ನೀವು ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆ ಇದ್ಯಾ..? ಈ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಪ್ಲಾನ್ ಮಾಡುಕೊಂಡಿದ್ದೀರಾ..? ಹಾಗಿದ್ರೆ ತಪ್ಪದೇ ಈ ಸುದ್ದಿಯನ್ನು ನೀವು ಓದಲ್ಲೇಬೇಕು.
ಹೌದು, ಚಿನ್ನ ದಿನೇದಿನೆ ದುಬಾರಿಯಾಗುತ್ತ ಅಂಬರದತ್ತ ಹೋಗುತ್ತಿದ್ದರೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ವ್ಯಾಮೋಹ ಎಂದು ಕೂಡ ಕಡಿಮೆಯಾಗುವುದಿಲ್ಲ. ಹಬ್ಬ, ಹರಿದಿನ ಮದುವೆ, ಶುಭಸಮಾರಂಭಕ್ಕೆ ಬಂಗಾರವನ್ನು ಖರೀದಿ ಮಾಡುತ್ತಲ್ಲೇ ಇರುತ್ತಾರೆ. ಕೇವಲ ಅಲಂಕಾರಕ್ಕೆ ಮಾತ್ರ ಚಿನ್ನವನ್ನು ಖರೀದಿ ಮಾಡುವುದಿಲ್ಲ ಕಷ್ಟದ ಸಮಯದಲ್ಲಿ ನಮ್ಮಗೆ ನೇರವಾಗುತ್ತದೆ ಎಂದು ಚಿನ್ನವನ್ನು ಕೊಳ್ಳಲುತ್ತಾರೆ. ಜನರು ಅತಿ ಹೆಚ್ಚಾಗಿ ಭೂಮಿ ಅಥವಾ ಚಿನ್ನದ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಾರೆ. ಇದರ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಸುರಕ್ಷಿತವಾಗಿರುತ್ತದೆ.ಸಿಂಧೂ ನಾಗರೀಕತೆಯ ಕಾಲದಿಂದಲ್ಲೂ ಚಿನ್ನವನ್ನು ಹೆಚ್ಚು ಖರೀದಿ ಮಾಡುತ್ತಿರುವುದರಿಂದ ವಿಶ್ವಾಸಾರ್ಹ ಹೆಚ್ಚಾಗಿ ಇದೆ.

ಇದೇ ತಿಂಗಳು ಅಕ್ಷಯ ತೃತೀಯಕ್ಕೆ ಇರುವುದರಿಂದ ಹೆಚ್ಚಿನ ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ. ಈ ದಿನದಂದು ಚಿನ್ನವನ್ನು ಮನೆಗೆ ತೆಗೆದುಕೊಂಡು ಹೋದರೆ ಹೆಚ್ಚಿನ ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ನೀವು ಬಂಗಾರ ಕೊಳ್ಲಲು ಯೋಚಿಸುತ್ತಿದ್ದರೆ, ನಿಮಗೆ ಈ ಮಾಹಿತಿ ಅನುಕೂಲವಾಗುತ್ತದೆ. ಅದು ಹೇಗೆ ಎಂಬುವುದನ್ನು ತಿಳಿಯಲು ಮುಂದೆ ಓದಿ.
ಚಿನ್ನದಲ್ಲಿ ಹೂಡಿಕೆಗೂ ಮುನ್ನ ಯೋಜಿಸಿ: ನೀವು ಚಿನ್ನವನ್ನು ತಗೆದುಕೊಳ್ಳವ ಮೊದಲುಯಾವ ಕಾರಣಕ್ಕೆ ಹೂಡಿಕೆ ಮಾಡಲು ಅದುಕೊಂಡಿದ್ದಾರೆ ಎಂಬುವುದನ್ನು ಮೊದಲು ಯೋಚನೆ ಮಾಡಿ ಚಿನ್ನ ಮದುವೆಗೂ ಅಥವಾ ಹಬ್ಬಕ್ಕೂ ಅಥವಾ ನೀವು ಚಿನ್ನವನ್ನು ಆನ್ಲೈನ್ ನಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತೀರಾ..? ಎಂಬ ಗುರಿಯನ್ನು ಇಟ್ಟುಕೊಂಡು ನಿರ್ಧಾರ ಮಾಡಿ. ಚಿನ್ನ ಹೂಡಿಕೆಯ ಅವಧಿಯ ಬಗ್ಗೆಯೂ ಯೋಚನೆ ಮಾಡುವುದು ಒಳಿತು. ಅದರಲ್ಲಿ ನೀವು ಅಲ್ಪಾವಧಿಗೆ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡಲು ಬಯಸುತ್ತೀರಾ ಎಂಬುವುದನ್ನು ತಿರ್ಮಾನಿಸಿ ನಿರ್ಧಾರ ಮಾಡಿಕೊಳ್ಳಿ. ನೀವು ಭೌತಿಕ ಚಿನ್ನ, ಡಿಜಿಟಲ್ ಚಿನ್ನ, ಸಾವರಿನ್ ಗೋಲ್ಡ್ ಬಾಂಡ್ ಅಥವಾ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಎಂದು ಯೋಚಿಸಿ ನಿಮ್ಮ ಬಜೆಟ್ ಅನುಗುಣವಾಗಿ ಚಿನ್ನವನ್ನು ತಗೆದುಕೊಳ್ಳಿ..
ಹೂಡಿಕೆ ವಿಧಾನ ಆಯ್ಕೆ ಮಾಡಿ: ನೀವು ನಿಮ್ಮ ಚಿನ್ನದ ಮೇಲೆ ಹೂಡಿಕೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳು ಇವೆ. ನಿಮ್ಮ ಸೂಕ್ತವಾದ ವಿಧಾನವನ್ನು ಆಯ್ಕೆ ಮಾಡಿಕೊಂಡು ಚಿನ್ನವನ್ನು ಹೂಡಿಕೆ ಮಾಡಿ. ಭೌತಿಕ ಚಿನ್ನದ (ಆಭರಣ, ನಾಣ್ಯ, ಬಾರ್)ದ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿ ಯಾಕೆಂದರೆ ಇದನ್ನು ನೀವು
ಕಷ್ಟಕಾಲದಲ್ಲಿ ಕೂಡ ಉಪಯೋಗಿಸಬಹುದಾದ ಸಂಪತ್ತು ಆಗಿದೆ. ನಿಮ್ಮ ಬಳಿಯೇ ಚಿನ್ನವನ್ನು ಇಟ್ಟುಕೋಳ್ಳವ ಮೊದಲು ಅದರ ಸಂಗ್ರಹಣೆಯ ಸುರಕ್ಷಿತಯ ಬಗ್ಗೆ ಯೋಚನೆ ಮಾಡಿ. ಇಲ್ಲವಾದಲ್ಲೇ ನೀವು ಮೇಕಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಯಾವಾಗಲೂ ವಿಶ್ವಾಸಾರ್ಹ ಆಭರಣ ವ್ಯಾಪಾರಿಗಳಿಂದ ಮಾತ್ರ ಚಿನ್ನವನ್ನು ಖರೀದಿ ಮಾಡಿ.
ನೀವು ಡಿಜಿಟಲ್ ಚಿನ್ನ ಖರೀದಿಸಲು ಬಯಸಿದ್ದೀರಾ..?
ನೀವು ಡಿಜಿಟಲ್ ಚಿನ್ನವನ್ನು ಖರೀದಿಸಲು ಬಯಸಿದರೆ ಅದನ್ನು ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಂತಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಚಿನ್ನವನ್ನು ಪಡೆದುಕೊಳ್ಳಬಹುದು. ಇದರಲ್ಲಿ ನೀವು ಸಣ್ಣ ಮೊತ್ತದಿಂದ ಹೂಡಿಕೆ ಮಾಡಲು ಶುರು ಮಾಡಬಹುದು. ಆದರೆ ನೀವು ಎಲ್ಲಿ ಖರೀದಿ ಮಾಡುತ್ತೀರಾ ಎಂಬುವುದನ್ನು ಮುಖ್ಯವಾಗುತ್ತದೆ.
ಚಿನ್ನದ ವೇದಿಕೆಯ ವಿಶ್ವಾಸಾರ್ಹತೆ ಮುಖ್ಯವಾಗುತ್ತದೆ. ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಿಂದ ಡಿಜಿಟಲ್ ಚಿನ್ನದಲ್ಲಿ ಮಾತ್ರ ಹೂಡಿಕೆ ಮಾಡಿ.
ಚಿನ್ನವನ್ನು ಷೇರು ಮಾರುಕಟ್ಟೆ ಹೂಡಿಕೆ ಮಾಡಿ: ನೀವು ಚಿನ್ನವನ್ನು ಷೇರು ಮಾರುಕಟ್ಟೆಯಲ್ಲೂ ಸಹ ಹೂಡಿಕೆ ಮಾಡಬಹುದು.ETF ಚಿನ್ನದ ಬೆಲೆಯನ್ನು ಆಧರಿಸಿದ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ಫಂಡ್. ನೀವು ಈ ವಿಧಾನದಲ್ಲಿ ಹೂಡಿಕೆ ಮಾಡಿದರೆ, ನೀವು ಇದ್ನು ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ಅಲ್ಲದ ಸುಲಭವಾಗಿ ಟ್ರೇಡ್ ಮಾಡಬಹುದು. ಆದರೆ, ಈ ಆಯ್ಕೆಯು ಬ್ರೋಕರೇಜ್ ಶುಲ್ಕ ಮತ್ತು ಮಾರುಕಟ್ಟೆ ರಿಸ್ಕ್ ಇದು ಒಳಗೊಂಡಿರುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ (SGB): ಸಾವರಿನ್ ಗೋಲ್ಡ್ ಬಾಂಡ್ ಆರ್‌ಬಿಐ ಹೊರಡಿಸಿದ ಬಾಂಡ್ ಆಗಿದೆ. ಇವು ಚಿನ್ನದ ಬೆಲೆಗಳಿಗೆ ಸಂಬಂಧಪಟ್ಟಿರುತ್ತದೆ.ನೀವು ಇದರೊಳಗೆ ವಾರ್ಷಿಕ ಶೇ.2.5 ಬಡ್ಡಿ ಮತ್ತು ತೆರಿಗೆ ಪ್ರಯೋಜನ ನೀಡುತ್ತದೆ. ಗೋಲ್ಡ್ ಬಾಂಡ್ ಲಾಕ್-ಇನ್ ಅವಧಿ 8 ವರ್ಷ. ಆದರೆ, ಕಳೆದ ಒಂದು ವರ್ಷದಿಂದಲೂ ಗೋಲ್ಡ್ ಬಾಂಡ್‌ಗಳನ್ನು ಬಿಡುಗಡೆಯನ್ನು ಮಾಡಿಲ್ಲ
ಚಿನ್ನದ ಬೆಲೆಗಳ ಬಗ್ಗೆ ಪ್ರತಿನಿತ್ಯ ತಿಳಿದುಕೊಳ್ಳಿ
ಚಿನ್ನದ ಬೆಲೆಗಳು ದಿನನಿತ್ಯವೂ ಬದಲಾಗುತ್ತಲೇ ಇರುತ್ತದೆ.ನೀವು ಹೂಡಿಕೆ ಮಾಡುವ ಮೊದಲು ನೀವು ಚಿನ್ನದ ಪ್ರಸ್ತುತ ಬೆಲೆಯನ್ನು ತಿಳಿದುಕೊಳ್ಳಬೇಕು. ಆರ್‌ಬಿಐ ಜ್ಯುವೆಲ್ಲರ್ಸ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಂತಹ ವಿಶ್ವಾಸಾರ್ಹ ಮೂಲಗಳಿಂದ ಚಿನ್ನದ ಬೆಲೆಗಳನ್ನು ಪಡೆಯಬಹುದು. ನೀವು ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದರೆ ಹಾಲ್‌ಮಾರ್ಕ್ ಗಮನಿಸಬೇಕಾಗುತ್ತದೆ.
ಚಿನ್ನದ ಹೂಡಿಕೆಯ ಮೇಲ್ವಿಚಾರಣೆ ಮತ್ತು ಸುರಕ್ಷತೆ
ಭೌತಿಕ ಚಿನ್ನ:
ಸುರಕ್ಷತೆ: ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಸುರಕ್ಷಿತ ಆಯ್ಕೆ.
ಬೀಮಾ ರಕ್ಷಣೆ: ಹೆಚ್ಚಿನ ಮೌಲ್ಯದ ಚಿನ್ನಕ್ಕೆ ವಿಮೆ ಮಾಡಿಸಿಕೊಂಡು ಹೆಚ್ಚಿನ ಭದ್ರತೆ ಪಡೆಯಬಹುದು.
ಪರೀಕ್ಷಣೆ: ಕಾಲಕಾಲಕ್ಕೆ ಚಿನ್ನದ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಒಳಿತು.
ಡಿಜಿಟಲ್ ಚಿನ್ನ:
ವಿಶ್ವಾಸಾರ್ಹ ವೇದಿಕೆ: RBI-ಅನುಮೋದಿತ ಅಥವಾ Sebi-ನಿಯಂತ್ರಿತ ವೇದಿಕೆಗಳ (ಉದಾ: SafeGold, MMTC-PAMP, Augmont) ಮೂಲಕ ಮಾತ್ರ ಹೂಡಿಕೆ ಮಾಡಬೇಕು. ಟ್ರಾನ್ಸ್ಪೆರ ಖರೀದಿ, ಮಾರಾಟ ಎಲ್ಲವೂ ಟ್ರಾನ್ಸ್ಪೆರಂಟ್ ಆಗಿರಬೇಕು.
ಈ ಎಲ್ಲಾ ಅಂಶಗಳನ್ನು ಗಮದಲ್ಲಿ ಇಟ್ಟಕೊಂಡು ಚಿನ್ನದ ಬೆಲೆ ಇಳಿಕೆಯಾದಗ ನೀವು ಚಿನ್ನವನ್ನು ಖರೀದಿ ಮಾಡಲು ಸೂಕ್ತ ಸಮಯವೆಂದೂ ಹೇಳಬಹುದು.


Click it and Unblock the Notifications