ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇಂದು ಮತ್ತು ನಾಳೆ ಉಚಿತವಾಗಿ ಸೇವೆಯನ್ನು ಒದಗಿಸಲಿದೆ. ಸ್ಟ್ರೀಮಿಂಗ್ ಫೆಸ್ಟ್ ಅಡಿಯಲ್ಲಿ ಎರಡು ದಿನಗಳ (ಡಿ. 5 ಮತ್ತು 6)ಎಲ್ಲಾ ಭಾರತೀಯರಿಗೆ ಈ ಸ್ಟ್ರೀಮಿಂಗ್ ಸೇವೆ ನೀಡಲಿದೆ. ಈ ಮೂಲಕ ವೀಕೆಂಡ್‌ನಲ್ಲಿ ಜನರು ಉಚಿತವಾಗಿ ನೆಟ್‌ಫ್ಲಿಕ್ಸ್ ಬಳಸಬಹುದು.
ಈ ಸ್ಟ್ರೀಮ್‌ಫೆಸ್ಟ್‌ಗಾಗಿ ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ನೀಡುವ ಅಗತ್ಯವಿಲ್ಲ. ಉಚಿತವಾಗಿ ಟಿವಿ, ಪಿಸಿ, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮೂಲಕ ಚಲನಚಿತ್ರಗಳು, ಸೀರೀಸ್ ಮತ್ತು ಡಾಕ್ಯುಮೆಂಟ್ರಿಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.
ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸೈನ್ ಅಪ್ ಆಗಿದ್ದವರಿಗೆ ಈ ಉಚಿತ ಸೇವೆ ಲಭ್ಯವಿಲ್ಲ. ಜೊತೆಗೆ ಸ್ಟ್ರೀಮ್‌ಫೆಸ್ಟ್‌ಗಾಗಿ ಸೈನ್ ಅಪ್ ಮಾಡುವವರು ಕೇವಲ ಒಂದು ಮೊಬೈಲ್‌ನಲ್ಲಿ ಮಾತ್ರ ಸೌಲಭ್ಯ ಪಡೆಯುತ್ತಾರೆ. ಆದ್ದರಿಂದಾಗಿ ಒಬ್ಬರ ಐಡಿಯನ್ನು ಬೇರೆಯವರು ಲಾಗಿನ್ ಆಗಲು ಸಾಧ್ಯವಿಲ್ಲ.

ನೆಟ್‌ಫ್ಲಿಕ್ಸ್ ಉಚಿತವಾಗಿ ಬಳಸುವುದು ಹೇಗೆ?
ನೆಟ್‌ಫ್ಲಿಕ್ಸ್ ಉಚಿತವಾಗಿ ಬಳಕೆಗೆ ಮುನ್ನ ನೀವು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು ಅಥವಾ ನೆಟ್‌ಫ್ಲಿಕ್ಸ್.ಕಾಮ್ / ಸ್ಟ್ರೀಮ್‌ಫೆಸ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನೀವು ಸೈನ್ ಅಪ್ ಮಾಡಬೇಕು. ಇಲ್ಲಿ ಫೋನ್ ಸಂಖ್ಯೆ, ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಖಾತೆಯನ್ನು ರಚಿಸಿದ ನಂತರ, ನೀವು ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ 5 ಮತ್ತು 6 ಡಿಸೆಂಬರ್‌ನಲ್ಲಿ ಉಚಿತ ನೆಟ್‌ಫ್ಲಿಕ್ಸ್ ವೀಕ್ಷಿಸಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications