ಅಂಚೆ ಕಛೇರಿಯಲ್ಲಿ ಸ್ಥಿರ ಠೇವಣಿ ತೆರೆಯುವುದು ಈಗಂತು ಸುಲಭವಾಗಿಬಿಟ್ಟಿದೆ. ಅದರಲ್ಲೂ ಎಲ್ಲಾ ಪ್ರಕ್ರಿಯೆಗಳು ಕಾಗದ ರಹಿದ ಆದ ನಂತರ ಈಗ ಯಾರು ಬೇಕಾದ್ರು ಎಲ್ಲಿ ಬೇಕಾದ್ರು ಪೋಸ್ಟ್ ಆಫೀಸ್ ಸ್ಥಿರ ಠೇವಣಿಯನ್ನ ತೆರೆಯಬಹುದು.
ಪೋಸ್ಟ್ ಆಫೀಸ್ ಸ್ಥಿರ ಠೇವಣಿ ಖಾತೆಯನ್ನ ತೆರೆಯುವುದು ಬಹಳ ಸುಲಭ ಅಲ್ಲದೆ ಇದು ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಹಾಗೆ ಇದು ಅತ್ಯಂತ ವಿಶ್ವಾಸಾರ್ಹ ಮಾರ್ಗಗಳಲ್ಲಿ ಒಂದಾಗಿದೆ. ಸಾರ್ವಜನಿಕರಿಗಾಗಿ ಭಾರತೀಯ ಅಂಚೆ ಕಛೇರಿ ವಿವಿಧ ರೀತಿಯ ಹೂಡಿಕೆ ಯೋಜನೆಗಳನ್ನ ನೀಡುತ್ತಿದೆ.

ಸ್ಥಿರ ಠೇವಣಿ ಯೋಜನೆಯು ಸ್ಥಿರವಾದ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಆಫ್‌ಲೈನ್ ಮೂಲಕ ನಿಮ್ಮ ಖಾತೆಗಳನ್ನ ತೆರೆಯುವ ಅವಕಾಶವಿದ್ದರು ಕೂಡ, ಆನ್‌ಲೈನ್ ಪ್ರಕ್ರಿಯೆಯ ಮೂಲಕ ನೀವು ಸುಲಭವಾಗಿ ಖಾತೆಯನ್ನ ತೆರೆಯಬಹುದು.
ಅಂಚೆ ಕಛೇರಿಯಲ್ಲಿ ಸ್ಥಿರ ಠೇವಣಿ ತೆರೆಯುವ ಪ್ರಯೋಜನಗಳು
ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆಯು ಭಾರತ ಸರ್ಕಾರದ ಯೋಜನೆಯಾಗಿರುವುದರಿಂದ ಇದು ಕಡಿಮೆ-ಅಪಾಯದ ಹೂಡಿಕೆಯ ಆಯ್ಕೆಯಾಗಿದೆ. ಜನರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಹೀಗಾಗಿ ಅನೇಕರು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಖಾತೆಗಳ ಮೇಲಿನ ಬಡ್ಡಿ ದರಗಳು ಕೂಡ ಸಾಕಷ್ಟು ಸ್ಪರ್ಧಾತ್ಮಕವಾಗಿವೆ ಮತ್ತು ಅಂಚೆ ಕಚೇರಿಗಳು ಕೂಡ ಬಡ್ಡಿ ದರಗಳನ್ನು ನೀಡುತ್ತವೆ. ನಿಮ್ಮ ಬಡ್ಡಿದರಗಳು FDಯ ಅವಧಿಯ ಪ್ರಕಾರ ಬದಲಾಗುತ್ತದೆ.
ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗುವಂತೆ ನೀವು 1 ವರ್ಷದಿಂದ 5 ವರ್ಷಗಳವರೆಗಿನ ಅವಧಿಯನ್ನು ನೀವು ಆಯ್ಕೆ ಮಾಡಬಹುದು. ಕೆಲವು ಅಂಚೆ ಕಛೇರಿ ಎಫ್‌ಡಿ ಯೋಜನೆಗಳು ಮಾತ್ರ ತುರ್ತು ಸಂದರ್ಭದಲ್ಲಿ ಹಣವನ್ನ ಹಿಂಪಡೆಯಲು ನಿಮಗೆ ಅವಕಾಶ ನೀಡುತ್ತವೆ. ಇನ್ನು ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಹೆಚ್ಚಾಗಿ, 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್‌ಗಳು ಆದಾಯ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಇದು ತೆರಿಗೆಯನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.
ಆನ್‌ಲೈನ್‌ನಲ್ಲಿ ಸ್ಥಿರ ಠೇವಣಿ ಖಾತೆಯನ್ನು ತೆರೆಯಲು ಇರುವ ಕ್ರಮಗಳು
ಹಂತ 1: ಮೊದಲು ನೀವು, ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ https://www.indiapost.gov.inಗೆ ಭೇಟಿ ನೀಡಿ. ಅಲ್ಲಿ ನೀವು ಲಭ್ಯವಿರುವ ಸ್ಥಿರ ಠೇವಣಿ ಯೋಜನೆಗಳು, ಬಡ್ಡಿದರಗಳು ಮತ್ತು ಇತರೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಕಾಣಬಹುದು.
ಹಂತ 2: ಬಿವೇನಾದ್ರು ಹೊಸ ಬಳಕೆದಾರರಾಗಿದ್ದರೆ, ಖಾತೆಯನ್ನು ರಚಿಸಲು ನಿಮ್ಮ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆಯ ವಿಳಾಸ ಸೇರಿದಂತೆ ನಿಮ್ಮ ಮೂಲಭೂತ ವಿವರಗಳನ್ನು ಒದಗಿಸುವ ಮೂಲಕ ನೀವು ಇಂಡಿಯಾ ಪೋಸ್ಟ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮತ್ತೆ ನೀವು ಲಾಗಿನ್ ಮಾಡಬೇಕು ಅಂದುಕೊಂಡ್ರೆ ನೀವು ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಹೊಂದಿಸಬೇಕಾಗುತ್ತದೆ.
ಹಂತ 3: ನಂತರ ಇ-ಬ್ಯಾಂಕಿಂಗ್ ಪೋರ್ಟಲ್‌ಗೆ ಭೇಟಿ ನೀಡಿ- https://ebanking.indiapost.gov.in. ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ನೀವು ಲಾಗ್ ಇನ್ ಮಾಡಿದ ನಂತರ, ಉತ್ಪನ್ನಗಳು ಮತ್ತು ಸೇವೆಗಳ ವಿಭಾಗಕ್ಕೆ ಹೋಗಿ, ಮತ್ತು ಫಿಕ್ಸೆಡ್ ಡೆಪಾಸಿಟ್ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಬಡ್ಡಿದರಗಳು ಮತ್ತು ಅಧಿಕಾರಾವಧಿಯ ಆಯ್ಕೆಗಳನ್ನು ಒಳಗೊಂಡಂತೆ, ಇಂಡಿಯಾ ಪೋಸ್ಟ್ ನೀಡುವ ವಿವಿಧ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್‌ಗಳ ವಿವರಗಳನ್ನು ನಿಮಗೆ ನೀಡಲಾಗುತ್ತದೆ.
ಹಂತ 4: ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಖಾತೆಯ ಅವಧಿಯನ್ನು ಆಯ್ಕೆಮಾಡಿ. ಇದು 1 ವರ್ಷದಿಂದ 5 ವರ್ಷಗಳವರೆಗೆ ಇರಬಹುದು. ನಿಮಗೆ ಬೇಕಾದ ಠೇವಣಿ ಮೊತ್ತವನ್ನು ಸಹ ಆಯ್ಕೆ ಮಾಡಬಹುದು. ಇಂಡಿಯಾ ಪೋಸ್ಟ್ ಫಿಕ್ಸೆಡ್ ಡೆಪಾಸಿಟ್‌ಗಳು ಕನಿಷ್ಠ ಠೇವಣಿ ರೂ. 1,000. ಮೊತ್ತವನ್ನ ಹೊಂದಿರುತ್ತವೆ.
ಹಂತ 5: ಎಲ್ಲಾ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಖಾತೆಗಳಿಗೆ KYC ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ. KYC ಅನ್ನು ಪೂರ್ಣಗೊಳಿಸಲು, ಸ್ಕ್ಯಾನ್ ಮಾಡಿದಂತ ನಿಮ್ಮ ID ಪುರಾವೆಯ ಪ್ರತಿಗಳನ್ನು (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ, ಇತ್ಯಾದಿ), ವಿಳಾಸದ ಪುರಾವೆ (ಯುಟಿಲಿಟಿ ಬಿಲ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು) ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ನೀವು ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ 6: ಆನ್‌ಲೈನ್ ಬ್ಯಾಂಕಿಂಗ್, NEFT/RTGS ವರ್ಗಾವಣೆಗಳು ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಹಲವಾರು ಪಾವತಿ ವಿಧಾನಗಳ ಮೂಲಕ ನಿಮ್ಮ ಎಫ್‌ಡಿ ಖಾತೆಗೆ ಹಣ ಹಾಕಲು ವಿವಿಧ ಆಯ್ಕೆಗಳಿವೆ. ನಿಮಗೆ ಸೂಕ್ತವೆನಿಸುವ ವಿಧಾನವನ್ನು ನೀವು ಆಯ್ಕೆ ಮಾಡಬಹುದು.
ಹಂತ 7: ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ಠೇವಣಿ ಮೊತ್ತ, ಅಧಿಕಾರಾವಧಿ ಮತ್ತು KYC ದಾಖಲೆಗಳನ್ನು ಸೇರಿದಂತೆ ಎಲ್ಲಾ ವಿವರಗಳನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಎಲ್ಲಾ ಮಾಹಿತಿಯು ನಿಖರವಾಗಿದೆ ಎಂದು ಖಚಿತಪಡಿಸಿ. ದಾಖಲೆಗಳನ್ನ ಖಚಿತಪಡಿಸಿದ ನಂತರ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು "ಸಲ್ಲಿಸು"(submit) ಮೇಲೆ ಕ್ಲಿಕ್ ಮಾಡಿ.
ಹಂತ 8: ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನಿಮ್ಮ ಸ್ಥಿರ ಠೇವಣಿ ವಿವರಗಳೊಂದಿಗೆ ನೀವು ಸ್ವೀಕೃತಿ ರಸೀದಿಯನ್ನು ಪಡೆಯುತ್ತೀರಿ. ನಿಮ್ಮ ಎಫ್‌ಡಿ ಖಾತೆ ತೆರೆದ ನಂತರ ಅದರ ದೃಢೀಕರಣದ ಕುರಿತು ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ನಿಮಗೆ ತಿಳಿಸಲಾಗುವುದು.
ಹಂತ 9: ಒಮ್ಮೆ ನಿಮ್ಮ ಎಫ್‌ಡಿ ಖಾತೆಯನ್ನು ತೆರೆದ ನಂತರ, ನೀವು ಆಯ್ಕೆ ಮಾಡಿದ ಆಯ್ಕೆಯ ಆಧಾರದ ಮೇಲೆ ನೀವು ಡಿಜಿಟಲ್ ಅಥವಾ ಭೌತಿಕ ರೂಪದಲ್ಲಿ ಸ್ಥಿರ ಠೇವಣಿ ಪ್ರಮಾಣಪತ್ರವನ್ನು ಪಡೆಯುತ್ತೀರಿ.
More From GoodReturns

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications