ಬೆಂಗಳೂರು, ಮಾರ್ಚ್ 11: ಭಾರತದಲ್ಲಿ ಅನೇಕ ಶ್ರೀಮಂತರು ಇಂದು ತಮ್ಮದೇ ಖಾಸಗಿ ಜೆಟ್ ವಿಮಾನಗಳನ್ನು ಹೊಂದಿದ್ದಾರೆ. ಅಂದ ಹಾಗೆ ಖಾಸಗಿ ಜೆಟ್ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಭಾರತದಲ್ಲಿ ಇದು ಯಾರೆಲ್ಲರ ಬಳಿ ಇದೆ ಎಂದು ತಿಳಿಯೋಣ.
ಅನೇಕ ಶ್ರೀಮಂತರು ಮತ್ತು ವ್ಯಾಪಾರಸ್ಥರು ಖಾಸಗಿ ಜೆಟ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಪ್ರಯಾಣ ಮಾಡುವ ಸಮಯವನ್ನು ಉಳಿಸಲು ಖಾಸಗಿ ಜೆಟ್‌ಗಳನ್ನು ಬಳಸುತ್ತಾರೆ. ಇದಲ್ಲಕಿಂತ ಮುಖ್ಯವಾಗಿ ತಮ್ಮ ಶ್ರೀಮಂತಿಕೆಯನ್ನು ಇದರ ಮೂಲಕ ಪ್ರದರ್ಶನ ಮಾಡುತ್ತಾರೆ. ಆದ್ದರಿಂದ ಯಾವ ಪ್ರಸಿದ್ಧ ಭಾರತೀಯರು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುವುದು ಆಸಕ್ತಿದಾಯಕವಾಗಿದೆ.

ಭಾರತದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಪ್ರಕಾರ, ಪ್ರಸ್ತುತ ಭಾರತದಲ್ಲಿ ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 550 ಶ್ರೀಮಂತರ ಖಾಸಗಿ ವಿಮಾನಗಳಿವೆ. ನಟರು ಮತ್ತು ಇತರ ಬಿಲಿಯನೇರ್‌ಗಳು ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ ಎಂದು ತಿಳಿದುಬಂದಿದೆ.
ಅತ್ಯಂತ ದುಬಾರಿ ಖಾಸಗಿ ಜೆಟ್ ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಒಡೆತನದಲ್ಲಿದೆ. ಇದರ ಬೆಲೆ 73 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಇದಲ್ಲದೆ ಅನಿಲ್ ಅಂಬಾನಿ, ಲಕ್ಷ್ಮಿ ಮಿತ್ತಲ್, ಪಂಕಜ್ ಮುಂಜಾಲ್, ಕಲಾನಿಧಿ ಮಾರನ್, ನವೀನ್ ಜಿಂದಾಲ್, ಅದಾರ್ ಪೂನಾವಾಲಾ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಸೇರಿದಂತೆ ಎಂಟು ಭಾರತೀಯ ಉದ್ಯಮಿಗಳು ಮಾತ್ರ ದೀರ್ಘ-ಶ್ರೇಣಿಯ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಕೂಡ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ರತನ್ ಟಾಟಾ ಅವರು ಡಸಾಲ್ಟ್ ಫಾಲ್ಕನ್ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರು ದೇಶದ ಅತ್ಯಂತ ದುಬಾರಿ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ, ಇದು ಸುಮಾರು 603 ಕೋಟಿ ರೂ. ಮತ್ತೊಂದೆಡೆ, ಸೌದಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅಲ್-ಸೌದ್ ಅವರು ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ, ಇದರ ಬೆಲೆ ಅಂದಾಜು 4100 ಕೋಟಿ ರೂ. ಆಗಿದೆ.
ಖಾಸಗಿ ಜೆಟ್‌ನ ಬೆಲೆಯನ್ನು ಅದರ ಗಾತ್ರ ಮತ್ತು ವೈಶಿಷ್ಟ್ಯಗಳಿಂದ ನಿರ್ಧರಿಸಲಾಗುತ್ತದೆ. ವಿಶಿಷ್ಟವಾಗಿ, ಒಂದು ಖಾಸಗಿ ಜೆಟ್‌ಗೆ 20 ಕೋಟಿ ರೂಪಾಯಿಗಳವರೆಗೆ ವೆಚ್ಚವಾಗಬಹುದು, ಆದರೆ ಕೆಲವು ಒಂದು ಬಿಲಿಯನ್ ರೂಪಾಯಿ ಮೌಲ್ಯದ್ದಾಗಿರಬಹುದು. ಸಿರಸ್ ವಿಷನ್ ಜೆಟ್ ಅನ್ನು ಅತ್ಯಂತ ಕೈಗೆಟುಕುವ ಖಾಸಗಿ ಜೆಟ್ ಎಂದು ಪರಿಗಣಿಸಲಾಗಿದೆ, ಇದರ ಬೆಲೆ ಸುಮಾರು 16 ಕೋಟಿ ರೂ. ಅಗಿದೆ.


Click it and Unblock the Notifications