ಭಾರತದಿಂದ ಹೊರರಾಷ್ಟ್ರಗಳಿಗೆ ಹಣ ಕಳಿಸುವುದು ದುಬಾರಿಯೇ ಸರಿ. ಅದರಲ್ಲೂ ನಿಮಗೆ ಗುಪ್ತ ಶುಲ್ಕಗಳ ಬಗ್ಗೆ ಅರಿವಿಲ್ಲದಿದ್ದರೆ, ನಿಜಕ್ಕೂ ಹೊರೆಯಾಗಲಿದೆ. ಹಣ ವರ್ಗಾವಣೆ ಸಂಸ್ಥೆಗಳು ಮತ್ತು ಬ್ಯಾಂಕ್ ಗಳು ಹಣ ವರ್ಗಾವಣೆಗೆ ಶುಲ್ಕ ವಿಧಿಸುವ ಜತೆಗೆ, ವಿದೇಶಿ ವಿನಿಮಯ ದರದ ಮೇಲೆ ಗುಪ್ತ ಶುಲ್ಕ ವಿಧಿಸುತ್ತವೆ. ಇದು ಗ್ರಾಹಕರ ಪಾಲಿಗೆ ಹೊರಲಾಗದ ಭಾರ.
ಜಾಗತಿಕ ಉದಾರೀಕರಣದ ಆರ್ಥಿಕ ಯೋಜನೆ ಅಡಿ, ಪ್ರತಿಯೊಬ್ಬರು ಚಾಲ್ತಿ ಖಾತೆ ಅಥವಾ ಬಂಡವಾಳ ಖಾತೆ ಮೂಲಕ ವಾರ್ಷಿಕ ಗರಿಷ್ಠ 1.25 ಲಕ್ಷ ಡಾಲರ್ ಹಣವನ್ನು ಉಚಿತವಾಗಿ ರವಾನಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊತ್ತವನ್ನು ಎಷ್ಟು ಬಾರಿಯಾದರೂ ಕಳಿಸಬಹುದು.
ಆನ್ ಲೈನ್ ಹಣ ವರ್ಗಾವಣೆ, ಹಣ ವರ್ಗಾವಣೆ ಏಜೆನ್ಸಿಗಳ ಮೂಲಕ, ಬ್ಯಾಂಕ್ ವರ್ಗಾವಣೆ, ಡ್ರಾಫ್ಟ್, ಚೆಕ್ ಹೀಗೆ ನಾನಾ ವಿಧಾನಗಳಿದ್ದು, ಹಣ ಕಳಿಸುವಾಗ ಪರಿಶೀಲಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ...
ಇಂಟರ್ ನೆಟ್ ಬ್ಯಾಂಕಿಂಗ್ ಬಳಸಿ ಆನ್ ಲೈನ್ ಹಣ ವರ್ಗಾವಣೆ
ಹೊರರಾಷ್ಟ್ರಗಳಿಗೆ ಹಣ ಕಳಿಸಲು ಆನ್ ಲೈನ್ ಹಣ ವರ್ಗಾವಣೆ ಮಾರ್ಗ ಅತ್ಯಂತ ಅನುಕೂಲಕರ ವಿಧಾನ. ಬಹುಸಂಖ್ಯಾತ ಭಾರತೀಯರು ನಾನಾ ದೇಶಗಳಿಗೆ ಹಣ ಕಳಿಸಲು ಇದೇ ಮಾರ್ಗ ಬಳಸುತ್ತಾರೆ. ಈ ವಿಧಾನಕ್ಕೆ ಅಗತ್ಯವಾಗಿ ಬೇಕಿರುವುದು ಇದಿಷ್ಟೆ. ಹಣ ಕಳಿಸುವವರ ಬ್ಯಾಂಕ್ ಖಾತೆ ವಿವರ, ಹಣ ಸ್ವೀಕರಿಸುವ ಬ್ಯಾಂಕ್‌ನ ಸಂಕೇತ, ಖಾತೆದಾರರ ಮಾಹಿತಿ ಇತ್ಯಾದಿ. ಆದಾಗ್ಯೂ, ಈ ಪ್ರಕ್ರಿಯೆಯು ಮಧ್ಯವರ್ತಿ ಬ್ಯಾಂಕ್‌ಗಳನ್ನು ಹೊರತುಪಡಿಸಿದ ಕಾರಣ, ನೀವು ವಿಪರೀತ ತೆರಿಗೆಗಳು ಮತ್ತು ವಿನಿಮಯ ದರಗಳಿಗೆ ಒಳಪಡಬಹುದು ಎಂಬುದನ್ನು ಗಮನಿಸಬೇಕು.
ಹಣ ವರ್ಗಾವಣೆ ಏಜೆನ್ಸಿಗಳ ಮೂಲಕ ವಿದ್ಯುನ್ಮಾನ ಅಥವಾ ಬ್ಯಾಂಕ್ ವರ್ಗಾವಣೆ(ವೈರ್ ಟ್ರಾನ್ಸ್ ಫರ್)
ವೈರ್ ಟ್ರಾನ್ಸ್ ಫರ್ ಎಂದರೆ ವಿದ್ಯುನ್ಮಾನ ಮಾರ್ಗದ ಮೂಲಕ ಹಣ ಕಳಿಸುವ ವಿಧಾನ. ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಮಾಡುವ ಹಣ ವರ್ಗಾವಣೆ ವಿಧಾನ. ಹಾಗಾಗಿ, ಇದಕ್ಕೆ ಬ್ಯಾಂಕ್ ವರ್ಗಾವಣೆ ಎಂದು ಸಹ ಕರೆಯಲಾಗುತ್ತದೆ. ಉದ್ಯಮ ರಂಗ ಇತ್ತೀಚೆಗೆ ವಿದ್ಯುನ್ಮಾನ ವರ್ಗಾವಣೆ ವಿಧಾನವನ್ನು ವ್ಯಾಪಕವಾಗಿ ಬಳಸುತ್ತಿರುವುದನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಈ ವಿಧಾನದಲ್ಲಿ ಹೊರರಾಷ್ಟ್ರಗಳಿಗೆ ಹಣ ಕಳಿಸುವಾಗ ವರ್ಗಾವಣೆ ಶುಲ್ಕ ಮತ್ತು ಸುಂಕ ಕಡಿಮೆ ಇರುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಮತ್ತು ಅನುಮೋದಿತ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ವಿದ್ಯುನ್ಮಾನ ವರ್ಗಾವಣೆ ಮಾಡಬಹುದು. ವೈರ್ ಟ್ರಾನ್ಸ್ ಫರ್ ಸೌಲಭ್ಯವು ಹಣ ಸ್ವೀಕರಿಸುವವರ ಮಾಹಿತಿ, ಅವರ ಬ್ಯಾಂಕ್ ವಿವರ, ಹಣ ಕಳಿಸುವವರು ಎಲ್ಲಿಗೆ ಹಣ ಕಳಿಸುತ್ತಾರೆ ಎಂಬುದರ ಮಾಹಿತಿ ಸಂಗ್ರಹಿಸುತ್ತದೆ. ಹಣ ಕಳಿಸುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಹಣ ಕಳಿಸುವವರ ಸಮಗ್ರ ಮಾಹಿತಿ ಪಡೆದು, ಕಳಿಸಬೇಕಾದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ವಿದ್ಯುನ್ಮಾನ ಪ್ರಕ್ರಿಯೆ ನಡೆಸಿ, ಅಲ್ಲಿಗೆ ಮಾಹಿತಿ ರವಾನಿಸುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಹಿಡಿಯುತ್ತದೆ.
ಬ್ಯಾಂಕ್ ಡ್ರಾಫ್ಟ್ , ಚೆಕ್ ಅಥವಾ ಬ್ಯಾಂಕ್ ಶಾಖೆಗಳಿಗೆ ಭೇಟಿ
ದೇಶಾದ್ಯಂತ ಇರುವ ಬಹುತೇಕ ಬ್ಯಾಂಕ್ ಶಾಖೆಗಳಲ್ಲಿ ಬ್ಯಾಂಕ್ ಡ್ರಾಫ್ಟ್ ಗಳು ಮತ್ತು ಚೆಕ್‌ಗಳು ಲಭ್ಯವಿವೆ. ನೀವು ಹಣ ಕಳಿಸಬೇಕಾದ ವ್ಯಕ್ತಿ ನೆಲೆಸಿರುವ ದೇಶದ ಕರೆನ್ಸಿಯಲ್ಲಿ ಬ್ಯಾಂಕ್ ಡ್ರಾಫ್ಟ್ ಗಳು ಮತ್ತು ಚೆಕ್ ಗಳನ್ನು ಖರೀದಿಸಬಹುದು. ಹೊರರಾಷ್ಟ್ರಗಳಿಗೆ ಹಣ ಕಳಿಸಲು ಈ ವಿಧಾನವು ವೆಚ್ಚ ಪರಿಣಾಮಕಾರಿಯಾಗಿದೆ. ಆದರೆ ನೀವು ಕಳಿಸುವ ಹಣ ಸ್ವೀಕರಿಸುವವರಿಗೆ ತಲುಪಲು ಕೊಂಚ ದೀರ್ಘ ಸಮಯ ಹಿಡಿಯುತ್ತದೆ. ಒಂದು ವೇಳೆ ನೀವು ಕಳಿಸಿದ ಹಣ ಉದ್ದೇಶಿತ ಸ್ಥಳಕ್ಕೆ ತಲುಪಿದ್ದ ಪಕ್ಷದಲ್ಲಿ, ಅದನ್ನು ಸುಲಭವಾಗಿ ಪತ್ತೆ ಮಾಡಬಹುದು. ವರ್ಗಾವಣೆ ಪ್ರಕ್ರಿಯೆ ಕೊಂಚ ತಡವಾದರೂ, ಭಾರತದಿಂದ ಹೊರರಾಷ್ಟ್ರಗಳಿಗೆ ನೆಮ್ಮದಿಯಿಂದ ಹಣ ಕಳಿಸುವ ವರ್ಗಾವಣೆ ಪ್ರಕ್ರಿಯೆ ಇದಾಗಿದೆ.
ಸಮಾಪನ
ನೀವು ಹಣ ಕಳಿಸಲು ಮೇಲೆ ಪ್ರಸ್ತಾಪಿಸಿರುವ ಯಾವುದೇ ವರ್ಗಾವಣೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ, ಹಣ ಸ್ವೀಕರಿಸುವವರ ಖಾತೆ ಸಂಖ್ಯೆ ಮತ್ತು ಇತರೆ ಸಂಬಂಧಿತ ಮಾಹಿತಿಯನ್ನು 2 ಬಾರಿ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ವರ್ಗಾವಣೆ ಶುಲ್ಕ, ವೆಚ್ಚಗಳು ಮತ್ತು ಕರೆನ್ಸಿ ದರಗಳನ್ನು ಮೌಲ್ಯಮಾಪನ ಮಾಡಲು, ವರ್ಗಾವಣೆ ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಮರೆಯದಿರಿ. ಎಲ್ಲಕ್ಕಿಂತ ವಿಶೇಷವಾಗಿ ಹಣ ಸ್ವೀಕರಿಸುವವರ ಬಿಗಿಯಾದ ವೇಳಾಪಟ್ಟಿ ಮೇಲೆ ನಿಗಾ ಇಟ್ಟಿರಿ. ಹಣ ಕಳಿಸಿದ ದಾಖಲೆಗಳನ್ನು ಯಾವಾಗಲೂ ಜೋಪಾನ ಮಾಡಿ. ಹಣ ವರ್ಗಾವಣೆ ಸಂಸ್ಥೆಗಳು, ಬ್ಯಾಂಕ್ ಗಳ ವಂಚನೆ ಮತ್ತು ಹಗರಣಗಳ ಬಗ್ಗೆ ಜಾಗರೂಕರಾಗಿರಿ. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಹಾರ ಪಾರದರ್ಶಕತೆ ಹೊಂದಿರುವ ನಂಬಿಕೆಗೆ ಅರ್ಹವಾದ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಮಾತ್ರ ಹಣ ವರ್ಗಾವಣೆ ನಡೆಸಿ.
ಹೊರರಾಷ್ಟ್ರಗಳಿಗೆ ಹಣ ಕಳಿಸುವಾಗ ಪರಿಶೀಲಿಸಬೇಕಾದ ವಿಷಯಗಳು
ವಿವಿಧ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ವಿಧಿಸುವ ಹಣ ವರ್ಗಾವಣೆ ಶುಲ್ಕ, ಸುಂಕ ಇತ್ಯಾದಿ ಹೋಲಿಕೆ ಮಾಡುವಾಗ, ಆ ಸಂಸ್ಥೆಗಳ ವೆಬ್ ಸೈಟ್ ನಲ್ಲೂ ಶುಲ್ಕ ದರಗಳನ್ನು ಪರಿಶೀಲಿಸಿ. ವರ್ಗಾವಣೆ ಶುಲ್ಕ ದರಗಳು ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಹಾಗಾಗಿ, ದರಗಳ ಮೇಲೆ ಸದಾ ಕಣ್ಣಿಟ್ಟಿರಿ. ವಿದೇಶಿ ವಿನಿಮಯ ಮಾರುಕಟ್ಟೆ ಸದಾ ಜಾಗೃತವಾಗಿರುತ್ತದೆ. ನಿರಂತರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುತ್ತದೆ. ಹಾಗಾಗಿ, ವಿದೇಶಿ ವಿನಿಮಯ ದರಗಳು ಸ್ಥಿರವಾಗಿ ಏರಿಳಿತ ಕಾಣುತ್ತಿರುತ್ತವೆ. ಇವುಗಳ ಮೇಲೆ ಸದಾ ನಿಗಾ ಇಟ್ಟಿರಬೇಕು. ವಿನಿಮಯ ದರ ಇಳಿಕೆ ಕಂಡಾಗ ಹಣ ವರ್ಗಾವಣೆ ಮಾಡುವುದರಿಂದ ವರ್ಗಾವಣೆ ಶುಲ್ಕ ಕಡಿಮೆಯಾಗುತ್ತದೆ. ಏರಿಕೆ ಕಂಡಾಗ ವರ್ಗಾವಣೆ ಶುಲ್ಕ ದುಬಾರಿಯಾಗುತ್ತದೆ. ಮಾರುಕಟ್ಟೆ ದರಗಳನ್ನು ತಿಳಿದುಕೊಳ್ಳದೆ, ಕೊನೆ ಕ್ಷಣದಲ್ಲಿ ಹಣ ವರ್ಗಾವಣೆ ಮಾಡುವ ಚಾಳಿ ನಿಮ್ಮ ಪಾಲಿಗೆ ದುಬಾರಿ ಆಗುತ್ತದೆ ಎಂಬುದನ್ನು ಮರೆಯಬೇಡಿ. ಉತ್ತಮ ವಿದೇಶಿ ವಿನಿಮಯ ದರಗಳಿದ್ದಾಗ ಹಣ ವರ್ಗಾವಣೆ ಸೂಕ್ತ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications