ನೀವು ಮೊದಲ ಬಾರಿಗೆ SBI YONO ಬಳಸ್ತೀರಾ? ಹಾಗಿದ್ರೆ ಇಲ್ಲಿದೆ ಸಿಂಪಲ್ ಗೈಡ್ ಫ್ರಂ ರಿಜಿಸ್ಟ್ರೇಶನ್ ಟು ಲಾಗಿನ್

ಡಿಜಿಟಲ್ ಯುಗದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಅಪ್ಡೇಟ್ ಆಗುತ್ತಲೇ ಇರುತ್ತದೆ. ಆದರೆ ಇದೀಗ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), YONO (You Only Need One) ಅಪ್ಲಿಕೇಶನ್ ಮೂಲಕ ತನ್ನ ಸೇವೆಯನ್ನು ಸರಳಗೊಳಿಸಿದೆ.ಈ ಮೂಲಕ ನೀವು SBI YONO ಆ್ಯಪ್‌ನ ಸುರಕ್ಷಿತ ಮತ್ತು ಅನುಕೂಲಕರ ಡಿಜಿಟಲ್ ಬ್ಯಾಂಕಿಂಗ್ ಅನ್ನು ಹೇಗೆ ಬಳಸಬಹುದು ಹೇಗೆ..? SBI YONO ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ..? ಎಂಬ ಮಾಹಿತಿ ಬಗ್ಗೆ ತಿಳಿಯೋಣ ಬನ್ನಿ..

ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ನೀವು ಮೂಲಕ ಸುಲಭವಾಗಿ ಬ್ಯಾಂಕ್ ವ್ಯವಹಾರವನ್ನು ಮಾಡಬಹುದು.

ನೀವು ಮೊದಲ ಬಾರಿಗೆ SBI YONO ಬಳಸ್ತೀರಾ? ಇಲ್ಲಿದೆ ಸಿಂಪಲ್ ಗೈಡ್

SBI YONO ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಎಸ್‌ಬಿಐ ಯೊನೊ ಆಪ್‌ನ್ನು ಆ್ಯಪಲ್ ಬಳಕೆದಾರರು Apple App Store ನಿಂದ ಹಾಗೂ ಆಂಡ್ರಾಯ್ಡ್ ಬಳಕೆದಾರರು Google Play Store ನಿಂದ ಆ್ಯಪ್ ಡೌನ್‌ಲೋಡ್ ಮಾಡಬಹುದು. ಲಾಗಿನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಎಸ್‌ಬಿಐನಲ್ಲಿ ರಿಜಿಸ್ಟರ್ ಆಗಿರಬೇಕು. ಮೊಬೈಲ್ ನಂಬರ್ ರಿಜಿಸ್ಟರ್ ಆಗಿಲ್ಲದಿದ್ದರೆ, ನೀವು ಆ್ಯಪ್ ಬಳಸಲು ಆಗುವುದಿಲ್ಲ.

SBI ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗಾಗಿ YONO ಆ್ಯಪ್ ಲಾಗಿನ್ ವಿಧಾನ

  • ನಿಮ್ಮ ಮೊಬೈಲ್‌ನಲ್ಲಿ YONO SBI ಆ್ಯಪ್ ಅನ್ನು Google Play Store ಅಥವಾ Apple App Store ನಿಂದ ಡೌನ್‌ಲೋಡ್ ಮಾಡಿ.
  • ನಂತರ ಆ್ಯಪ್ ಓಪನ್ ಮಾಡಿ ಬಳಿಕ, 'Existing Customer' ಆಯ್ಕೆಯನ್ನು ಆಯ್ಕೆಮಾಡಿ.
  • ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಹಾಕಿ
  • ನಂತರ ನೀವು ರಿಜಿಸ್ಟರ್ ಮಾಡಿದ ಮೊಬೈಲ್ ನಂಬರ್‌ಗೆ OTP ಬರುತ್ತದೆ ಅದನ್ನು ನಮೂದಿಸಿ ಮತ್ತು ವೆರಿಫೈ ಮಾಡಿ.
  • ಮತ್ತೆ ಲಾಗಿನ್‌ ಮಾಡುವುದಕ್ಕಾಗಿ 6 ಅಂಕಿಯ MPIN ಅನ್ನು ಸೆಟ್ ಮಾಡಿ.

ಯೊನೊ (YONO SBI) ಆ್ಯಪ್‌ನಲ್ಲಿ ಹೊಸ ಬಳಕೆದಾರರ ರಿಜಿಸ್ಟ್ರೇಶನ್ ವಿಧಾನ (Internet Banking ಇಲ್ಲದವರು):

  • YONO SBI ಆ್ಯಪ್ ಅನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ Google Play Store ಅಥವಾ Apple App Store ನಿಂದ ಡೌನ್‌ಲೋಡ್ ಮಾಡಿ.
  • ಆ್ಯಪ್ ಓಪನ್ ಮಾಡಿದ ನಂತರ, 'New User' ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  • ನಂತರ, 'Register with Account Details' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಹೀಗಾಗಿ, ಕೆಳಗಿನ ಮಾಹಿತಿಯನ್ನು ನಮೂದಿಸಿ:
  • ಖಾತೆ ಸಂಖ್ಯೆ (Account Number)
  • CIF ನಂಬರ್ (ಹೆಚ್ಚಾಗಿ ಪಾಸ್‌ಬುಕ್‌ನಲ್ಲಿ ಲಭ್ಯವಿರುತ್ತದೆ)
  • ATM ಕಾರ್ಡ್ ವಿವರಗಳು (Card Number, Expiry Date, etc.)
  • ನಿಮ್ಮ ಆಯ್ಕೆಯ User Name ಮತ್ತು Login Password ಅನ್ನು ಸೆಟ್ ಮಾಡಿ.
  • ನಂತರ, ನಿಮ್ಮ ರಿಜಿಸ್ಟರ್ ಮಾಡಲಾದ ಮೊಬೈಲ್ ನಂಬರ್ ಗೆ OTP ಬರುತ್ತದೆ - ಅದನ್ನು ನಮೂದಿಸಿ ಮತ್ತು ವೆರಿಫೈ ಮಾಡಿ.
  • ಬಳಿಕ, ಭದ್ರತಾ ಕಾರಣಕ್ಕಾಗಿ ನೀವು 6 ಅಂಕಿಯ MPIN ಸೆಟ್ ಮಾಡಬೇಕು.

ಗಮನಿಸಿ:

  • ಒಂದು ವೇಳೆ ನಿಮ್ಮ ಬಳಿ ATM ಕಾರ್ಡ್ ಇಲ್ಲದಿದ್ದರೆ, ನೀವು ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಲು ಆಗುವುದಿಲ್ಲ
  • ದಯವಿಟ್ಟು ಹತ್ತಿರದ SBI ಶಾಖೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ನಿಮಗೆ Internet Banking ಸಕ್ರಿಯಗೊಳಿಸಲು ಸಹಾಯ ಮಾಡುತ್ತಾರೆ.'

SIM ಬೈಂಡಿಂಗ್ ಸೆಕ್ಯುರಿಟಿ ಫೀಚರ್‌

SIM ಬೈಂಡಿಂಗ್ ಎನ್ನುವುದು YONO SBI ಆ್ಯಪ್‌ನಲ್ಲಿನ ಒಂದು ಮಹತ್ವಪೂರ್ಣ ಸೆಕ್ಯುರಿಟಿ ಫೀಚರ್ ಆಗಿದ್ದು, ಬಳಕೆದಾರರ ಖಾತೆ ಭದ್ರತೆಗಾಗಿ ಬಳಸಲಾಗುತ್ತದೆ.

SIM Binding ಎಂದರೇನು?
SIM Binding ಅಂದರೆ, YONO ಆ್ಯಪ್‌ ಅನ್ನು ಬಳಸಲು ನೀವು ರಿಜಿಸ್ಟರ್ ಮಾಡಿದ ಮೊಬೈಲ್ ನಂಬರ್ ಇರುವ SIM ಕೇವಲ ಆ ಫೋನ್‌ದಲ್ಲೇ ಇರಬೇಕು. ಈ ವೈಶಿಷ್ಟ್ಯದ ಮೂಲಕ, YONO ಆ್ಯಪ್ ಇತರರು ಅಥವಾ ಹ್ಯಾಕರ್‌ಗಳು ನಿಮ್ಮ ಖಾತೆಗೆ ಲಾಗಿನ್ ಮಾಡುವುದನ್ನು ತಡೆಯುತ್ತದೆ.

SIM Binding ಹೇಗೆ ಕೆಲಸ ಮಾಡುತ್ತದೆ?

  • ನೀವು YONO ಆ್ಯಪ್‌ ಅನ್ನು ಮೊದಲ ಬಾರಿ ಓಪನ್ ಮಾಡಿದಾಗ, ಅದು ಫೋನ್‌ನಲ್ಲಿ ಇರುವ SIMಗಳನ್ನು ಪರಿಶೀಲಿಸುತ್ತದೆ.
  • ಅದು ನಿಮ್ಮ SBIನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್‌ ಹೊಂದಿರುವ SIM ಅನ್ನು ಖಚಿತಪಡಿಸಿಕೊಳ್ಳುತ್ತದೆ.
  • ಈ ಪರಿಶೀಲನೆ ಮೊಬೈಲ್‌ನಿಂದ ಒಂದು ನಿಶ್ಚಿತ ಮೊಬೈಲ್ SMS (silent SMS) ಮೂಲಕ ತಾಂತ್ರಿಕವಾಗಿ ನಡೆಯುತ್ತದೆ.
  • ಮೊಬೈಲ್ ನಂಬರ್ ಹೊಂದಿಕೆಯಾಗದಿದ್ದರೆ, ಆ್ಯಪ್ ಬಳಸಲಾಗದು - ಇದು ಅನಧಿಕೃತ ಬಳಕೆದಾರರನ್ನು ತಡೆಯುತ್ತದೆ.

ಇದರಿಂದ ಏನು ಪ್ರಯೋಜನ..?

  • ಖಾತೆಯ ಮೇಲೆ ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ.
  • OTP ಹ್ಯಾಕಿಂಗ್ ಅಥವಾ SIM swap ಮೋಸದ ಭೀತಿಯನ್ನು ಕಡಿಮೆ ಮಾಡುತ್ತದೆ.
  • YONO ಆ್ಯಪ್‌ನಲ್ಲಿ ಲಾಗಿನ್ ಮಾಡುವ ಪ್ರಕ್ರಿಯೆ ಹೆಚ್ಚು ಭದ್ರವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+