For Quick Alerts
ALLOW NOTIFICATIONS  
For Daily Alerts

ಸಪ್ಲೈ ಚೈನ್ ಕುಸಿತಕ್ಕೆ ಬ್ರಿಟನ್ ತತ್ತರ !

By ರಂಗಸ್ವಾಮಿ ಮೂಕನಹಳ್ಳಿ
|

ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಆಗಲೇ ಹೊರ ಬಂದಿದೆ . ಹೀಗೆ ಬ್ರಿಟನ್ ಹೊರ ಹೋಗುವ ಪ್ರಕ್ರಿಯೆಗೆ ಬ್ರೆಕ್ಸಿಟ್ ಎನ್ನುತ್ತಾರೆ . ಇದೆಲ್ಲ ಇಂದಿಗೆ ಹಳಸಲು ಸರಕು .ಇಂಗ್ಲೆಂಡ್ ನಗರ ಸದಾ ತನ್ನ ಜನತೆಗೆ ಬೇಕಾಗುವ ಪದಾರ್ಥಗಳ ಮೇಲೆ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಬ್ರಿಟನ್ ನಲ್ಲಿ ಉತ್ಪಾದಿಸಲಾಗುವ 45 ರಿಂದ 50 ಭಾಗ ವಸ್ತುಗಳ ಗ್ರಾಹಕ ಯೂರೋಪಿಯನ್ ಯೂನಿಯನ್! ಅಂದರೆ ಬ್ರಿಟನ್ ನ ಅರ್ಧ ದಷ್ಟು ರಫ್ತು ಪಾಲುದಾರ ಒಕ್ಕೂಟದ ದೇಶಗಳು. ಬ್ರಿಟನ್, ಯೂರೋಪಿಯನ್ ಯೂನಿಯನ್ ನಿಂದ 8 ರಿಂದ 10 ಪರ್ಸೆಂಟ್ ಆಮದು ಮಾಡಿಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಯಾವುದನ್ನ ಮಾರುತ್ತಿದ್ದೇವೆ ಮತ್ತು ಯಾವುದನ್ನ ಕೊಳ್ಳುತ್ತಿದ್ದೇವೆ ಎನ್ನುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ.

 

ನೆನಪಿಡಿ ಯುನೈಟೆಡ್ ಕಿಂಗ್‌ಡಮ್‌ನ ಅರ್ಧಕ್ಕೂ ಹೆಚ್ಚು ಆಹಾರ ಪದಾರ್ಥಗಳು ಯೂರೋಪಿಯನ್ ಯೂನಿಯನ್ ನಿಂದ ಸರಬರಾಜಾಗುತ್ತದೆ . ಅಂದರೆ ತನಗೆ ಬೇಕಾದ ಆಹಾರ ಪದಾರ್ಥಗಳ ಪೂರ್ಣ ಸರಬರಾಜು ಮಾಡುವ ಶಕ್ತಿ ಈ ದೇಶಕ್ಕೆ ಇಲ್ಲ . ಇದು ಒಂದು ಅವಲಂಬಿತ ದೇಶ . ಬೇರಾವುದಾದರೂ ವಿಷಯಕ್ಕೆ ಅವಲಂಬಿತವಾಗಿದ್ದರೆ ಪರವಾಗಿಲ್ಲ ಎನ್ನಬಹುದು ಆದರೆ ಇಲ್ಲಿ ಅತ್ಯಂತ ಮೂಲಭೂತ ವಾದ ಆಹಾರಕ್ಕೆ ಈ ದೇಶ ಅವಲಂಬಿತವಾಗಿದೆ .ಒಂದೆರಡು ದಿನ ಕಸ್ಟಮ್ಸ್ ಅಥವಾ ಸಪ್ಲೈ ಚೈನ್ ಕುಸಿತ ಇನ್ನ್ಯಾವುದೇ ಕಾರಣ ಹೇಳಿ ಪದಾರ್ಥ ದೇಶ ತಲುಪುವುದು ತಡವಾದರೆ ಆಹಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ . ಹೋಗಲಿ ಸ್ಟಾಕ್ ತರಿಸಿ ಶೇಖರಿಸಿ ಇಡೋಣ ಅಂದರೆ ಇಲ್ಲಿ ಅದಕ್ಕೆ ಬೇಕಾದ ಶೇಖರಣಾ ವ್ಯವಸ್ಥೆಯೇ ಇಲ್ಲ !

ಸಪ್ಲೈ ಚೈನ್ ಕುಸಿತಕ್ಕೆ ಬ್ರಿಟನ್ ತತ್ತರ !

ಸಪ್ಲೈ ಚೈನ್ ಕುಸಿತ !

ಒಂದು ಪದಾರ್ಥ ತನ್ನ ಉಗಮ ಸ್ಥಾನದಿಂದ ಅದನ್ನ ಬಳಸುವ ಗ್ರಾಹಕನಿಗೆ ತಲುಪಲು ಒಂದಲ್ಲ ಕೆಲವೊಮ್ಮೆ ಹತ್ತಾರು ಕೈಗಳನ್ನ ದಾಟಿರುತ್ತದೆ . ಹೀಗೆ ವಸ್ತುವನ್ನ ತಯಾರಿಸಿದ ಸಂಸ್ಥೆ , ಪದಾರ್ಥವನ್ನ ಹಂಚುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ . ಇವರನ್ನ ಡಿಸ್ಟ್ರುಬುಟರ್ಸ್ ಎನ್ನುತ್ತಾರೆ. ಇಲ್ಲಿ ವ್ಯಕ್ತಿಯಿಂದ ಸಂಸ್ಥೆಯ ವರೆಗೆ ಅನೇಕ ವಿಧದ ಮಧ್ಯವರ್ತಿಗಳು ಬರುತ್ತಾರೆ . ಸರಳವಾಗಿ ಹೇಳಬೇಕೆಂದರೆ ಪದಾರ್ಥ ತನ್ನ ಉಗಮದಿಂದ ಬಳಸುವ ಗ್ರಾಹಕನ ಮನೆಗೆ ತಲುಪುವ ನಡುವಿನ ಎಲ್ಲಾ ಪ್ರಕ್ರಿಯೆಗಳಿಗೆ ಸಪ್ಲೈ ಚೈನ್ ಎನ್ನುತ್ತಾರೆ .

 

ಅಂತಾರಾಷ್ಟ್ರೀಯ ಮಟ್ಟದಲ್ಲಿ , ಅದರಲ್ಲೂ ಚೀನಾ ದಲ್ಲಿ ಈ ರೀತಿಯ ಪದಾರ್ಥಗಳ ಹಂಚುವಿಕೆಯಲ್ಲಿ ವ್ಯತ್ಯಯ ಉಂಟಾದರೆ ಇದರ ಹೊಡೆತ ಜಗತ್ತಿಗೆ ಬೀಳುತ್ತದೆ. ಆದರೆ ಲಂಡನ್ ನಗರದಲ್ಲಿ ತೀರಾ ಇತ್ತೀಚಿಗೆ ಅಂದರೆ ಕೇವಲ ನಾಲ್ಕೈದು ದಿನಗಳ ಹಿಂದೆ , ಟಾಯ್ಲೆಟ್ ಪೇಪರ್ , ಪೆಪ್ಸಿ , ಕೋಕೋ ಕೋಲಾ . ಹಾಲು ಮತ್ತು ಮೊಸರಿನಂತಹ ದಿನ ನಿತ್ಯ ಬಳಕೆಗೆ ಬೇಕಾಗುವ ಪದಾರ್ಥಗಳ ಕೊರತೆಯನ್ನ ಜನರು ಎದುರಿಸಬೇಕಾಗಿ ಬಂದಿದೆ. ಭಣಗುಡುವ ಸೂಪರ್ ಮಾರ್ಕೆಟ್ ಗಳು ಕೇವಲ ಹಣವಿದ್ದರೆ ಸಾಲದು , ಹಣದ ಜೊತೆಗೆ ಪದಾರ್ಥಗಳು ಕೂಡ ಬಹಳ ಮುಖ್ಯ ಎನ್ನುವ ಸತ್ಯವನ್ನ ಸಾರುತ್ತಿವೆ.

ಇದೇನು ಹೊಸ ವಿಷಯವಲ್ಲ , ಸಪ್ಲೈ ಚೈನ್ ಸ್ವಲ್ಪ ಏರುಪೇರಾದರೂ ಸ್ಥಿತಿ ಹೀಗಾಗಬಹುದು ಎನ್ನುವುದು ಜಗತ್ತನ್ನ ಆಳಿದ್ದ ಬ್ರಿಟಿಷರಿಗೆ ತಿಳಿದಿತ್ತು . ಅಂದಿನ ಸಮಸ್ಯೆಗಳನ್ನ ಮಾತ್ರ ಗಮನಿಸಿವೆ ಕುಸಿದ ರಾಜಕೀಯ ವ್ಯವಸ್ಥೆ ಬ್ರಿಟನ್ ನಲ್ಲೂ ಇದೆ ಎನ್ನುವುದನ್ನ ಈ ಪ್ರಕರಣ ಜಗಜ್ಜಾಹೀರಾತು ಮಾಡಿದೆ.

Read more about: goodreturns original
English summary

How the supply chain crisis is disrupting Britain

Here we explain how the supply chain crisis affected great Britain. Know more.
Story first published: Monday, September 13, 2021, 21:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X