ಯಾವುದೇ ಹಣಕಾಸಿನ ವಹಿವಾಟು ನಡೆಸಲು, ಹೂಡಿಕೆ ಮಾಡಲು ಬ್ಯಾಂಕ್ (Bank) ಅಗತ್ಯವಾಗಿ ಬೇಕು. ಇದು ಡಿಜಿಟಲ್ ಯುಗ. ಏನೇ ಬೇಕೆಂದರೂ, ಯಾವುದೇ ಸೇವೆಯನ್ನು ಕ್ಷಣಮಾತ್ರದಲ್ಲಿ ಆನ್‌ಲೈನ್ ಮೂಲಕ ಮಾಡಿ ಮುಗಿಸಬಹುದು. ಮೊಬೈಲ್ ಎಂಬ ಸಣ್ಣ ಸಾಧನ ಇಡೀ ಜಗತ್ತನ್ನೇ ಬೆಚ್ಚಿಬೀಳೀಸುವಂತೆ ಮಾಡಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅಂದರೆ ಸಾಲ, ದೊಡ್ಡ ಮೊತ್ತದ ಹೂಡಿಕೆ, ಚೆಕ್, ಪಾಸ್‌ಬುಕ್ ಸಂಬಂಧಿತ ಕೆಲಸಗಳಿಗೆ ಬ್ಯಾಂಕ್‌ಗೆ ಹೋಗಲೇಬೇಕು. ಆದ್ರೆ ಕೆಲವೊಮ್ಮೆ ನಾವು ಹೋಗುವಾಗ ಬ್ಯಾಂಕ್ ಕ್ಲೋಸ್ ಆಗಿರುತ್ತೆ. ಅದಕ್ಕಾಗಿ ಬ್ಯಾಂಕ್ ರಜಾದಿನಗಳನ್ನು (Bank Holidays) ಮೊದಲು ತಿಳಿದುಕೊಳ್ಳಬೇಕು ಎಂದು ಹಲವರು ಹೇಳುತ್ತಾರೆ.

ಆರ್‌ಬಿಐ ನಿರಂತರವಾಗಿ ದೇಶದ ಬ್ಯಾಂಕುಗಳಿಗೆ ಯಾವಾಗ ರಜೆ ಇರುತ್ತದೆ ಎಂಬುದರ ಬಗ್ಗೆ ರಜಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತಿರುತ್ತದೆ. ಹಾಗಾದ್ರೆ ಈ ವಾರ (ನ.10-ನ.16) ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ವಾರದ ಬ್ಯಾಂಕ್ ರಜಾದಿನಗಳ ಬಗ್ಗೆ ಮಹತ್ವ ಮಾಹಿತಿಯೊಂದನ್ನು ನೀಡಿದೆ. ಆ ಪ್ರಕಾರ ನವೆಂಬರ್ 16 ರಂದು ಭಾನುವಾರ ಹಿನ್ನೆಲೆ, ದೇಶದ ಎಲ್ಲಾ ಬ್ಯಾಂಕುಗಳಲ್ಲಿ ಅಧಿಕೃತವಾಗಿ ಮುಚ್ಚಿರುತ್ತದೆ ಎಂದು ಆರ್‌ಬಿಐ ರಜಾ ವೇಳಾಪಟ್ಟಿಯಲ್ಲಿ ತಿಳಿಸಿದೆ. ಆದ್ರೆ ಉಳಿದ ಎಲ್ಲಾ ದಿನಗಳಲ್ಲಿ ಬ್ಯಾಂಕ್ ತೆರೆದಿರುತ್ತದೆ.
ಈ ದಿನ ಬ್ಯಾಂಕಿಗೆ ರಜಾ!
ಆರ್‌ಬಿಐ ವೇಳಾಪಟ್ಟಿ ಪ್ರಕಾರ, ನವೆಂಬರ್ 16 ಭಾನುವಾರ ಆಗಿರುತ್ತದೆ. ಭಾನುವಾರ ಸಾಮಾನ್ಯವಾಗಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ದಿನ ಖಾಸಗಿ ಮತ್ತು ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತದೆ. ಆದ್ದರಿಂದ ಈ ವಾರದಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತದೆ.
ಇನ್ನು ಈ ವಾರದಲ್ಲಿ ಅಂದರೆ ನವೆಂಬರ್ 15 ಶನಿವಾರ ಬರಲಿದೆ. ಆದರೆ ಇದು ಮೂರನೆಯ ಶನಿವಾರವಾಗಿದೆ. ಈ ದಿನ ಯಥಾಪ್ರಕಾರದಂತೆ ಬ್ಯಾಂಕುಗಳು ಗ್ರಾಹಕರಿಗಾಗಿ ತೆರೆದಿರುತ್ತದೆ. ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮಾತ್ರ ರಜೆ ನೀಡಲಾಗುತ್ತದೆ.
ಭಾರತದಲ್ಲಿ ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿರುತ್ತದೆ. ಅಂದರೆ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಆಧರಿಸಿ ರಜೆ ಘೋಷಣೆಯಾಗುತ್ತದೆ. ಆಯಾ ರಾಜ್ಯದ ಆಚರಣ, ಸಂಪ್ರದಾಯ, ಸಂಸ್ಕೃತಿ ವಿಭಿನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ಆ ಆಚರಣೆಗಳಿಗೆ ತಕ್ಕಂತೆ ರಜೆ ನೀಡಲಾಗುತ್ತದೆ. ಆದ್ರೆ ಭಾನುವಾರ, ಶನಿವಾರದಂತಹ ಸಾಮಾನ್ಯ ರಜೆಗಳು ಎಲ್ಲಾ ಬ್ಯಾಂಕುಗಳಿಗೂ ಒಂದೇ ಆಗಿರುತ್ತದೆ.
ಇನ್ನು ಬ್ಯಾಂಕ್‌ಗಳಿಗೆ ರಜೆ ಇರುವಾಗಲೂ ಆನ್‌ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು. ಇನ್ನು ನಗದು ವಹಿವಾಟಿಗಾಗಿ ಎಟಿಎಂಗಳು ತೆರೆದಿರುತ್ತವೆ. ಅಲ್ಲದೇ ಯಾವುದೇ ಆನ್‌ಲೈನ್ ಪೇಮೆಂಟ್‌ಗಳಿಗೆ ಯುಪಿಐ ಆಪ್‌ಗಳನ್ನು ಬಳಸಬಹುದು.
ಇನ್ನು ಈ ತಿಂಗಳಲ್ಲಿ ಸದ್ಯಕ್ಕೆ ಯಾವುದೇ ಬ್ಯಾಂಕ್ ರಜೆಗಳನ್ನು ಆರ್‌ಬಿಐ ಘೋಷಿಸಿಲ್ಲ. ಸಾಮಾನ್ಯ ನಾಲ್ಕನೇ ಶನಿವಾರ ಮತ್ತು ಭಾನುವಾರ ರಜಾದಿನಗಳನ್ನು ಹೊರತುಪಡಿಸಿ, ಯಾವುದೇ ಹೆಚ್ಚುವರಿ ರಜೆ ಘೋಷಣೆಯಾಗಿಲ್ಲ ಎಂದು ಆರ್‌ಬಿಐ ಕ್ಯಾಲೆಂಡರ್ ತಿಳಿಸಿದೆ.


Click it and Unblock the Notifications