ಎಫ್‌ಡಿ ಮೇಲೆ 9% ಗರಿಷ್ಠ ಬಡ್ಡಿದರ ಬೇಕಾ..ಹಾಗಾದ್ರೆ ನಿಮಗೆ ಸಣ್ಣ ಹಣಕಾಸು ಬ್ಯಾಂಕ್‌ಗಳೇ ಉತ್ತಮ..!

ಈ ವರ್ಷ..ಅಂದರೆ 2025ರ ಫೆಬ್ರವತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಕಡಿಮೆ ಮಾಡಿದ್ದರಿಂದ, ಫಿಕ್ಸ್ ಡೆಪಾಸಿಟ್‌ ಅಂದರೆ, ಸ್ಥಿರ ಠೇವಣಿಗಳ ಮೇಲೆ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದೆ. ಇದಾದ ನಂತರ ಹೂಡಿಕೆದಾರರು ತಮ್ಮ ದಿಕ್ಕನ್ನು ಬದಲಿಸಿಕೊಂಡಿದ್ದಾರೆ. ಅಂದರೆ ಅನೇಕ ಹೂಡಿಕೆದಾರರು ಉತ್ತಮ ಬಡ್ಡಿದರಗಳನ್ನು FD ಆಯ್ಕೆಗಳತ್ತ ಮುಖ ಮಾಡಿದ್ದಾರೆ. ಸದ್ಯ ಇತರೆ ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತ, ಸಣ್ಣ ಹಣಕಾಸು ಬ್ಯಾಂಕುಗಳು ಕೆಲವು ಅವಧಿಗೆ 9% ವರೆಗಿನ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಹೆಚ್ಚಿನ ಜನರು ತಮ್ಮ FD ಮೇಲೆ ಉತ್ತಮ ಲಾಭ ಪಡೆಯಲು ಬಯಸುತ್ತಾರೆ. ಬಡ್ಡಿ ದರ ಮುಖ್ಯ ಅಂಶವಾಗಿದ್ದು, ಯುನಿಯನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಪ್ರಸ್ತುತ 9% ದರವನ್ನು ನೀಡುತ್ತಿವೆ. ಹೀಗಾಗಿ ಜನರ ಒಲವು ಕೂಡ ಸಣ್ಣ ಫೈನಾನ್ಸ್ ಬ್ಯಾಂಕ್‌ಗಳತ್ತ ದಾಟುತ್ತಿದೆ.

ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ FD ಮೇಲೆ 9%ವರೆಗೂ ಬಡ್ಡಿದರ..!

ಇನ್ನು ಈ ಸಣ್ಣ ಹಣಕಾಸು ಬ್ಯಾಂಕ್ RBIಯಿಂದ ವಿಶೇಷವಾಗಿ ಸ್ಥಾಪಿಸಲಾದ ಒಂದು ಬ್ಯಾಂಕಿಂಗ್ ವಿಭಾಗವಾಗಿದೆ. ಇದು ಜನರಿಗೆ ವ್ಯಾಪಕವಾಗಿ ಬ್ಯಾಂಕಿಗ್ ಸೇವೆ ಮತ್ತು ವಿಭಾಗಗಳಿಗೆ ಮೂಲಭೂತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಈ ಬ್ಯಾಂಕುಗಳು ಸಾಮಾನ್ಯವಾಗಿ ಸಣ್ಣ ಕೈಗಾರಿಕೆಗಳು, ಸಣ್ಣ ಮತ್ತು ಅತಿಸಣ್ಣ ರೈತರು, ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು, ಮತ್ತು ಸಣ್ಣ ವ್ಯಾಪಾರಿಗಳಿಗೆ ಗುರಿಯಾಗಿರುತ್ತವೆ.

ಎಫ್‌ಡಿಯಲ್ಲಿ 9% ವರೆಗಿನ ಬಡ್ಡಿದರ:

  • ಸದ್ಯ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 1001 ದಿನಗಳ, ಎಫ್‌ಡಿಗೆ ಗರಿಷ್ಠ ಬಡ್ಡಿದರ 9%ನೀಡಲಾಗುತ್ತಿದೆ. ಹಾಗೆಯೇ ಒಂದು ವರ್ಷದ ಎಫ್‌ಡಿ ಬಡ್ಡಿದರವನ್ನು 7.85%ಕ್ಕೆ ನಿಗದಿಗೊಳಿಸಲಾಗಿದೆ..
  • ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 18 ತಿಂಗಳು 1 ದಿನದಿಂದ 36 ತಿಂಗಳವರೆಗೆ ಗರಿಷ್ಠ ಬಡ್ಡಿದರ 9%ನೀಡಲಾಗುತ್ತಿದೆ. ಹಾಗೆಯೇ ಒಂದು ವರ್ಷದ ಎಫ್‌ಡಿ ಬಡ್ಡಿದರವನ್ನು 7.00%ಕ್ಕೆ ನಿಗದಿಗೊಳಿಸಲಾಗಿದೆ.
  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 2 - 3 ವರ್ಷಗಳು ಅಥವಾ 1500 ದಿನಗಳಿಗೆ 8.50% ಬಡ್ಡಿದರವನ್ನು ನೀಡಲಾಗುತ್ತಿದೆ. ಹಾಗೆಯೇ ಒಂದು ವರ್ಷದ ಎಫ್‌ಡಿ ಬಡ್ಡಿದರವನ್ನು 8.00%ಕ್ಕೆ ನಿಗದಿಗೊಳಿಸಲಾಗಿದೆ.
  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 18 ತಿಂಗಳ ಅವಧಿಗೆ 8.10% ಗರಿಷ್ಠ ಬಡ್ಡಿದರ ನೀಡಲಾಗುತ್ತದೆ. ಹಾಗೆಯೇ ಒಂದು ವರ್ಷದ ವರ್ಷದ ಎಫ್‌ಡಿ ಬಡ್ಡಿದರವನ್ನು 8.10%ನಿಗದಿಗೊಳಿಸಲಾಗಿದೆ.
  • Suryoday Small Finance Bank 5 ವರ್ಷಗಳ FD ಗೆ 8.6% ಬಡ್ಡಿದರ ನೀಡುತ್ತಿದ್ದು, ಒಂದು ವರ್ಷದ ಠೇವಣಿ ಮೇಲಿನ ಬಡ್ಡಿದರ 8.25% ಆಗಿದೆ.
  • ESAF Small Finance Bank 888 ದಿನಗಳ ಅವಧಿಗೆ 8.38% ಬಡ್ಡಿದರವನ್ನು ನೀಡುತ್ತಿದೆ, ಆದರೆ ಅದರ ಒಂದು ವರ್ಷದ ಎಫ್‌ಡಿ ಬಡ್ಡಿದರ ಕೇವಲ 6% ಆಗಿದೆ.
    Take a Poll

ನೀವು ಈ ಅಂಶಗಳನ್ನು ಗಮನಿಸಲೇಬೇಕು:

1. ಗರಿಷ್ಠ ಬಡ್ಡಿ ದರ:

ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಜನರಿಗೆ ಲಾಭವೇ ಕೊನೆಯ ಗುರಿಯಾಗಿರುತ್ತದೆ. ಹೀಗಾಗಿ FD ಹೂಡಿಕೆ ಮಾಡುವ ಮುನ್ನ ನಿಮ್ಮ ಅವಧಿಗೆ ಹೊಂದುವಂತೆ ಉತ್ತಮ ಬಡ್ಡಿ ದರವನ್ನು ಆಯ್ಕೆ ಮಾಡುವುದು ಮುಖ್ಯ.

2. ಭದ್ರತೆ ಮತ್ತು ಠೇವಣಿ ವಿಮೆ:

ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವವರು, ಸ್ಥಿರತೆ ಮತ್ತು ಭದ್ರತೆ ಪರಿಶೀಲನೆ ಅಗತ್ಯವಾಗಿ ಮಾಡಬೇಕು. ಎಲ್ಲಾ ಸಣ್ಣ ಹಣಕಾಸು ಬ್ಯಾಂಕುಗಳು DICGC ಅಡಿಯಲ್ಲಿ ₹5 ಲಕ್ಷ ವರೆಗೆ ಭದ್ರವಾಗಿದೆ.

3. ಬ್ಯಾಂಕಿನ ನಂಬಿಕೆ ಮತ್ತು ಸ್ಥಿರತೆ:

ಕೆಲವೊಮ್ಮೆ ನೀವು ಯಾವ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಬಯಸುತ್ತೀರ ಎಂಬುದು ಕೂಡ ಮುಖ್ಯವಾಗಿರುತ್ತದೆ. ಏಕೆಂದರೆ ಬ್ಯಾಂಕಿನ ವಿಶ್ವಾಸಾರ್ಹತೆ, ಅದರ ಹಣಕಾಸು ಸ್ಥಿತಿ, ಗ್ರಾಹಕರ ವಿಮರ್ಶೆಗಳು ಮತ್ತು RBI ನಿಯಮಗಳನ್ನು ಅನುಸರಿಸುವ ರೀತಿಯನ್ನು ಗಮನಿಸುವುದು ಮುಖ್ಯ. ಹೊಸ ಅಥವಾ ಕಡಿಮೆ ಖ್ಯಾತಿಯ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿ ದರದ ಆಫರ್ ಇದ್ದರೂ, ಅವರ ಭವಿಷ್ಯ ಮತ್ತು ನಂಬಿಕೆ ಪರಿಗಣಿಸಬೇಕು.

ಸಣ್ಣ ಹಣಕಾಸು ಬ್ಯಾಂಕ್‌ಗಳು ಎಷ್ಟು ಸುರಕ್ಷಿತ..?

AU Small Finance Bank ಪ್ರಕಾರ, ಭಾರತದಲ್ಲಿರು ಇತರೆ ಬ್ಯಾಂಕ್‌ಗಳಿಗಿಂತ ಈ ಸಣ್ಣ ಹಣಕಾಸು ಬ್ಯಾಂಕ್‌ಗಳು ಕೂಡ, RBI ನಿಯಂತ್ರಣ ಮತ್ತು ನಿಯಮಗಳಿಗೆ ಒಳಪಡುತ್ತವೆ. ಹೀಗಾಗಿ ಇವು ಸುರಕ್ಷಿತವಾದ ಬ್ಯಾಂಕ್‌ಗಳು ಎನ್ನಬಹುದು. ಅಲ್ಲದೇ ಸ್ಟ್ಯಾಟ್ಯುಟರಿ ಲಿಕ್ವಿಡಿಟಿ ಅನುಪಾತ ಕ್ಯಾಶ್ ರಿಸರ್ವ್ ರೆಕ್ವೈರ್‌ಮೆಂಟ್ ಮುಂತಾದ ನಿಯಮಗಳು ಸಣ್ಣ ಹಣಕಾಸು ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಜೊತೆಗೆ RBI ಈ ಬ್ಯಾಂಕುಗಳಿಗೆ ಅರ್ಹತಾ ಮಾನದಂಡಗಳು ಮತ್ತು ಅನಿವಾರ್ಯ ಪ್ರಾರಂಭಿಕ ಮೊತ್ತದ ಹೂಡಿಕೆಯನ್ನು ಸೂಚಿಸುತ್ತದೆ. ಹೀಗಾಗಿ ಈ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿದರೆ, ಯಾವುದೇ ತೊಂದರೆ ತಾಪತ್ರಯ ಬರುವುದಿಲ್ಲ ಎನ್ನಬಹುದಾಗಿದೆ.

ಇದಿಷ್ಟೇ ಅಲ್ಲ DICGC ನಿಯಮಗಳ ಪ್ರಕಾರ, ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಸುಮಾರು ₹5 ಲಕ್ಷದವರೆಗೆ ಠೇವಣಿಗಳನ್ನು ವಿಮೆಗೊಳಪಡಿಸಲಾಗುತ್ತದೆ. ಅಲ್ಲದೇ ಇದರಿಂದ ಹೂಡಿಕೆದಾರರ ಠೇವಣಿಗಳು ನಿರ್ದಿಷ್ಟ ಮಟ್ಟಿಗೆ ಸುರಕ್ಷಿತವಾಗಿರುತ್ತವೆ. ಒಟ್ಟಾರೆ ಹೇಳುವುದಾದರೆ, ಸಣ್ಣ ಹಣಕಾಸು ಬ್ಯಾಂಕುಗಳು ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ನೀಡುತ್ತವೆ, ಮತ್ತು ಕೆಲವು ಬ್ಯಾಂಕುಗಳು 9% ವರೆಗೆ ಬಡ್ಡಿದರ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+