ರೈಲ್ವೆ ಸಚಿವಾಲಯವು ತತ್ಕಾಲ್ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಹೊಸ ನಿಯಮವನ್ನು ಅಧಿಕೃತವಾಗಿ ಪ್ರಕಟಿಸಿದೆ.ಈ ನಿಯಮಗಳು ಜುಲೈ 1ರಿಂದಲ್ಲೇ ಜಾರಿಗೆ ಬರುತ್ತೇವೆ.ಈ ನಿಯದ ಪ್ರಕಾರ IRCTC ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಲಿಂಕ್ ಇಲ್ಲದಿದ್ದರೆ ತತ್ಕಾಲ್ ಟಿಕೆಟ್ ಸಿಗಲ್ಲ. ಆಧಾರ್ ಲಿಂಕ್ ಮಾಡಿದ ಪ್ರಯಾಣಿಕರಿ ಮಾತ್ರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಸೀಟುಗಳನ್ನು ಬುಕ್ ಮಾಡಲು ಅರ್ಹತೆಯನ್ನು ಹೊಂದಿರುತ್ತದೆ. ಹಾಗಿದ್ರೆ, IRCTC ಖಾತೆಯೊಂದಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು? ಪ್ರಯಾಣಿಕರ ಸೇರ್ಪಡೆ ಹೇಗೆ? ಲಿಂಕ್ ಮಾಡದಿದ್ದರೆ ಏನೆಲ್ಲಾ ಸೌಲಭ್ಯಗಳು ಸಿಗಲ್ಲ? ಎಂಬ ಹೆಚ್ಚಿನ ವಿವರಗಳು ಇಲ್ಲಿದೆ ನೋಡಿ.
ಹೌದು, ಜುಲೈ 1ರಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುವಂತಹ ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railway) ಹೊಸ ನಿಯಮಗಳನ್ನು ಪ್ರಕಟಿಸಿದೆ. ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ಟಿಕೆಟ್ ಬುಕ್ ಮಾಡಬಹುದು. ಈ ನಿಯಮಗಳಿಮದ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅನ್ನು ಸುಲಭವಾಗುತ್ತದೆ. ಜೊತೆಗೆ ಪ್ರಕ್ರಿಯೆಯ ಸಮಯದಲ್ಲಿ ವಂಚನೆನ್ನು ತಡೆಗಟ್ಟುತ್ತದೆ.

ತತ್ಕಾಲ್ ರೈಲು ಟಿಕೆಟ್‌ನ್ನು ಎಲ್ಲಿ ಬುಕ್ ಮಾಡುವುದು..?
ರೈಲ್ವೆ ಸಚಿವಾಲಯದ ಸುತ್ತೋಲೆಯ ಪ್ರಕಾರ, ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್‌ಸೈಟ್/ಅದರ ಅಪ್ಲಿಕೇಶನ್ ಮೂಲಕ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ಬುಕ್ ಮಾಡಬಹುದು ಎಂದು ಮಾಹಿತಿಯನ್ನು ತಿಳಿಸಿದೆ.
ತತ್ಕಾಲ್ ಟಿಕೆಟ್ ಬುಕ್ ಆರಂಭ ಮಾಡುವ ಮೊದಲು ಈ ದಾಖಲೆಗಳು ಇರಲೇಬೇಕು
- ಸಕ್ರಿಯ IRCTC ಖಾತೆ
- ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ
- OTP ಸ್ವೀಕರಿಸಲು ಆಧಾರ್ ಲಿಂಕ್ ಆದ ಮೊಬೈಲ್ ಫೋನ್
IRCTC ಖಾತೆಯೊಂದಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು..?
- ಮೊದಲು ನೀವು ಅಧಿಕೃತ IRCTC ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಹೆಸರು ಅಥವಾ ಇ-ಮೇಲ್ ಐಡಿಯಿಂದ ಲಾಗಿನ್ ಮಾಡಿ.
- ನನ್ನ ಖಾತೆ ಟ್ಯಾಬ್‌ಗೆ ಹೋಗಿ ಬಳಕೆದಾರರನ್ನು ದೃಢೀಕರಿಸಿ ಆಯ್ಕೆಮಾಡಿಕೊಳ್ಳಿ
- ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿಯನ್ನು ನಮೂದಿಸಿ.
- ವಿವರಗಳನ್ನು ಪರಿಶೀಲಿಸಿ ಮತ್ತು OTP ಸ್ವೀಕರಿಸಿ ಆಯ್ಕೆಮಾಡಿ.
- ನಿಮ್ಮ ಫೋನ್‌ನಲ್ಲಿ ನೀವು OTP ಪಡೆದ ನಂತರ, ಅದನ್ನು ನಮೂದಿಸಿ ಮತ್ತು ಸಮ್ಮತಿ ಫಾರ್ಮ್‌ಗೆ ಒಪ್ಪಿಕೊಂಡ ನಂತರ ಸಲ್ಲಿಸಿ.
- ನಿಮ್ಮ ಆಧಾರ್ ಯಶಸ್ವಿಯಾಗಿ ದೃಢೀಕರಿಸಿದ ನಂತರ ದೃಢೀಕರಣ ಸಂದೇಶ ನಿಮ್ಮ ಕಾಣಿಸಿಕೊಳ್ಳುತ್ತದೆ.
ನಿಮ್ಮ IRCTC ಖಾತೆಗೆ ಆಧಾರ್-ಪರಿಶೀಲಿಸಿದ ಪ್ರಯಾಣಿಕರನ್ನು ಹೇಗೆ ಸೇರ್ಪಡೆಸುವುದು ..?
ನಿಮ್ಮ ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಬೇಗನೆ ಮತ್ತು ಸುಲಭವಾಗಿ ನೀವು ನಿಮ್ಮ ಮಾಸ್ಟರ್ ಪಟ್ಟಿಯಲ್ಲಿ ಪ್ರಯಾಣಿಕರ ವಿವರಗಳನ್ನು ಮೊದಲೇ ಸಂಗ್ರಹಿಸಬಹುದು ಮತ್ತು ಅವುಗಳನ್ನು ಮುಂಚಿತವಾಗಿ ಆಧಾರ್-ಪರಿಶೀಲಿಸಬಹುದು. ಅದಕ್ಕಾಗಿ ಈ ರೀತಿ ಮಾಡಿ
- ನಿಮ್ಮ IRCTC ಖಾತೆಗೆ ಲಾಗಿನ್ ಆದ ನಂತರ, ನನ್ನ ಪ್ರೊಫೈಲ್‌ಗೆ ಭೇಟಿ ನೀಡಿ ನಂತರ ಮಾಸ್ಟರ್ ಲಿಸ್ಟ್ ಆಯ್ಕೆಮಾಡಿ.
- ಪ್ರಯಾಣಿಕರ ವಿವರಗಳಾದ ಹೆಸರು, ಜನ್ಮ ದಿನಾಂಕ ಮತ್ತು ಲಿಂಗ ಅವರ ಆಧಾರ್ ಕಾರ್ಡ್‌ನಲ್ಲಿ ಕಂಡುಬರುವಂತೆಯೇ ನಮೂದಿಸಿ.
- ಐಡಿ ಪ್ರೂಫ್ ಆಗಿ ಆಧಾರ್ ಕಾರ್ಡ್ ಅನ್ನು ಆಯ್ಕೆಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
- ವಿವರಗಳನ್ನು ಸಲ್ಲಿಸಿ. ಪ್ರಯಾಣಿಕರ ಪರಿಶೀಲನಾ ಸ್ಥಿತಿಯು ಆರಂಭದಲ್ಲಿ ಬಾಕಿ ಇದೆ ಎಂದು ತೋರಿಸುತ್ತದೆ.
- ಪರಿಶೀಲನೆ ಪೂರ್ಣಗೊಂಡಿದೆಯೇ ಎಂದು ಪರಿಶೀಲಿಸಲು, ಬಾಕಿ ಇರುವ ಆಧಾರ್ ಪರಿಶೀಲನಾ ಸ್ಥಿತಿಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ ಅನ್ನೂವುದರ ಮೇಲೆ ಕ್ಲಿಕ್ ಮಾಡಿ.
- ವಿವರಗಳು ಆಧಾರ್ ಡೇಟಾಬೇಸ್‌ಗೆ ಹೊಂದಿಕೆಯಾದ ನಂತರ, ಸ್ಥಿತಿಯನ್ನು ಪರಿಶೀಲಿಸಲಾಗಿದೆ ಎಂದು ನವೀಕರಿಸಲಾಗುತ್ತದೆ.
- ಒಮ್ಮೆ ಪ್ರಯಾಣಿಕರನ್ನು ಪರಿಶೀಲಿಸಿದ ನಂತರ, ಬುಕಿಂಗ್ ಸಮಯದಲ್ಲಿ ಅವರ ವಿವರಗಳು ನಿಮ್ಮ ಮಾಸ್ಟರ್ ಪಟ್ಟಿಯಿಂದ ನೇರವಾಗಿ ಲಭ್ಯವಿರುತ್ತವೆ.
ಹೀಗೆ ನೀವು ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ IRCTC ಟಿಕೆಟ್‌ನ್ನು ಬುಕ್ ಮಾಡಬಹುದು.


Click it and Unblock the Notifications