್ಚವನ್ನು ಮರುಪಾವತಿ ಪಡೆಯಲು ಅಂಬಾನಿ ಅರ್ಹರಾಗಿರುತ್ತಾರೆ. ಕಂಪನಿಯ ವ್ಯವಹಾರದಲ್ಲಿ ಬಳಸಲು ಕಾರುಗಳನ್ನು ಒದಗಿಸಲಾಗುತ್ತದೆ. ಕಂಪನಿಯು ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆಗಾಗಿಯೂ ಪಾವತಿ ಮಾಡುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ವೇತನ ಮಾತ್ರ ಶೂನ್ಯವಾಗಿದೆ. ಕಳೆದ ವರ್ಷವು ಕೂಡಾ ಮುಕೇಶ್ ಅಂಬಾನಿ ಯಾವುದೇ ಆದಾಯವನ್ನು ಪಡೆದುಕೊಂಡಿಲ್ಲ. ಈ ವರ್ಷವನ್ನು ಸೇರಿಸಿದರೆ ಬಿಲಿಯನೇರ್ ಮುಕೇಶ್ ಅಂಬಾನಿ ಸತತ ಮೂರನೇ ವರ್ಷ ತನ್ನ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಯಾವುದೇ ವೇತನವನ್ನು ಪಡೆದಿಲ್ಲ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications