ಷೇರುಪೇಟೆಯಲ್ಲಿ ಹೂಡಿಕೆಮಾಡಲು ಹೂಡಿಕೆದಾರು ಸಾಮಾನ್ಯವಾಗಿ ಹಲವಾರು ವಿಷಯಗಳ ಬಗ್ಗೆ ಯೋಚನೆಯನ್ನು ಮಾಡುತ್ತಿದ್ದಾರೆ.ಮಾರುಕಟ್ಟೆಯ ವಹಿವಾಟು ಅಧಾರಿಸಿ ಹೂಡಿಕೆದಾದರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯಾವ ಸಮಯ ಬೆಸ್ಟ್..? ಷೇರುಪೇಟೆ ಇಂದಿನ ವಾಹಿವಾಟುವಿನಲ್ಲಿ ಷೇರುಗಳ ಬೆಲೆ ಅಗ್ಗವಾಗಿದೆಯೇ ಅಥವಾ, ದುಬಾರಿಯಾಗಿದೆಯೇ..? ಷೇರು ಮಾರುಕಟ್ಟೆಯ ಸಮಯವನ್ನು ಹೇಗೆ ಲೆಕ್ಕ ಹಾಕುವುದು ಅದು ಹೇಗೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಹೌದು,ಷೇರುಮಾರುಕಟ್ಟೆ ಸಮಯವನ್ನು ನಾವು ಲೆಕ್ಕಹಾಲಬೇಕೆಂದರೆ PE ಅನುಪಾತ (Price to Earnings Ratio) ವನ್ನು ತಿಳಿದುಕೊಳ್ಳವುದು ಮುಖ್ಯವಾಗುತ್ತದೆ. ಈ ಸ್ಯೂಂಚಕವು ಯಾವುದೇ ಕಂಪನಿಯ ಒಂದು ರೂಪಾಯಿ ಗಳಿಕೆಗೆ ಎಷ್ಟು ಹಣ ಪಾವತಿಸುತ್ತಿದ್ದೇವೆ ಎಂಬುದನ್ನು ತಿಳಿಯಲು ಸಹಾಯಕವಾಗುತ್ತದೆ.

ಉದಾಹರಣೆಯನ್ನು ನೋಡುವುದಾದರೆ ಯಾವುದೇ ಷೇರುಗಳ ಪಿಎಫ್ ಅನುಪಾತ 25 ಅಂದರೆ,ನೀವು ಆ ಕಂಪನಿಯ ಪ್ರತಿಯೊಂದು ರೂಪಾಯಿ ಲಾಭಕ್ಕೆ 25 ಪಾವತಿಸುತ್ತಿದ್ದೀರಿ ಎಂದಾಗುತ್ತದೆ.
ಆರ್ಥಿಕ ಹಿಂಜರಿತದ ಸಮಯದಲ್ಲಿ ಕಂಪನಿಗಳ ಲಾಭ ಸಾಮಾನ್ಯವಾಗಿ ಕಡಿಮೆಯಾಗುತ್ತವೆ.ಈ ಸಮಯದಲ್ಲಿ ಪೇರುಪೇಟೆಯಲ್ಲಿ ಬೆಲೆಗಳು ಬದಲಾಗದೇ ಹಾಗೇ ಷೇರುಗಳ ಬೆಲೆಗಳು ಆಗಾಗ ಬದಲಾಗದೆ ಇರಬಹುದು ಅಥವಾ ನಿಧಾನವಾಗಿ ಇಳಿಯಬಹುದು. ಇದರ ಪರಿಣಾಮವಾಗಿ PE ಅನುಪಾತ ಹೆಚ್ಚಾಗಬಹುದು. ಏಕೆಂದರೆ ಗಣಕದಲ್ಲಿ ಲಾಭ ಕಡಿಮೆಯಾದರೂ ಬೆಲೆ ಬದಲಾಗಿಲ್ಲ. ಇದರಿಂದಾಗಿ PE ಅನುಪಾತ ಹೆಚ್ಚು ಇದೆ ಎಂದು ನೋಡಿ ಷೇರು ಮಾರುಕಟ್ಟೆ ದುಬಾರಿಯಾಗಿದೆ ಎಂಬ ನಿರ್ಧಾರಕ್ಕೆ ಬಾರಬಹುದು ಎಂದು ಹೇಳಿದ್ದಾರೆ. ಕುಸಿತ ಕೊನೆಗೊಂಡಾಗ ಗಳಿಕೆಗಳು ಚೇತರಿಸಿಕೊಳ್ಳುತ್ತವೆ ಎಂಬ ಅಂಶದಲ್ಲಿ ಷೇರು ಮಾರುಕಟ್ಟೆ ಬೆಲೆಗಳು ಇರುತ್ತೇವೆ.
ಮಾರುಕಟ್ಟೆಗಳನ್ನು ಮೌಲ್ಯಮಾಪನ ಮಾಡಲು ಒಂದು ಉತ್ತಮ ಮಾರ್ಗವೆಂದರೆ ಚಕ್ರೀಯವಾಗಿ ಹೊಂದಿಸಲಾದ ಬೆಲೆ-ಗಳಿಕೆಯ ಅನುಪಾತ. ಈ ಅನುಪಾತವು ದೀರ್ಘಾವಧಿಯವರೆಗೆ,ಸಾಮಾನ್ಯವಾಗಿ ಹತ್ತು ವರ್ಷಗಳವರೆಗೆ ಸುಗಮ ಗಳಿಕೆಯನ್ನು ಬಳಸುತ್ತದೆ.ವ್ಯವಹಾರ ಚಕ್ರದ ಏರಿಳಿತದಿಂದ ಬರುವ ಚಂಚಲತೆಯನ್ನು ಇದು ತೆಗೆದುಹಾಕುತ್ತದೆ. ಹೀಗಾಗಿ, ಇದು ಮಾರುಕಟ್ಟೆಯ ದೀರ್ಘಕಾಲೀನ ಮೌಲ್ಯದ ಉತ್ತಮ ಸಂಕೇತವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎಎಸ್‌ಇ ನಿಫ್ಟಿ ಸೂಚ್ಯಂಕಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
ಮೇ ತಿಂಗಳಲ್ಲಿ 2025ರಲ್ಲಿ ಭಾರತದ ಪ್ರಮುಖ ಷೇರು ಸೂಚ್ಯಂಕಗಳಾದ BSE ಸೆನ್ಸೆಕ್ಸ್ ಮತ್ತು NSE ನಿಫ್ಟಿ ಗಾಗಿ CAPE ಅನುಪಾತಗಳು ಅತ್ಯಂತ ಎತ್ತರ ಮಟ್ಟದಲ್ಲಿ ಇದ್ದವು. ಸೆನ್ಸೆಕ್ಸ್‌ಗೆ 35.2 ಮತ್ತು ನಿಫ್ಟಿಗೆ 41.1. ದೀರ್ಘಾವಧಿಯ ಸರಾಸರಿಗಳು ಸೆನ್ಸೆಕ್ಸ್‌ಗೆ 24.7 ಮತ್ತು ನಿಫ್ಟಿಗೆ 28.0. ಇದರರ್ಥ ಪ್ರಸ್ತುತ ಮೌಲ್ಯಮಾಪನಗಳು ಅವುಗಳ ಐತಿಹಾಸಿಕ ಸರಾಸರಿಗಳಿಗೆ ಹೋಲಿಸಿದರೆ ಹೆಚ್ಚಳವಾಗಿ ಇದೆ.
CAPE ಅನುಪಾತವು ಷೇರುಪೇಟೆಯಲ್ಲಿಸರಾಸರಿಗಿಂತ ಸ್ವಲ್ಪ ಕಡಿಮೆ ಇರುತ್ತವೆ. ಹೂಡಿಕೆದಾರರಿಗೆ, CAPE ಅನುಪಾತವು ಹೆಚ್ಚಿರುವಾಗ ಷೇರು ಮಾರುಕಟ್ಟೆಗೆ ಹಂಚಿಕೆಯನ್ನು ಹೂಡಿಕೆದಾರು ಕಡಿಮೆ ಮಾಡಬೇಕಾಗುತ್ತದೆ.
CAPE ಅನುಪಾತವನ್ನು ಹಲವು ದೇಶಗಳಲ್ಲಿ ಒಂದೇ ರೀತಿಯಲ್ಲಿ ಇರುತ್ತದೆ. ಹೀಗಾಗಿ ನೀವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವವರಿಗೆ ದೇಶಾದ್ಯಂತದ ಮೌಲ್ಯಮಾಪನಗಳನ್ನು ಹೋಲಿಕೆ ಮಾಡಿಕೊಳ್ಳಲು ಸಹ ಬಹಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಉದಾಹರಣೆಯನ್ನು ನೋಡುವುದಾದರೆ ಯುಎಸ್ ಷೇರು ಮಾರುಕಟ್ಟೆಗೆ (S&P 500) ಪ್ರಸ್ತುತ CAPE ಅನುಪಾತವು ಸುಮಾರು 38 ಆಗಿದೆ. ಅಮೆರಿಕಾದ ಪೇರುಪೇಟೆಗಳು ಭಾರತೀಯ ಷೇರು ಮಾರುಕಟ್ಟೆಯಷ್ಟೇ ಹೆಚ್ಚಳವಾಗಿದೆ.
CAPE ಅನುಪಾತದ ಒಂದು ಮುಖ್ಯ ಮಿತಿ ಅಂದ್ರೆ, ಇದು ಅಲ್ಪಕಾಲಿಕ (ಉದಾಹರಣೆಗೆ 1 ವರ್ಷದೊಳಗಿನ) ಷೇರು ಮಾರುಕಟ್ಟೆ ಪ್ರತಿಫಲಗಳನ್ನು ಮುಂಚಿತವಾಗಿ ಊಹಿಸಿವುದು ಷೇರುಗಳ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಅದ್ದರಿಂದ, ಈ ಸೂಚ್ಯಂಕವು ಅಲ್ಪಾವಧಿ ಅಥವಾ ಮಧ್ಯಮ ಅವಧಿಯ ಮಾರುಕಟ್ಟೆ ಚಲನೆಗಳನ್ನು ಸಮಯಕ್ಕೆ ತಕ್ಕಂತೆ ಮುನ್ನಿರೀಕ್ಷಿಸಲು ಸಹಾಕಾರಿಯಾಗುತ್ತದೆ.ಆದರೆ ನೀವಿನಾದರೂ ದೀರ್ಘಕಾಲದ ಹೂಡಿಕೆ ದೃಷ್ಟಿಯಿಂದ ನೋಡಿದರೆ, CAPE ಅನುಪಾತವು ಬಹುಮುಖ್ಯವಾದ ಮೌಲ್ಯವಂತಹದ ಪರಿಕರವಾಗಿದೆ.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.


Click it and Unblock the Notifications