ಕಡಿಮೆ ಹೂಡಿಕೆಯಿಂದ 2 ಕೋಟಿ ಹಣ ಗಳಿಸಬೇಕೆಂಬ ಆಸೆ ಇದ್ಯಾ..? ಹಾಗಿದ್ದರೆ ತಪ್ಪದೇ ಈ ಸುದ್ದಿಯನ್ನು ನೀವು ಓದಲೇಬೇಕು.. ಹೌದು,ಆದಾಯವನ್ನು ಗಳಿಸಲು ಹಲವಾರು ಯೋಜನೆಗಲು ಇವೆ. ಆದರೆ ಕಡಿಮೆ ಆದಾಯದಿಂದ ಹೆಚ್ಚಿನ ಲಾಭವನ್ನು ಗಳಿಸಲು ಬೆಸ್ಟ್ ಆಯ್ಕೆ ಎಂದರೆ ಎಸ್‌ಐಪಿ (SIP) ಈ ಯೋಜನೆಯ ನಿಧಿಯಲ್ಲಿ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಶ್ಚಿಂತೆಯಿಂದ ನಿವೃತ್ತಿ ಜೀವನವನ್ನು ಸಾಗಿಸಬಹುದು. ಹಾಗಿದ್ದರೆ ಕೇವಲ ತಿಂಗಳಿಗೆ ಹತ್ತು ಸಾವಿರ ರೂಪಾಯಿಯ್ನು ಹೂಡಿಕೆ ಮಾಡಿ 2 ಕೋಟಿ ಹಣ ಗಳಿಸಲು ಎಷ್ಡು ಸಮಯಬೇಕಾಗುತ್ತದೆ? ಎಂಬ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

SIP ಎಂದರೇನು?
SIP ಎಂದರೆ ಮ್ಯೂಚುವಲ್ ಫಂಡ್‌ಗಳು ನೀಡುವ ಹೂಡಿಕೆಯ ವಿಧಾನ. ಇದು ಒಟ್ಟು ಮೊತ್ತಕ್ಕಿಂತ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕನಿಷ್ಠ ಕಂತು 500 ರೂ.ಗಳಿಂದ ಆರಂಭವಾಗುತ್ತದೆ. ಈ ಸ್ಥಿರ ಹೂಡಿಕೆಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಸಹ ಪಡೆಯಬಹುದು. ಇವು ನಿಯಮಿತವಾಗಿ ಹೂಡಿಕೆ ಮಾಡಲು ಮತ್ತು ಉಳಿತಾಯ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ನಿಮ್ಮ ಹಣಕಾಸಿನ ಗುರಿಗಳಿಗೆ ಬದ್ಧರಾಗಿರಲು ಸಹಕಾರಿಯಾಗಿದೆ.
ನೀವು ತಿಂಗಳಿಗೆ 10,000 ರೂ.ಗಳಂತೆ ಹೂಡಿಕೆ ಮಾಡಿ 2 ಕೋಟಿ ರೂ. ಗಳಿಸುವ ಗುರಿ ಹೊಂದಿದ್ದರೆ, ಅದನ್ನು ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿದುಕೊಳ್ಳವುದು ತುಂಬಾನೇ ಮುಖ್ಯ ಹಾಗಾಗಿ ನೀವು ಮೊದಲು ತಿಂಗಳಿಗೆ
10,000 ರೂ.ಗಳ SIP ಹೂಡಿಕೆ ಮಾಡಲು ಬಯಸುತ್ತೀರೋ ಅಥವಾ ನಿಮ್ಮ ಬಳಿ ಅಷ್ಟು ಮೊತ್ತದ ಹಣವಿದೆಯೇ ಎಂಬುದನ್ನು ಮೊದಲು ಗಮನಹರಿಸಿಕೊಳ್ಳಿ.ನಂತರ ಮುಂದಿನ ಯೋಚನೆಯನ್ನು ಮಾಡಿದೆ.
ನೀವು ಹೋಡಿಕೆ ಮಾಡುವ ಹಣ ವರ್ಷಕ್ಕೆ ಅಂದಾಜು ಶೇ. 12ರಷ್ಟು ಆದಾಯವನ್ನು ನೀಡುತ್ತವೆ ಎಂದುಕೊಂಡರೆ ನಿಮ್ಮ ಹೂಡಿಕೆಯ ನಿರೀಕ್ಷಿತ ಆದಾಯದ ದರವನ್ನು ಅವಲಂಬಿಸಿರುತ್ತದೆ.
2 ಕೋಟಿ ರೂ.ಗಳಿಸಲು ಎಷ್ಟು ಸಮಯಬೇಕಾಗುತ್ತದೆ?
ನೀವು ತಿಂಗಳಿಗೆ ಹತ್ತು ಸಾವಿರದಂತೆ SIP ಹೂಡಿಕೆಯೊಂದಿಗೆ ಹಣವನ್ನು ಇಟ್ಟರೆ 2 ಕೋಟಿ ರೂ.ಗಳಿಸಲು ಸುಮಾರು 26 ವರ್ಷ 5 ತಿಂಗಳುಗಳು ಬೇಕಾಗುಬಹುದು.
ನಿಮ್ಮ 2 ಕೋಟಿ ರೂ. ಗುರಿಯನ್ನು ತಲುಪಲು, ಸುಮಾರು 26 ವರ್ಷ ಮತ್ತು 5 ತಿಂಗಳುಗಳ ಕಾಲ ಹಣವನ್ನು ಉಳಿಸಬೇಕಾಗುತ್ತದೆ.
ಮ್ಯೂಚುಯಲ್ ಫಂಡ್ ಗಳಲ್ಲಿ ಎಲ್ಲಾ SIP ಫಂಡ್ ಗಳು ಒಂದೇ ತರವಾಗಿ ಇರುವುದಿಲ್ಲ.ಆದ್ದರಿಂದ ಎಲ್ಲಾ ಅಂಶವನ್ನು ಗಮನದಲ್ಲಿ ಇಟ್ಟುಕೋಂಡು ಸೂಕ್ತವಾದ ಹೂಡಿಕೆಯ ವಿಧಾನವನ್ನು ಆರಿಸಿಕೊಳ್ಳವುದು ಉತ್ತಮ. ಒಂದೇ ವೇಳೆ ನಿಮ್ಮಗೆ ಯಾವುದೇ ಅನುಮಾನಗಳು ಇದ್ದರೆ ಆರ್ಥಿಕ ತಜ್ಞರರುಗಳ ಸಲಹೆಯನ್ನು ಪಡೆದುಕೊಳ್ಳಬಹುದು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.


Click it and Unblock the Notifications