ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಂಪನಿ ಪ್ರೆಸ್ಟೀಜ್ ಗ್ರೂಪ್. ಇರ್ಫಾನ್ ರಜಾಕ್ ಅವರ ಮುಂದಾಳತ್ವದಲ್ಲಿ ಈ ಕಂಪನಿ ದೈತ್ಯವಾಗಿ ಬೆಳೆದಿದೆ. ಕಳೆದ 48 ವರ್ಷಗಳ ಸತತ ಪರಿಶ್ರಮ ಹಾಗೂ ಶ್ರದ್ಧೆಯ ಫಲವಾಗಿ ಇರ್ಫಾನ್ ಅವರು ಇಂತಹ ದೊಡ್ಡ ದೈತ್ಯ ಕಂಪಿಯನ್ನು ಸ್ಥಾಪಿಸಲು ಕಾರಣವಾಗಿದೆ. ಈ ಸಾಧಕರಿಗೆ ಕುಟುಂಬಸ್ಥರಾದ ರಿಜ್ವಾನ್, ನುಮಾನ್ ರಜಾಕ್ ಸಹ ಸಾಥ್ ನೀಡಿದ್ದರ ಫಲವಾಗಿ ಕಂಪನಿ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ.
ಈಗಾಗಲೇ ಈ ಕಂಪನಿ ಸುಮಾರು 300ಕ್ಕೂ ಹೆಚ್ಚು ಪ್ರೊಜಕ್ಟ್‌ಗಳನ್ನು ಪೂರ್ಣಗೊಳಿಸಿದೆ. ಈ ಸಂಸ್ಥೆ ಅಡಿಯಲ್ಲಿ 180 ಮಿಲಿಯನ್ ಸ್ಕ್ವೇರ್ ಫೀಟ್ ರೆಸೆಡಿಂಟಿಲ್, ಕಮರ್ಸಿಯಲ್, ರಿಟೇಲ್ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದೆ.

ಈ ಉದ್ಯಮಿಗಳ ಇನ್ನೊಂದು ವ್ಯಾಪರವಿದೆ. ಈ ವ್ಯಾಪಾರ ಸಹ ಹೆಮ್ಮರವಾಗಿ ಬೆಳೆದಿದೆ. ಇರ್ಫಾನ್ ರಜಾಕ್ ಅವರ ತಂದೆ ಸತಾರ್ ಅವರು 1956ರಲ್ಲಿ ಪ್ರೆಸ್ಟೀಜ್ ಹೌಸ್ ಫಾರ್ ಮೆನ್ ಆರಂಭಿಸಿದರು. ಕಮರ್ಸಿಯಲ್ ಸ್ಟ್ರೀಟ್ ನಲ್ಲಿ 600 ಸ್ಕ್ವೇರ್ ಫೀಟ್ ಸ್ಥಳದಲ್ಲಿ ಈ ಉದ್ಯಮ ಆರಂಭಿಸಲಾಯಿತು. ಈಗ ಈ ಉದ್ಯಮ ಏಳ ಮಹಡಿಗಳ 20000 ಸ್ಕ್ವೇರ್ ಫೀಟ್‌ನಲ್ಲಿ ವಿಸ್ತರಿಸಲಾಗಿದೆ. ಇವರು ರೆಡಿ ಟು ವೇರ್ ಬಟ್ಟೆಗಳನ್ನು ತಯಾರಿಸುತ್ತಾರೆ. ಇವರ ಪರ್ಫೆಕ್ಟ್ ಸ್ಟಿಚಿಂಗ್ ಜರನ್ನು ಇವರ ಮಳಿಗೆಯತ್ತ ಮುಖ ಮಾಡುವಂತೆ ಮಾಡಿದೆ.
ಇರ್ಫಾನ್ ರಜಾಕ್ ಯಾರು?
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇರ್ಫಾನ್ ರಜಾಕ್ ಪ್ರವೇಶಿಸುವ ಮೊದಲು ಕುಟುಂಬದ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು. ಇಂದು ಅವರು ಭಾರತದ ಟಾಪ್ ಬಿಲ್ಡರ್ ಹಾಗೂ ಡೆವಲಪರ್ಸ್‌ಗಳಲ್ಲಿ ಒಬ್ಬರು. ಪ್ರೆಸ್ಟೀಜ್ ಗ್ರೂಪ್ ಬೆಳವಣಿಗೆಯಲ್ಲಿ ಇವರ ಪರಿಶ್ರಮ ಹಾಗೂ ಚಾಣಕ್ಯತನ ಅಡಗಿದೆ. ಫೋರ್ಬ್ಸ್ ಪ್ರಕಾರ ಇರ್ಫಾನ್ ರಜಾಕ್ ಸುಮಾರು 15,000 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಇವರು ದೇಶದ ಗಣ್ಯ ಉದ್ಯಮಿಗಳಲ್ಲಿ ಒಬ್ಬರು.
ಇರ್ಫಾನ್ ರಜಾಕ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಎಲ್ಲರಿಗೂ ಪರಿಚಯವಾಗಿದ್ದು, 2013ರಲ್ಲಿ. ಆ ವರ್ಷ ಅವರಿಗೆ ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟರ್ಡ್ ಸರ್ವೇಯರ್ಸ್ (FRICS) ಫೆಲೋಶಿಪ್ ನೀಡಿ ಗೌರವಿಸಿತು. 2008 ರಲ್ಲಿ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಪ್ರಶಸ್ತಿ, ರಿಯಲ್ ಎಸ್ಟೇಟ್ ಪ್ರೊಫೆಷನಲ್ ಮತ್ತು 2010 ರಲ್ಲಿ ಕನ್ಸ್ಟ್ರಕ್ಷನ್ ಸೋರ್ಸ್ ಇಂಡಿಯಾದಿಂದ ಕಮರ್ಷಿಯಲ್ ಮಾಸ್ಟರ್ ಬಿಲ್ಡರ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ..
ಇರ್ಫಾನ್ ರಜಾಕ್ ಹಿನ್ನೆಲೆ
ರೋಟರಿ ಮಿಡ್‌ಟೌನ್ ಸಹಯೋಗದಲ್ಲಿ ಸ್ಥಾಪಿಸಲಾದ ಪ್ರೆಸ್ಟೀಜ್ ಸಿಟಿಜನ್ ಎಕ್ಸ್‌ಟ್ರಾ ಆರ್ಡಿನೇರ್ ಪ್ರಶಸ್ತಿಯ ಮೂಲಕ, ಬೆಂಗಳೂರಿಗೆ ನಿಸ್ವಾರ್ಥವಾಗಿ ಕೊಡುಗೆ ನೀಡಿದ ನಾಗರಿಕರನ್ನು ರಜಾಕ್ ಗೌರವಿಸುತ್ತಾರೆ. ಇರ್ಫಾನ್ ರಜಾಕ್ ಬೆಂಗಳೂರಿನ ಸೇಂಟ್ ಜಾನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಸೇಂಟ್ ಜೋಸೆಫ್ ಓಲ್ಡ್ ಬಾಯ್ಸ್ ಅಸೋಸಿಯೇಶನ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


Click it and Unblock the Notifications