ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ತೆಗೆದುಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸಂಬಂಧಪಟ್ಟ ರಾಜತಾಂತ್ರಿಕರಿಗೆ ತಿಳಿಸಲಾಗಿದೆ.
ಕೆನಡಾ ಒಬ್ಬ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ ಬಳಿಕ ಮತ್ತು ಖಲಿಸ್ತಾನಿ ನಾಯಕನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ ನಂತರ ಭಾರತ ಸರ್ಕಾರವು ಈ ನಿರ್ಧಾರವನ್ನು ಮಾಡಿದೆ. ಖಲಿಸ್ತಾನ್ ಆಂದೋಲನವು ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಖಲಿಸ್ತಾನ್ ಎಂಬ ಜನಾಂಗೀಯ-ಧಾರ್ಮಿಕ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಮೂಲಕ ಸಿಖ್ಖರಿಗೆ ಪ್ರತ್ಯೇಕ ದೇಶವನ್ನು ರಚಿಸುವ ಪ್ರಯತ್ನವನ್ನು ಈ ಆಂದೋಲನದ ಮೂಲಕ ಮಾಡಲಾಗುತ್ತದೆ. ಈ ಚಳುವಳಿ ಕೆನಡಾದಲ್ಲಿ ಬಹಳ ಪ್ರಬಲವಾಗಿದೆ.

ಕೆನಡಾದಲ್ಲಿ ಸಿಖ್ ಧರ್ಮಕ್ಕೆ ಸೇರಿದ ಸುಮಾರು 800,000 ಜನರು ವಾಸವಾಗಿದ್ದಾರೆ, ಅಂದರೆ 2021 ರ ಜನಗಣತಿ ಪ್ರಕಾರ ಕೆನಡಾದ ಜನಸಂಖ್ಯೆಯ ಶೇಕಡ 2.1 ರಷ್ಟು ಸಿಖ್ ಧರ್ಮದವರಾಗಿದ್ದಾರೆ. ಇದು ದೇಶದ ವೇಗವಾಗಿ ಬೆಳೆಯುತ್ತಿರುವ ಮತ್ತು ನಾಲ್ಕನೇ-ದೊಡ್ಡ ಧಾರ್ಮಿಕ ಗುಂಪನ್ನು ರೂಪಿಸುತ್ತಿದೆ.
ಕೆನಡಾದಲ್ಲಿ ಅತಿ ಹೆಚ್ಚಾಗಿ ಸಿಖ್ ಧರ್ಮದವರು ಒಂಟಾರಿಯೊದಲ್ಲಿ ವಾಸಿಸುತ್ತಾರೆ. ಅದಾದ ಬಳಿಕ ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಧಾರ್ಮಿಕರು ನೆಲೆಸಿದ್ದಾರೆ. ಕೆನಾಡವು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಸಿಖ್ ಅನುಪಾತದ (ಶೇಕಡ 2.1) ನೆಲೆಯಾಗಿದೆ. ಭಾರತದ ನಂತರ ವಿಶ್ವದ ಎರಡನೇ ಅತಿದೊಡ್ಡ ಸಿಖ್ ಜನಸಂಖ್ಯೆಯನ್ನು ಕೆನಡಾ ಹೊಂದಿದೆ. ಸಿಖ್ ಜನರು ಕೆನಡಾದಲ್ಲಿ ಆರ್ಥಿಕ ಬೆಳವಣಿಗೆಗೆ ಒಂದಲ್ಲ ಒಂದು ರೂಪದಲ್ಲಿ ಕೊಡುಗೆಯನ್ನು ನೀಡುತ್ತಾರೆ.
ಕೆನಡಾ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ?
ಕೆನಡಾದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ಶೇಕಡ 0.2 ರಷ್ಟು ವಾರ್ಷಿಕ ದರಲ್ಲಿದೆ. ಜುಲೈನಲ್ಲಿ ಬೆಳವಣಿಗೆಯು ಹೆಚ್ಚಾಗಿ ಸಮಾನಂತರವಾಗಿದೆ. ಇದು ಮುಂಬರುವ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತದ ಆರ್ಥಿಕ ಹಿಂಜರಿತದ ಸಂಭವನೀಯತೆಯನ್ನು ತೋರಿಸುತ್ತದೆ. ಏರುತ್ತಿರುವ ಹಣದುಬ್ಬರವು ಮತ್ತು ಹೆಚ್ಚಿದ ಬಡ್ಡಿದರವು ವಸತಿ ಹೂಡಿಕೆಗೆ ಪ್ರಚೋದಿಸಿದೆ. ಜೂನ್‌ನಲ್ಲಿ ಕೊನೆಗೊಂಡ ಮೂರು ತಿಂಗಳಲ್ಲಿ ಸತತ ಐದನೇ ತ್ರೈಮಾಸಿಕ ಇಳಿಕೆಯನ್ನು ದಾಖಲಿಸಿದೆ.
ಆರ್ಥಿಕ ಏರಿಳಿತವು ಹೆಚ್ಚು ಪರಿಣಾಮ ಬೀರುವ ವಲಯವು ಉದ್ಯೋಗ ವಲಯವಾಗಿದೆ. 2023 ರಲ್ಲಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಲಕ್ಷಾಂತರ ಉದ್ಯೋಗಗಳನ್ನು ಕಡಿತಗೊಳಿಸಿದ ವರ್ಷವಾಗಿದ್ದರೂ ಕೂಡಾ ಉದ್ಯೋಗ ಕಡಿತದಿಂದ ಹೆಚ್ಚು ಪ್ರಭಾವಿತರಾದವರು ಸಾಮಾನ್ಯವಾಗಿ ವಲಸಿಗರು ಅಥವಾ ತಾತ್ಕಾಲಿಕ ವೀಸಾದಲ್ಲಿರುವ ಜನರು ಆಗಿದ್ದಾರೆ.
ವ್ಯಾಪಾರ ಸಂಬಂಧ ಕುಸಿಯುತ್ತಿದೆ, ಮುಂದೇನು?
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಒತ್ತಡಗಳು ಈಗ ವ್ಯಾಪಾರ ಸಂಬಂಧಗಳಿಗೆ ಬೆದರಿಕೆಯಾಗಿದೆ. ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗ ಸ್ಥಗಿತಗೊಂಡಿವೆ. ಕೆನಡಾ ಬಿಕ್ಕಟ್ಟಿಗೆ ಕೆಲವು ವಿವರಗಳನ್ನು ನೀಡಿದೆ. ಆದರೆ ಭಾರತವು "ಕೆಲವು ರಾಜಕೀಯ ಬೆಳವಣಿಗೆಗಳನ್ನು" ಉಲ್ಲೇಖಿಸಿದೆ.
ಸ್ಟ್ಯಾಟಿಸ್ಟಿಕ್ಸ್ ಕೆನಡಾದ ಪ್ರಕಾರ, 2022 ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಕೆನಡಾದ ಒಟ್ಟು C$1.52 ಟ್ರಿಲಿಯನ್‌ಗಳಲ್ಲಿ ಕೇವಲ C$13.7 ಶತಕೋಟಿ ($10.2 ಶತಕೋಟಿ) ಆಗಿದೆ. ಕೊನೆಯಲ್ಲಿ, 2023 ರ ಜಿಡಿಪಿಗೆ ಕೊಡುಗೆ ನೀಡುವ ಅರ್ಧಕ್ಕಿಂತ ಹೆಚ್ಚು ಕೈಗಾರಿಕೆಗಳು ಕುಸಿತವನ್ನು ಕಂಡಿದೆ. ಉದ್ಯೋಗವು ಸಾಧಾರಣ ಕುಸಿತವನ್ನು ನೋಡಿದರೆ, ಅದನ್ನು ಕೆನಡಾದಲ್ಲಿ ಹಿಂಜರಿತ ಎಂದು ಕರೆಯಬಹುದು.


Click it and Unblock the Notifications