ಲಾಟರಿ ಲೈಫೇ ಹಾಗೆ, ಹತ್ತಿದ್ರೆ ಬಂಪರ್, ಕೈ ಕೊಟ್ಟರೆ ಫುಲ್ ಪಾಪರ್. ಆದರೆ ಪಶ್ಚಿಮ ಬಂಗಾಳದಲ್ಲಿ ಒಂದು ರಾತ್ರಿ ಕಳೆದು ಬೆಳಕು ಮೂಡುವುದರಲ್ಲೇ 70ರ ಅಂಕಲ್ ಒಬ್ಬರು ಕೋಟ್ಯಧಿಪತಿ ಆಗಿದ್ದಾರೆ.
ಊಟ ಮಾಡಿ ಮಲಗಿದ ಆ ಮನೆಯ ಯಜಮಾನ ಕನಸಿನಲ್ಲೂ ಸಾಹುಕಾರನಾಗುತ್ತೀನಿ ಎಂದುಕೊಂಡಿರಲಿಲ್ಲ. ಅಂದುಕೊಂಡಿದ್ದು ಒಂದಾದರೆ, ಅಸಲಿಗೆ ನಡೆದಿದ್ದೇ ಬೇರೆ. ದೇವರ ವರವೋ ಪೂರ್ವಜನ್ಮದ ಪುಣ್ಯವೋ ಗೊತ್ತಿಲ್ಲ. ಖಾಲಿ ಖಾಲಿಯಾಗಿದ್ದ ವ್ಯಕ್ತಿಯೊಬ್ಬ ಕಿಂಚಿತ್ತೂ ಶ್ರಮ ಪಡದೇ ಇದೀಗ ಕೋಟಿ ರುಪಾಯಿಗೆ ಒಡೆಯನಾಗಿದ್ದಾನೆ.
ಅಷ್ಟಕ್ಕೂ ಇಂಥದೊಂದು ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದವಾನ್ ಕಲ್ನಾದ ಸಹಾಪರಾ ಗ್ರಾಮದಲ್ಲಿ ನಡೆದಿದೆ. ನಿವೃತ್ತ ಟ್ಯೂಬ್ ವೆಲ್ ಆಪರೇಟರ್ ಆಗಿದ್ದ 70 ವರ್ಷದ ಇಂದ್ರ ನಾರಾಯಣ ಸೇನ್, ತಾವು ಖರೀದಿಸಿದ 60 ರುಪಾಯಿ ಲಾಟರಿಯಿಂದ ಒಂದು ಕೋಟಿ ರುಪಾಯಿ ಬಂಪರ್ ಬಹುಮಾನ ಪಡೆದಿದ್ದಾರೆ.
10 ಲಾಟರಿ ಖರೀದಿ ಮಾಡುತ್ತಿದ್ದ ಸೇನ್
ಪ್ರತಿದಿನ ಕೇವಲ 60 ರುಪಾಯಿ ಕೊಟ್ಟು ನಾಗಾಲ್ಯಾಂಡ್ ರಾಜ್ಯ ಲಾಟರಿ ಖರೀದಿ ಮಾಡುತ್ತಿದ್ದ ಇಂದ್ರ ನಾರಾಯಣ ಸೇನ್ ಭವಿಷ್ಯವೇ ಬದಲಾಗಿದೆ. ಗುಪ್ತಿರಾ ಮಾರುಕಟ್ಟೆಯಲ್ಲಿ ಕಳೆದ ಜನವರಿ.05ರಂದು ಲಾಟರಿ ಟಿಕೆಟ್ ಖರೀದಿಸಿದ್ದ ಸೇನ್, ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಭಾಗ್ಯದ ಲಕ್ಷ್ಮಿ ಅವರ ಮನೆ ಬಾಗಿಲಿಗೆ ಒಲಿದು ಬಂದಿದ್ದಳು.
ಸಂಜೆ ವೇಳೆ ಮನೆ ಬಾಗಿಲಿಗೆ ಖುಷಿಯ ವಿಚಾರ
ಲಾಟರಿ ಟಿಕೆಟ್ ಕೊಂಡವನಿಗಿಂತ ಟಿಕೆಟ್ ಮಾರಾಟ ಮಾಡಿದವನಿಗೇ ಮನಪುಳಕವಾಗಿತ್ತು. ಏಕೆಂದರೆ, ತಮ್ಮ ಅಂಗಡಿಯಿಂದ ಮಾರಾಟವಾದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ ಅಂದರೆ ಒಂದು ಕೋಟಿ ರುಪಾಯಿ ಬಂದಿತ್ತು. ಅದರ ವಿಜೇತರಾಗಿದ್ದ ಸೇನ್ ಮನೆಗೆ ಸ್ವತಃ ಅಂಗಡಿ ಮಾಲೀಕ ಮಿಂಟು ಬಿಸ್ವಾಸ್ ತೆರಳಿದ್ದರು.
ಅಲಲೆ, ನಂಗೆ ಒಂದು ಕೋಟಿ ರುಪಾಯಿ ಬಹುಮಾನ!
ಸ್ವತಃ ಲಾಟರಿ ಟಿಕೆಟ್ ಮಾರಾಟ ಮಾಡಿದ ಅಂಗಡಿಯವನೇ ಮನೆಗೆ ಬಂದು ಹೇಳಿದರೂ ಅದನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಇಂದ್ರ ನಾರಾಯಣ ಸೇನ್ ಇರಲಿಲಲ್ಲ. ಕಾರಣ, ಬಂದಿದ್ದು ಸಾವಿರ, ಎರಡು ಸಾವಿರ ರುಪಾಯಿ ಅಲ್ಲವೇ ಅಲ್ಲ ಸ್ವಾಮಿ. ಬರೋಬ್ಬರಿ 1 ಕೋಟಿ ರುಪಾಯಿ ಅಂದರೆ ಏನು ಸುಮ್ಮನೇ ಸಿಗುತ್ತಾ. ಕೊನೆಗೆ ಸೈಬರ್ ಕೆಫೆಯಲ್ಲಿ ಲಾಟರಿ ಟಿಕೆಟ್ ಫಲಿತಾಂಶವನ್ನು ಪರೀಕ್ಷಿಸಿದಾಗ ಬಂಪರ್ ಬಹುಮಾನ ಸಿಕ್ಕಿದ್ದು ಪಕ್ಕಾ ಆಯಿತು.
ಪೊಲೀಸರೇ ನನ್ನ ಹಣವನ್ನೇ ಕಾಪಾಡಲಿ ಹೇಗೆ?
ನಿವೃತ್ತಿ ನಂತರ ಸಿಕ್ಕ 1 ಲಕ್ಷ ರುಪಾಯಿಯನ್ನೇ ಸೇನ್ ದೊಡ್ಡ ಮೊತ್ತ ಎಂದುಕೊಂಡಿದ್ದರು. ಹೀಗಿರುವಾಗ 1 ಕೋಟಿ ರುಪಾಯಿ ಬಹುಮಾನ ಬಂದಿದೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದೇ ಗೊತ್ತಾಗುತ್ತಿಲ್ಲ ಎಂದು ಸೇನ್, ಪೊಲೀಸರ ಮೊರೆ ಹೋಗಿದ್ದಾರೆ. ಕಲ್ನಾ ಪೊಲೀಸ್ ಠಾಣೆಯ ಮೇಲುಸ್ತುವಾರಿ ಆಗಿರುವ ರಾಕೇಶ್ ಸಿಂಗ್ ರನ್ನು ಭೇಟಿ ಮಾಡಿದ ಸೇನ್, ತಮಗೆ ರಕ್ಷಣೆ ಕೊಡಿ. ನಾನು ಹಣವನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
1 ಕೋಟಿ ರುಪಾಯಿ ಜಮೆ ಆಗಲು 3 ತಿಂಗಳು
ನಾಗಾಲ್ಯಾಂಡ್ ರಾಜ್ಯ ಲಾಟರಿಯಲ್ಲಿ 1 ಕೋಟಿ ರುಪಾಯಿ ಬಂಪರ್ ಬಹುಮಾನವೇನೋ ಸಿಕ್ಕಿದೆ. ಈ ಹಣವು ಇಂದ್ರ ನಾರಾಯಣ ಸೇನ್ ಅವರ ಎಸ್ ಬಿಐ ಬ್ಯಾಂಕ್ ಖಾತೆಗೆ ಜಮೆ ಆಗಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಲಾಟರಿ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಸೇನ್ ಅವರ ಭವಿಷ್ಯವೇ ಬದಲಾಗಿದೆ. ನೆಂಟರಿಷ್ಟರು ಅಷ್ಟೇ ಅಲ್ಲ, ಗೊತ್ತಿಲ್ಲದ ಜನರೆಲ್ಲ ಮನೆಗೆ ಬಂದು ಶುಭಾಶಯ ಕೋರುತ್ತಿದ್ದಾರಂತೆ.
10 ಸಾವಿರ ರುಪಾಯಿಯೇ ಸಾಕು ಜೀವನ ಸಾಗಿಸಲು
ಈಗೇನೋ 1 ಕೋಟಿ ರುಪಾಯಿ ಲಾಟರಿ ಬಹುಮಾನ ಸಿಕ್ಕಿದೆ. ಆದರೆ, ಆ ದುಡ್ಡು ತಮಗೆ ಬೇಡ ಅನ್ನೋದು ಇಂದ್ರ ನಾರಾಯಣ ಸೇನ್ ಅವರ ಅಭಿಪ್ರಾಯ. ತಮ್ಮ ನಿವೃತ್ತಿ ವೇತನ 10 ಸಾವಿರ ರುಪಾಯಿಯೇ ಉತ್ತಮ ಜೀವನಕ್ಕೆ ಸಾಕಾಗುತ್ತದೆ. ಈಗ ಬರುವ ಕೋಟಿ ರುಪಾಯಿಯಲ್ಲಿ ಸ್ವಲ್ಪ ಹಣವನ್ನು ದುರ್ಗಾ ದೇವಿ ದೇವಸ್ಥಾನ ನಿರ್ಮಾಣಕ್ಕೆ ಕೊಡುತ್ತೇನೆ. ಪೂಜೆ, ಹೋಮಕ್ಕಾಗಿ ಸ್ವಲ್ಪ ಹಣವನ್ನು ಬಳಸುತ್ತೇನೆ. ಉಳಿದ ಎಲ್ಲ ಹಣವನ್ನು ತಮ್ಮ ಮೂರು ಮಕ್ಕಳಿಗೆ ಸಮನಾಗಿ ಹಂಚುತ್ತೇನೆ ಅಂತಾರೆ ಇಂದ್ರ ನಾರಾಯಣ ಸೇನ್.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications