ಕೇಂದ್ರ ಸರ್ಕಾರವು ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿ ಕುಟುಂಬಗಳು ವಿದ್ಯುತ್ ಸ್ವಾವಲಂಬಿಗಳಾಗುವ ಗುರಿಯನ್ನು ಹಾಕಿಕೊಂಡಿದೆ. ಇದೇ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆ.
ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ದೇಶದ ಬಡ, ಮಧ್ಯಮ ವರ್ಗದ ಜನರು ಉಚಿತ ವಿದ್ಯುತ್ ಪಡೆದು ಸ್ವಾವಲಂಬಿಗಳಾಗುವ ಪ್ರಯೋಜವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಭಾಗವಾಗಿ ಕೋಟ್ಯಂತರ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಸಿಸ್ಟಂ ಅಳವಡಿಸಲಾಗುತ್ತದೆ. 'ಪಿಎಂ ಸೂರ್ಯ ಘರ್-ಮುಫ್ತ್ ಬಿಜ್ನಿ ಯೋಜನೆ'ಯ ಮೂಲಕ ಫಲಾನುಭವಿಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು.

ಪಿಎಂ ಸೂರ್ಯ ಘರ್ ಯೋಜನೆ ನೋಂದಣಿ ಮಾಡಿಕೊಳ್ಳುವುದು ಹೇಗೆ?
ಈ ಯೋಜನೆಗಾಗಿ ಮೊದಲು ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
ಇದಕ್ಕಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.pmsuryaghar.gov.in/
ಇಲ್ಲಿ ಮೊದಲಿಗೆ ನೊಂದಣಿ ಮಾಡಿಕೊಳ್ಳಿ. ಅದಕ್ಕೆ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಿ.
ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ನಿರ್ದಿಷ್ಟಪಡಿಸಿ.
ನಿಮ್ಮ ಮನೆಯ ವಿದ್ಯುತ್ ಬಿಲ್ನಲ್ಲಿರುವ ಅಕೌಂಟ್ ನಂಬರ್ ನಮೂದಿಸಿ.
ಬಳಿಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ನಮೂದಿಸಿ, ಬಳಿಕ ಪೋರ್ಟಲ್ನ ನಿರ್ದೇಶನವನ್ನು ಅನುಸರಿಸಿ.
ಈ ವಿವರಗಳನ್ನು ಭರ್ತಿ ಮಾಡಿದ ನಂತರವೇ ನಿಮ್ಮ ಅರ್ಜಿಯನ್ನು ನೋಂದಾಯಿಸಲಾಗುತ್ತದೆ.
ಲಾಗಿನ್ ಆ್ಯಂಡ್ ಅಪ್ಲೈ ವಿಧಾನ:
ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು
ರೂಫ್‌ಟಾಪ್ ಸೋಲಾರ್‌ಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
ಇದಾದ ಬಳಿಕ ನಿಮ್ಮ ಡಿಸ್ಕಾಂ ಕಂಪನಿಯು ಅರ್ಜಿಯನ್ನು ಪರಿಶೀಲಿಸುತ್ತದೆ.ಇದರ ಅನುಮೋದನೆಗೆ ಕೆಲವು ವಾರಗಳು ಬೇಕಾಗುತ್ತವೆ.
ಒಮ್ಮೆ ನಿಮಗೆ ಈ ಅನುಮೋದನೆ ಸಿಕ್ಕ ನಂತರ ನಿಮ್ಮ ಡಿಸ್ಕಮ್‌ನಲ್ಲಿ ನೋಂದಾಯಿತ ಮಾರಾಟಗಾರರು ಬಂದು ಸೌರಫಲಕಗಳನ್ನು ಸ್ಥಾಪಿಸುತ್ತಾರೆ.
ಸೋಲಾರ್ ಅಳವಡಿಕೆ ಪೂರ್ಣಗೊಂದ ನಂತರ ಸೌರಸ್ಥಾವರದ ವಿವರಗಳನ್ನು ಸಲ್ಲಿಸಿ
ನಂತರ ನೆಟ್ ಮೀಟರಿಂಗ್‌ಗೆ ಅರ್ಜಿ ಸಲ್ಲಿಸಿ.
ನೆಟ್ ಮೀಟರ್ ಅನ್ನು ಸ್ಥಾಪಿಸಿದ ನಂತರ ಮತ್ತು ಡಿಸ್ಕಾಂನಿಂದ ಪರಿಶೀಲನೆ ನಡೆಯುತ್ತದೆ. ಅದಾದ ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಸರ್ಟಿಫಿಕೇಟ್ ನಿರ್ಮಾಣ ಆಗುತ್ತದೆ.
ಈ ಸೆಟಪ್‌ನೊಂದಿಗೆ ನೀವು ಬಳಸಿದ ನಟರ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು DISCOMಗೆ ಮರಳಿ ಮಾರಾಟ ಮಾಡಬಹುದು. ಸ್ವಾಲಂಬನೆಯ ಜೊತೆಗೆ ನೀವು ಇದರಿಂದ ಹೆಚ್ಚುವರಿ ಆದಾಯ ಪಡೆಯಬಹುದು.
ಪಿಎಂ ಸೂರ್ಯ ಘರ್ ಯೋಜನೆ, ಅರ್ಜಿಗೆ ಅಗತ್ಯವಿರುವ ದಾಖಲೆಗಳು
ಗುರುತಿನ ಪುರಾವೆ
ವಿಳಾಸದ ಪುರಾವೆ
ವಿದ್ಯುತ್ ಬಿಲ್
ಛಾವಣಿಯ/ಮನೆ ಮಾಲೀಕತ್ವದ ಪ್ರಮಾಣಪತ್ರ
ಯೋಜನೆಯ ಉದ್ದೇಶಗಳು
ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸಲು: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಾಥಮಿಕ ಗುರಿಯು ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಶುದ್ಧ, ನವೀಕರಿಸಬಹುದಾದ ಪರ್ಯಾಯವಾಗಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವುದು.
ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು: ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ, ಕುಟುಂಬಗಳು ತಮ್ಮ ವಿದ್ಯುತ್ ಬಿಲ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು, ದೀರ್ಘಾವಧಿಯ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ.
ಪರಿಸರ ಕಾಳಜಿ : ಪಳೆಯುಳಿಕೆಯುಕ್ತ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡುವುದು
ಶಕ್ತಿಯ ಸ್ವಾಲಂಬನೆ : ಸೌರಶಕ್ತಿ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ, ಈ ಯೋಜನೆಯು ವಿದ್ಯುತ್ ಶಕ್ತಿ ಅವಲಂಭನೆ ಕಡಿಮೆ ಮಾಡಿ ಕುಟುಂಬಗಳಿಗೆ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಬ್ಸಿಡಿಗಳು
ಈಗಾಗಲೇ ಸೋಲಾರ್ ಪ್ಯಾನಲ್ ಹೊಂದಿರುವವರಿಗೆ ಈ ಯೋಜನೆಯಡಿಯಲಿ ಸಬ್ಸಿಡಿ ಸಿಗುವುದಿಲ್ಲ.
ಈ ಯೋಜನೆಯು ಶ್ರೇಣೀಕೃತ ಸಬ್ಸಿಡಿ ಮಾದರಿಯನ್ನು ಒದಗಿಸುತ್ತದೆ
2 kW ಅಡಿಯಲ್ಲಿ ಸಿಸ್ಟಮ್‌ಗಳಿಗೆ ಪ್ರತಿ kW ಗೆ ರೂ.30,000 ವರೆಗೆ.
3 kW ವರೆಗಿನ ಸಿಸ್ಟಮ್‌ಗಳಿಗೆ, ಇದು ಪ್ರತಿ kW ಗೆ ರೂ. 18,000ರವರೆ
3 kW ಗಿಂತ ಹೆಚ್ಚಿನ ಸಿಸ್ಟಮ್‌ಗಳ ಅಗತ್ಯವಿರುವವರಿಗೆ78,000 ವರೆಗಿನ ಸಬ್ಸಿಡಿ
ಈ ಯೋಜನೆಯಿಂದ ಸರ್ಕಾರವು ಪ್ರತಿ ವರ್ಷ 75,000 ಕೋಟಿ ವಿದ್ಯುತ್ ವೆಚ್ಚವನ್ನು ಉಳಿಸುವ ನಿರೀಕ್ಷೆಯಿದೆ.


Click it and Unblock the Notifications