ನವದೆಹಲಿ, ಜೂನ್ 25: ಹಣ ಉಳಿತಾಯ ಮತ್ತು ನಿರ್ವಹಣೆ ಒಂದು ಕಲೆ. ಈ ಕಲೆ ಬಲ್ಲವನಿಗೆ ಜೀವನವನ್ನು ಶಿಸ್ತುಬದ್ದವಾಗಿ ಸಾಗಿಸಲು ಸಾಧ್ಯ. ಸರಿಯಾದ ಹಣಕಾಸು ನಿರ್ಧಾರ, ನಿರ್ವಹಣೆಗಳು ಉಜ್ವಲ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು.
ಹೀಗಾಗಿ ಹದಿಹರೆಯದ ಮಕ್ಕಳಿಗೆ ಹಣ ನಿರ್ವಹಣೆ , ಬಜೆಟ್ ಕಲೆಯನ್ನು ಕಲಿಸುವುದು ಮುಖ್ಯ. ಇದೊಂದು ನಿರ್ಣಾಯಕ ಜೀವನ ಕೌಶಲ್ಯವಾಗಿದ್ದು , ಇದರಿಂದ ಹದಿಹರೆಯದವರು ಆರ್ಥಿಕ ಸ್ವತಂತ್ರ್ಯರಾಗಲು ಮತ್ತು ಹಣದ ನಿರ್ವಹಣೆ ಬಂದಾಗ ಹೆಚ್ಚು ಜವಬ್ದಾರಿಯುತವಾಗಿ ವರ್ತಿಸಲು ಸಹಾಯ ಮಾಡುತ್ತದೆ. ಮಕ್ಕಳು ಹದಿಹರೆಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುತ್ತಿದ್ದಂತೆ , ಹಣದ ನಿರ್ವಹಣೆ ಕಲಿತರೆ ಮುಂದೆ ಭವಿಷ್ಯದಲ್ಲಿ ಬಂದೊದಗಬಹುದಾದ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ, ಡಿಜಿಟಲ್ ವಹಿವಾಟು, ತ್ವರಿತತೃಪ್ತಿ ಸಂಸ್ಕೃತಿಯ ಹೆಚ್ಚಳದಿಂದ ಅನೇಕ ಹದಿಹರೆಯದ ಮಕ್ಕಳು ಹಣ ನಿರ್ವಹಣೆಯ ಪ್ರಾಮುಖ್ಯತೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದ್ದರಿಂದ ಪೋಷಕರು ಮಕ್ಕಳಿಗೆ ಬಜೆಟ್ ನಿರ್ವಹಣೆಯ ಕಲೆಯನ್ನು ಕಲಿಸಲು ಬೇಕಾಗಿರುವ ಸಹಾಯಕ ಅಂಶಗಳು, ಒಂದಷ್ಟು ಟಿಪ್ಸ್ ಗಳನ್ನು ಪಟ್ಟಿ ಮಾಡಿದ್ದೇವೆ ನೀವು ಗಮನಿಸಬಹುದು.
ಬಜೆಟ್ ಪರಿಕಲ್ಪನೆಯನ್ನು ವಿವರಿಸಿ:
ಹಣ ನಿರ್ವಹಣೆಯ ಬಗ್ಗೆ ನೇರವಾಗಿ ಮಾತನಾಡುವುದಕ್ಕಿಂತ, ಬಜೆಟ್ ಎಂದರೇನು ಮತ್ತು ಅದು ಯಾಕೆ ಮುಖ್ಯ ಎಂಬುವುದನ್ನು ವಿವರಿಸುವ ಮೂಲಕ ಆರಂಭದಲ್ಲಿ ಬಜೆಟ್ ಪರಿಕಲ್ಪನೆ ಬಗ್ಗೆ ಚರ್ಚಿಸಿ. ಬಜೆಟ್ ಹಣವನ್ನು ಹೇಗೆ ಖರ್ಚು ಮಾಡಬೇಕು, ಮತ್ತು ಅಗತ್ಯವಿರುವ ಅಥವಾ ನಾವು ಬಯಸುವ ವಸ್ತುಗಳ ಖರೀದಿಗೆ ಸಾಕಷ್ಟು ಹಣ ಹೇಗೆ ಹೊಂದಿಸುವುದು ಎಂಬುವುದನ್ನು ಖಾತ್ರಿ ಪಡಿಸಲು ಸಹಾಯಕವಾಗುತ್ತದೆ. ಮಾತ್ರವಲ್ಲದೇ ಇದು ಭವಿಷ್ಯದ ಗುರಿಯಾಗಿ ಹಣ ಉಳಿಸಲು ಸಹಾಯ ಮಾಡುತ್ತದೆ ಎಂಬುವುದು ಅರ್ಥಮಾಡಿಸಬೇಕು.
ಆದಾಯ ಮತ್ತು ವೆಚ್ಚ ಗಳನ್ನು ಚರ್ಚಿಸಿ:
ನಿಮ್ಮ ಹದಿಹರೆಯದವರಿಗೆ ಆದಾಯ (ಹಣ ಬರುವುದು) ಮತ್ತು ವೆಚ್ಚಗಳು (ಹಣ ಹೊರಹೋಗುವುದು) ನಡುವೆ ವ್ಯತ್ಯಾಸವನ್ನು ಕಲಿಸಿ. ಇದು ಭತ್ಯೆಗಳು, ಅರೆಕಾಲಿಕ ಉದ್ಯೋಗ ಗಳಿಕೆಗಳು ಅಥವಾ ಆದಾಯದ ಯಾವುದೇ ಇತರ ಮೂಲಗಳು ಮತ್ತು ಆಹಾರ, ಮನರಂಜನೆ, ಬಟ್ಟೆ ಮತ್ತು ಉಳಿತಾಯದಂತಹ ವಿಶಿಷ್ಟ ವೆಚ್ಚಗಳನ್ನು ಒಳಗೊಂಡಿರಬಹುದು.
ಪ್ರಾಕ್ಟಿಕಲ್ ಉದಾಹರಣೆ ತೋರಿಸಿ:
ಕುಟುಂಬ ಬಜೆಟ್ ಪ್ರಕ್ರಿಯೆಯಲ್ಲಿ ನಿಮ್ಮ ಹದಿಹರೆಯದ ಮಕ್ಕಳನ್ನು ತೊಡಗಿಸಿಕೊಳ್ಳ ಮರಿಬೇಡಿ. ದಿನಸಿ, ಅಗತ್ಯ ವಸ್ತುಗಳು, ಬಾಡಿಗೆ ಮತ್ತು ಇತರ ವೆಚ್ಚಗಳಿಗಾಗಿ ನೀವು ಯಾವ ರೀತಿ ಬಜೆಟ್ ನಿರ್ವಹಣೆ ಮಾಡುತ್ತಿದ್ದೀರಿ ಎಂಬುದನ್ನು ಅವರಿಗೆ ತೋರಿಸಿ. ಈ ಪ್ರಾಯೋಗಿಕ ವಿಧಾನ ಪರಿಕಲ್ಪನೆಯನ್ನು ಹೆಚ್ಚು ಅರ್ಥವಾಗುವಂತೆ ಮಾಡಬಹುದು.
ಹದಿಹರೆಯ ಮಕ್ಕಳಿಗೆ ನಿರ್ದಿಷ್ಟ ಬಜೆಟ್ ರಚಿಸಿ:
ನಿಮ್ಮ ಮಕ್ಕಳಿಗಾಗಿ ತಮ್ಮದೇ ಆದ ಬಜೆಟ್ ರೂಪಿಸಲು ಸಹಾಯ ಮಾಡಿ. ಅವರ ಪಾಕೆಟ್ ಮನಿಯನ್ನು ಪಟ್ಟಿ ಮಾಡಲು ಅವರ ವೆಚ್ಚ ಗಳನ್ನು ವರ್ಗೀಕರಿಸಲು , ಅವರ ಹಣದ ಖರ್ಚು ವೆಚ್ಚಗಳ ಬಗ್ಗೆ ಅರಿವು ಹೊಂದಲು ಒಂದು ತಿಂಗಳ ಕಾಲ ಅವರ ಖರ್ಚುಗಳನ್ನು ಟ್ರ್ಯಾ ಕ್ ಮಾಡಲು ಅವರನ್ನು ಪ್ರೋತ್ಸಾಹಿಸಿ
ಅಲ್ಪಾವಧಿ ಮತ್ತು ದೀರ್ಘಾವಧಿಯ ಗುರಿಗಳು:
ಹಣಕಾಸಿನ ಗುರಿಗಳನ್ನು ಹಾಕಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿ. ಇವುಗಳು ಅಲ್ಪಾವಧಿಯದ್ದಾಗಿರಬಹುದು (ಉದಾಹಣೆಗಾಗಿ ಹೊಸ ವೀಡಿಯೋ ಗೇಮ್ ಖರೀದಿಸಲು ಉಳಿತಾಯ) ಅಥವಾ ದೀರ್ಘಾವಧಿಯ (ಕಾರು ಅಥವಾ ಕಾಲೇಜು ಫೀ ತುಂಬಲು ಉಳಿತಾಯ) ಗುರಿಗಳಿಗಳಾಗಿರಬಹುದು. ಗೋಲ್ ಇದ್ದರೆ ಮಾತ್ರ ಹಣ ಉಳಿತಾಯ ಮಾಡಲು ಮತ್ತು ಬಜೆಟ್ ನಿರ್ವಹಿಸಲು ನಮಗೆ ಉತ್ತೇಜನ ಸಿಗುತ್ತದೆ.
ಉಳಿತಾಯ ಯೋಜನೆ:
ಹಣ ಉಳಿತಾಯದ ಪ್ರಾಮುಖ್ಯತೆಗೆ ಒತ್ತು ನೀಡಿಲು ಪ್ರೋತ್ಸಾಹಿಸಿ. ಪ್ರತಿ ತಿಂಗಳು ಅವರ ಆದಾಯದ ಒಂದು ಭಾಗವನ್ನು ಮೀಸಲಿಡಲು ಅವರಿಗೆ ಕಲಿಸಿ. ಇತರ ಖರ್ಚುಗಳಿಗಿಂತ ಮೊದಲು ಉಳಿತಾಯಕ್ಕೆ ಆದ್ಯತೆ ನೀಡುವ ಮೂಲಕ "ನಿಮಗೆ ನೀವೇ ಮೊದಲು ಪಾವತಿಸಿ" ಎಂಬ ಪರಿಕಲ್ಪನೆಯನ್ನು ವಿವರಿಸಿ.
ಬಜೆಟ್ಅಪ್ಲಿಕೇಷನ್ ಬಳಸಿ:
ನಿಮ್ಮ ಹದಿಹರೆಯದವರಿಗೆ ಬಜೆಟ್ ಅಪ್ಲಿಕೇಶನ್ ಗಳನ್ನು ಪರಿಚಯಿಸಿ. ಇದರಿಂದ ಆದಾಯ ಮತ್ತು ವೆಚ್ಚ ಗಳನ್ನು ಟ್ರ್ಯಾಕ್ ಮಾಡಲು, ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.
ಹಣದ ಮೌಲ್ಯ ವನ್ನು ಕಲಿಸಿ:
ಬೆಲೆಗಳನ್ನು ಹೋಲಿಸಲು ಮತ್ತು ಡೀಲ್ ಳನ್ನು ನೋಡಲು ಅವರನ್ನು ಪ್ರೋತ್ಸಾಹಿಸಿ. ಅಗತ್ಯತೆಗಳು ಮತ್ತು ಆಸೆ ಆಕಾಂಕ್ಷೆಗಳ ನಡುವಿನ ವ್ಯತ್ಯಾಸ ಮತ್ತು ಖರ್ಚುಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ವಿವರಿಸಿ.
ಜವಾಬ್ದಾರಿಯನ್ನು ನೀಡಿ ಪ್ರೋತ್ಸಾಹಿಸಿ:
ಮಕ್ಕಳಿಗೆ ಫೋನ್ ಬಿಲ್ ಅಥವಾ ಬಟ್ಟೆ ಮುಂತಾದ ಕೆಲವು ವೆಚ್ಚಗಳನ್ನು ನಿರ್ವಹಿಸಲು ಜವಾಬ್ದಾರಿಯನ್ನು ನೀಡಿ. ಇದು ವಸ್ತುಗಳ ನೈಜ ವೆಚ್ಚ ಮತ್ತು ಬಜೆಟ್ ನ ಮಿತಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
ಉದಾಹರಣೆಯೊಂದಿಗೆ ಮುನ್ನಡೆಯಿರಿ: ಮೊದಲು ಪೋಷಕರು ಹಣಕಾಸು ನಿರ್ವಹಣೆಯಲ್ಲಿ ಮಾದರಿಯಾಗಿರಬೇಕು. ಹಣದ ನಿರ್ವಹಣೆಯ ಬಗ್ಗೆ ನಿಮಗಿರುವ ಅಭ್ಯಾಸಗಳು ನಿಮ್ಮ ಮಕ್ಕಳ ಮೇಲೆ ಗಮನಾರ್ಹವಾದ ಪ್ರಭಾವ ಬೀರುತ್ತದೆ . ನೀವು ಬಜೆಟ್ ಹೇಗೆ ಮಾಡುತ್ತೀರಿ ಮತ್ತು ಹಣಕಾಸಿನ ನಿರ್ಧಾರಗಳನ್ನು ಹೇಗೆ ಮಾಡುತ್ತೀರಿ ಎಂಬುವುದನ್ನು ಅವರಿಗೆ ತೋರಿಸಿ. ನಿಮ್ಮ ಮಕ್ಕಳಿಗೆ ಹಣದ ಮೌಲ್ಯವನ್ನು ಕಲಿಸಿ ಮತ್ತು ಅವರು ಜೀವನದಲ್ಲಿ ಮೇಲೇರುವುದನ್ನು ಕಣ್ತುಂಬಿಕೊಳ್ಳಿ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications