Bank Holidays: ಗಮನಿಸಿ... ಮೇ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್‌ ಕ್ಲೋಸ್‌? ಯಾವೆಲ್ಲಾ ದಿನ ರಜೆ ಇರಲಿದೆ? ಇಲ್ಲಿ ತಿಳಿಯಿರಿ

ಈ ತಿಂಗಳು ಮುಗಿಯಲು ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು,ಎಲ್ಲರೂ ಕಣ್ಣು ಮುಂದಿನ ತಿಂಗಳ ರಜೆಯ ಪಟ್ಟಿಯ ಮೇಲೆ ಇದೆ. ಅದರಲ್ಲೂ ಬ್ಯಾಂಕ್ ರಜೆ ಈ ತಿಂಗಳಲ್ಲಿ ಎಷ್ಟು ದಿನ ಇರುತ್ತೆ ಎಂದು ಬ್ಯಾಂಕ್ ನೌಕರರು ಕಾಯುತ್ತಿದ್ದಾರೆ. ಬ್ಯಾಂಕ್ ನೌಕರರು, ಸಾರ್ವಜನಿಕರು ಎಲ್ಲರೂ ತಿಂಗಳ ಕೊನೆಯಲ್ಲಿ ಎಲ್ಲರೂ ಬ್ಯಾಂಕ್‌ ರಜೆ ಪಟ್ಟಿಯನ್ನು ಹುಡುಕುತ್ತಾರೆ. ಯಾಕೆಂದರೆ ಬ್ಯಾಂಕ್ ನೌಕರರು ಕೆಲಸಕ್ಕೆ ರಜೆ ಸಿಗುತ್ತದೆ ಎಂದು ಹುಡುಕಿದ್ದರೇ ಮತ್ತೆ ಕೆಲವೊಂದು ಮಂದಿ ಮುಂದಿನ ತಿಂಗಳು ಯಾವ ದಿನ ನಾವು ಹಣಕಾಸಿನ ವ್ಯವಹಾರ ಮಾಡಬೇಕು ಎಂದು ನೋಡಲು ಕ್ಯಾಲೆಂಡರ್ ನೋಡುತ್ತಾರೆ. ಹಾಗಿದ್ರೆ ಮೇ (May 2025) ತಿಂಗಳಿನಲ್ಲಿ ಭಾರತದಲ್ಲಿ ಬ್ಯಾಂಕ್ ರಜಾದಿನಗಳು (Bank Holidays) ಹೇಗಿವೆ ಅಂತ ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಹೌದು, ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಿನ ಜನರು ಡಿಜಿಟಲ್ ಬ್ಯಾಂಕಿಂಗ್, ಯುಪಿಐ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಬಳಕೆಯಿಂದ ಕೂತ ಸ್ಥಳದಿಂದಲ್ಲೇ ಬ್ಯಾಂಕ್ ಹಣಕಾಸು ವ್ಯವಹಾರಗಳನ್ನು ನಡೆಸುತ್ತಾರೆ. ಆದರೆ ಕೆಲವೊಂದು ಕೆಲಸಗಳಿಗೆ ಬ್ಯಾಂಕ್‌ಗೆ ಹೋಗಲೇ ಬೇಕಾಗುತ್ತದೆ. ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ಹೋಹಬೇಕು ಎಂದರೆ ಬ್ಯಾಂಕ್‌ ರಜೆಗಳ ಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ತೆರಳಿ ಆಗ ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಆಗುತ್ತದೆ.

Bank Holidays: ಮೇ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್‌ ಕ್ಲೋಸ್‌?

ಬ್ಯಾಂಕ್‌ ರಜಾ ದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡುತ್ತದೆ. ಆದರೆ ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಹಬ್ಬಗಳು, ರಾಷ್ಟ್ರೀಯ ರಜಾದಿನಗಳು ಮತ್ತು ರಾಜ್ಯ ಹಬ್ಬಗಳು ಪ್ರಾದೇಶಿಕ ಅವಲಂಬನೆಯ ಮೇಲೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಮೇ ತಿಂಗಳಿನಲ್ಲಿಯೇ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹಬ್ಬಗಳಿವೆ. ಅದಕ್ಕೆ ತಕ್ಕಂತೆ ಬ್ಯಾಂಕ್ ರಜೆಗಳಳಿ ಇರುತ್ತಾವೆ ಯಾವೆಲ್ಲಾ ರಜೆಗಳು ಇವೆ ಎಂಬುವುದನ್ನು ತಿಳಿಯಲು ಮುಂದೆ ಓದಿ...

ಶನಿವಾರ ಹಾಗೂ ಭಾನುವಾರ ಎರಡನೇ ಹಾಗೂ ನಾಲ್ಲನೇ ಶನಿವಾರ ಹೊರತು ಪಡಿಸಿ ಮೇ ತಿಂಗಳಲ್ಲಿ ಹೆಚ್ಚಿನ ದಿನಕಾಲ ಬ್ಯಾಂಕ್ ಕ್ಲೋಸ್ ಇರುತ್ತದೆ. ಮೇ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಇದ್ದ, ಈ ದಿನಗಳಲ್ಲಿ ಬ್ಯಾಂಕ್‌ನಲ್ಲಿ ನೀವು ಯಾವುದೇ ವ್ಯವಹಾರವನ್ನು ಮಾಡಲು ಸಾಧ್ಯವಾಗುವಿದಿಲ್ಲ.

ಮೇ 2025ರ ಬ್ಯಾಂಕ್ ರಜೆಗಳ ಪಟ್ಟಿ

  1. ಮೇ 1 ಗುರುವಾರ: ಅಂತಾರಾಷ್ಟ್ರೀಯ ಕಾರ್ಮಿಕರ ದಿನ.ಈ ದಿನದಂದು ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರುತ್ತೇವೆ. ಅದೇ ದಿನ ಮಹಾರಾಷ್ಟ್ರ ದಿನವೂ ಆಗಿದೆ.
  2. ಮೇ 4 ಭಾನುವಾರ: ದೇಶಾದ್ಯಂತ ಸಾರ್ವತ್ರಿಕ ರಜೆ ಇರುತ್ತದೆ.
  3. ಮೇ 9 ಶುಕ್ರವಾರ : ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
  4. ಮೇ 10 ಶನಿವಾರ: ತಿಂಗಳ ಎರಡನೇ ಶನಿವಾರ ಇರುವುದರಿಂದ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ.
  5. ಮೇ 11 ಭಾನುವಾರ : ವಾರಾಂತ್ಯದ ರಜೆ
  6. ಮೇ 12 ಸೋಮವಾರ: ಬುದ್ಧ ಪೂರ್ಣಿಮೆಯ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ.
  7. ಮೇ 16 ಶುಕ್ರವಾರ: ಸಿಕ್ಕಿಂ ರಾಜ್ಯ ದಿನಾಚರಣೆ ಅಂಗಾವಾಗಿ ಸಿಕ್ಕಿಂ ನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
  8. ಮೇ 18 ಭಾನುವಾರ: ಇಂದು ವಾರಾಂತ್ಯದ ರಜೆ
  9. ಮೇ 24 ಶನಿವಾರ: ತಿಂಗಳ ನಾಲ್ಕನೇ ಶನಿವಾರವಾಗಿರುವುದರಿಂದ ಬ್ಯಾಂಕ್ ಇರುವುದಿಲ್ಲ.
  10. ಮೇ 25 ಭಾನುವಾರ : ವಾರಾಂತ್ಯದಲ್ಲಿ ಸಾರ್ವತ್ರಿಕ ರಜೆ
  11. ಮೇ 26 ಸೋಮವಾರ: ಕಾಜಿ ನಜ್ರುಲ್ ಇಸ್ಲಾಂ ಅವರ ಜನ್ಮದಿನದಂದು ಪ್ರಾದೇಶಿಕ ರಜೆ ಇರುತ್ತದೆ.
  12. ಮೇ 29 ಗುರುವಾರ: ಮಹಾರಾಣಾ ಪ್ರತಾಪ್ ಜಯಂತಿಯಂದು ಕೆಲವು ಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಕೆಲವು ರಜೆಗಳು ನಿರ್ದಿಷ್ಟ ರಾಜ್ಯಕ್ಕೆ ಮಾತ್ರವೇ ಅನ್ವಯವಾಗುತ್ತದೆ, ಎಲ್ಲ ರಜೆಗಳಿಗೂ ಅನ್ವಯವಾಗುವುದಿಲ್ಲ. ಹೀಗಾಗಿ ಕ್ಯಾಲೆಂಡರ್‌ ನೋಡಿಕೊಂಡು ರಜೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ತಿಳಿದುಕೊಂಡು ಬ್ಯಾಂಕ್‌ಗೆ ಹೋಗಿ.

ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್‌ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್‌ ಮೂಲಕ ನೀವು ನಿಮ್ಮ ಬ್ಯಾಂಕಿಂಗ್‌ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್‌ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+