Google Pay, PhonePe ಮೂಲಕ ತಪ್ಪಾದ ಖಾತೆಗೆ ಹಣ ಕಳುಹಿಸಿದರೆ ಹಿಂಪಡೆಯುವದು ಹೇಗೆ? ತಿಳಿಯಿರಿ

ಈ ದಿನಗಳಲ್ಲಿ ಎಲ್ಲಿ ನೋಡಿದ್ರು ಡಿಜಿಟಲ್‌ ಪಾವತಿಗಳೇ ಕಣ್ಣಿಗೆ ಬೀಳುತ್ತವೆ. ಕೈಯಲ್ಲಿ ಹಣವನ್ನ ಇಟ್ಟುಕೊಳ್ಳುವುದಕ್ಕಿಂತ ಎಲ್ಲರೂ ಫೋನ್‌ಗಳ ಪಾವತಿಸುವುದು ಹೆಚ್ಚು. ಈಗಂತು ಡಿಜಿಟಲ್‌ ಪಾವತಿ ಸುರಕ್ಷಿತವಾಗರುವುದರಿಂದ ಎಲ್ಲರೂ ಅದನ್ನೇ ಹೆಚ್ಚಾಗಿ ಬಳಕೆ ಮಡುತ್ತಾರೆ. ಆದ್ರೆ ಪಾವತಿ ಮಾಡುವಾಗ ಹಲವರು ತಪ್ಪಾದ ಖಾತೆಗೆ ಕಳುಹಿಸಿ ಬಿಡುತ್ತಾರೆ. ಆ ವೇಳೆ ಹಣವನ್ನ ಕಳೆದುಕೊಂಡು ಚಿಂತಿಸುವದು ಉಂಟು.

ಹೌದು ಸಾಮಾನ್ಯವಾಗಿ ಜನರು ಆಕಸ್ಮಿಕವಾಗಿ ತಪ್ಪು UPI ಐಡಿಯನ್ನು ನಮೂದಿಸುವ ಮೂಲಕ ತಪ್ಪು ಖಾತೆಗೆ ಅಥವಾ ವ್ಯಕ್ತಿಗೆ ಹಣವನ್ನು ಕಳುಹಿಸುವ ಅನೇಕ ಘಟನೆಳನ್ನ ನಾವು ನೋಡಿದ್ದೇವೆ ಹಾಗೆ ಈ ಬಗ್ಗೆ ಕೇಳಿದ್ದೇವೆ ಕೂಡ. ಆ ಸಮಯದಲ್ಲಿ, ನಮ್ಮಲ್ಲಿ ಹಲವರು ನಷ್ಟವನ್ನು ಅನಭವಸುತ್ತಾರೆ ಮತ್ತು ಹಣವನ್ನು ಹಿಂಪಡೆಯಲು ಪ್ರಯತ್ನವನ್ನೂ ಕೂಡ ಮಾಡುವುದಿಲ್ಲ.

 UPI ಮೂಲಕ ತಪ್ಪಾದ ಖಾತೆಗೆ ಹಣ ಕಳುಹಿಸಿದ್ದರೆ ಚಿಂತೆ ಬೇಡ!

ನೀವನಾದ್ರು ಇಂತಹ ಸಂದರ್ಭಗಳನ್ನ ಎದುರಿಸಿದ್ದರೆ ಇನ್ನು ಮೇಲೆ ಚಿಂತಿಸುವ ಅಗತ್ಯವಿಲ್ಲ. ನೀವೇನಾದ್ರು ತಪ್ಪು ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ನೀವು ನಿಮ್ಮ ಹಣವನ್ನು ಹಿಂಪಡೆಯಲು ಒಂದು ಮಾರ್ಗವಿದೆ ಅದನ್ನ ಇಲ್ಲಿ ತಿಳಿಯಿರಿ.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಡಿಜಿಟಲ್ ಸೇವೆಗಳ ಮೂಲಕ ತಪ್ಪಾದ ವ್ಯಕ್ತಿಗೆ ನೀವೇನದ್ರು ಹಣ ಕಳುಹಿಸಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಪಾವತಿಸಿದ ದಾಖಲೆಗಳನ್ನ ಬಳಸಿ ದೂರು ಸಲ್ಲಿಸಬೇಕಾುತ್ತದೆ. ಹಾಗಾಗಿ, ನೀವೇನಾದ್ರು Google Pay, Phone Pe, Paytm ಅಥವಾ ಇತರ UPI ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪಾಗಿ ಹಣವನ್ನು ವರ್ಗಾಯಿಸಿದ್ದರೆ ನೀವು NPCI ಪೋರ್ಟಲ್‌ ಮೂಲಕ ದೂರನ್ನ ಸಲ್ಲಿಸಬಹುದು.

ಇಂತಹ ಸಂದರ್ಭಗಳಲ್ಲಿ ನೀವು ದೂರು ಸಲ್ಲಿಸಬಹುದು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ವೆಬ್‌ಸೈಟ್‌ನ ಮೂಲಕ, ಉದ್ದೇಶಪೂರ್ವಕವಲ್ಲದ UPI ವಹಿವಾಟಿನ ಸಂದರ್ಭದಲ್ಲಿ ನೀವು ದೂರು ಅದರ ವಿರುದ್ಧ ದೂರು ಸಲ್ಲಿಸಬಹುದು. ನಿಧಿ ವರ್ಗಾವಣೆ ಅಥವಾ ವ್ಯಾಪಾರ ವಹಿವಾಟು ಎರಡೂ ವಹಿವಾಟುಗಳ ಸಂದರ್ಭದಲ್ಲೂ ನೀವು ದೂರು ಸಲ್ಲಿಸಬಹುದು.

ಅಥವಾ npci.org.in ವೆಬ್‌ಸೈಟ್‌ಗೆ ಹೋಗಿ ವಿವಾದ ಪರಿಹಾರ ಕಾರ್ಯವಿಧಾನ (Dispute Redressal Mechanism) ಟ್ಯಾಬ್ ಅಡಿಯಲ್ಲಿ ನೀವು ದೂರು ಸಲ್ಲಿಸಬಹುದು. ಕಂಪ್ಲೈಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು UPI ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟಿನ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ. ಅಲ್ಲದೆ ನೀವು ನಿಮ್ಮ ಖಾತೆಯಲ್ಲಿ ಕಡಿತವದಂತ ಹಣದ ವಿವರವನ್ನು ಕೂಡ ನೀವು ಅಪ್‌ಲೋಡ್‌ ಮಾಡಬಹುದು.

ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮ್ಮ ದೂರಿಗೆ ಕಾರಣವನ್ನ ಬರೆಯಬೇಕಾಗುತ್ತದೆ. ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂದು ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ಕಂಪ್ಲೇಂಟ್‌ ಫೈಲ್‌ ಮಾಡಬುದು.

NPCI ವೆಬ್‌ಸೈಟ್‌ನ ಪ್ರಕಾರ, ನೀವೇನಾದ್ರು TPAP ಅಪ್ಲಿಕೇಶನ್ ಮೂಲಕ UPI ವಹಿವಾಟು ನಡೆಸಿದರೆ, ನೀವು ಮೊದಲು TPAP ಸಂಬಂಧಿತ ಆಪ್‌ಗಳಲ್ಲಿ ದೂರು ಸಲ್ಲಿಸಬೇಕಾಗುತ್ತದೆ. Google Pay ನಂತಹ TPAPನೊಂದಿಗೆ ನೀವು ಮೊದಲು ಎಲ್ಲಾ UPI-ಸಂಬಂಧಿತ ಕುಂದುಕೊರತೆಗಳು, ದೂರುಗಳನ್ನ ಪಿಎಸ್ಪಿ ಬ್ಯಾಂಕ್ ಅಥವಾ ಟಿಪಿಎಪಿ ಮೂಲಕ ಸಲ್ಲಿಸಬೇಕು.

ಅಪ್ಲಿಕೇಶನ್ ಏನಾದ್ರು ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ನೀವು PSP ಬ್ಯಾಂಕ್ ಮತ್ತು NPCI ಮೂಲಕ ದೂರು ನೀಡಬಹುದು. ಅದೇ ಕ್ರಮದಲ್ಲಿ ನಂತರ ಅಂತಿಮ-ಬಳಕೆದಾರ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಮತ್ತು / ಅಥವಾ ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್‌ಮನ್‌ನಲ್ಲಿ ದೂರು ಸಲ್ಲಿಸಬಹುದು.

ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್

ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್ ದೂರುಗಳನ್ನು ಪರಿಹರಿಸಲು ಮತ್ತು ಡಿಜಿಟಲ್ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಥಾಪಿಸಿದ ಕುಂದುಕೊರತೆ ಪರಿಹಾರ ಕಾರ್ಯವಿಧಾನವಾಗಿದೆ.

ಮೊದಲು ಕುಂದುಕೊರತೆಯ ಪರಿಹಾರಕ್ಕಾಗಿ, ದೂರುದಾರರು ಮೊದಲು Google Pay, PhonePe ಅಥವಾ Paytm, ಇತ್ಯಾದಿಗಳನ್ನ ಸಂಪರ್ಕಿಸುವ ಮೂಲಕ ನೀವು ದೂರು ನೀಡಬೇಕು.

ನಿಮ್ಮ ಮೂಲ ಆಪ್‌ಗಳಗೆ ದೂರು ನೀಡಿದಾಗ ಅವರು ದೂರು ಸ್ವೀಕರಿಸಿದ ನಂತರ ಒಂದು ತಿಂಗಳ ಅವಧಿಯೊಳಗೆ ಉತ್ತರಿಸದಿದ್ದರೆ, ಅಥವಾ ದೂರನ್ನು ತಿರಸ್ಕರಿಸಿದರೆ ಮಾತ್ರ ಬಳಕೆದಾರರು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. ಅವರು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್‌ಗೆ ದೂರನ್ನು ಸಲ್ಲಿಸಬೇಕಾಗಿತ್ತದೆ. ಹಾಗೆ ಅವರ ಅಧಿಕಾರ ವ್ಯಾಪ್ತಿಯೊಳಗೆ ಸಿಸ್ಟಮ್ ಭಾಗವಹಿಸುವವರ ಶಾಖೆ ಅಥವಾ ಕಛೇರಿಯ ವಿರುದ್ಧ ದೂರು ನೀಡಬಹದು.

ಈ ಉಪಕ್ರಮವು ಗ್ರಾಹಕರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಒಟ್ಟಾರೆ ನಂಬಿಕೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ವಿಫಲ ವಹಿವಾಟುಗಳು, ಅನಧಿಕೃತ ಡೆಬಿಟ್‌ಗಳು, ವಂಚನೆಗಳು, ಮೊಬೈಲ್ ಬ್ಯಾಂಕಿಂಗ್‌ನಲ್ಲಿನ ಸಮಸ್ಯೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿಗಳಂತಹ ಸಮಸ್ಯೆಗಳನ್ನು ಒಳಗೊಂಡಿರುವ ದೂರುಗಳನ್ನು ಓಂಬುಡ್ಸ್‌ಮನ್ ನಿರ್ವಹಿಸುತ್ತಾರೆ.

ತಮ್ಮ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಪರಿಹರಿಸಲು ಸಾಧ್ಯವಾಗದಿದ್ದರೆ RBI ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. ಒಂಬುಡ್ಸ್‌ಮನ್ ಕುಂದುಕೊರತೆಗಳನ್ನು ಪರಿಹರಿಸಲು ಉಚಿತ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ನೀಡುತ್ತದೆ, ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಈ ಉಪಕ್ರಮವು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಹಣಕಾಸಿನ ಸೇರ್ಪಡೆಯನ್ನು ಬಲಪಡಿಸಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು RBI ನ ವಿಶಾಲ ಪ್ರಯತ್ನಗಳ ಭಾಗವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+