ಕೋವಿಡ್-19 ಸಾಂಕ್ರಾಮಿಕ ಮತ್ತು ಪ್ರಪಂಚದಾದ್ಯಂತದ ಪ್ರಮುಖ ಘಟನೆಗಳ ಸ್ಥಗಿತದೊಂದಿಗೆ, ಕೈಗಾರಿಕೆಗಳು ಸೃಜನಶೀಲತೆಯನ್ನು ಪಡೆಯಲು ಒತ್ತಾಯಿಸಲ್ಪಟ್ಟಿವೆ. ಸದ್ಯ ತಂತ್ರಜ್ಞಾನ ಉನ್ನತ ಮಟ್ಟದಲ್ಲಿದ್ದರೂ ಭವಿಷ್ಯದಲ್ಲಿ ಅದರ ಮತ್ತಷ್ಟು ಆವಿಷ್ಕಾರಗಳನ್ನ ಊಹಿಸೋಕು ಕಷ್ಟಸಾಧ್ಯ.
ಈಗಾಗಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ತಾಂಡವವಾಡುತ್ತಿದ್ದು, ಭವಿಷ್ಯದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಿದರೂ ಆಶ್ಚರ್ಯವಿಲ್ಲ. ಇದರ ನಡುವೆ ಭವಿಷ್ಯದಲ್ಲಿ ನಾವು ಹೇಗೆ ಕೆಲಸ ಮಾಡಬಲ್ಲೆವು, ನಮ್ಮ ಜಾಗವನ್ನ ರೊಬೊರ್ಟ್‌ಗಳು ಆಕ್ರಮಿಸಿಕೊಂಡಿರುತ್ತವೆಯೇ ಎಂಬ ಪ್ರಶ್ನೆಯು ಉದ್ಭವಿಸುತ್ತದೆ.

ಕೈಗಾರಿಕೆಗಳಲ್ಲಿ ಕಾರ್ಮಿಕರ ಬದಲು ರೊಬೊರ್ಟ್‌ಗಳು ಕಾರ್ಯ ನಿರ್ವಹಿಸಬಹುದು. ಇವುಗಳ ಸಂವಹನವು ಮನುಷ್ಯರಿಗೆ ಸಮಾನ ರೀತಿಯಲ್ಲಿ ಕಾರ್ಯ ನಿರ್ವಹಿಸುದರ ಜೊತೆಗೆ ಉತ್ಪಾದನೆಗೆ ವೇಗ ನೀಡಬಹುದು. ಇನ್ನು ಉತ್ಪಾದನಾ ಸರಕುಗಳನ್ನು ಟ್ರಕ್‌ಗಳಿಗೆ ತುಂಬಿಸುವ ತಂತ್ರಜ್ಞಾನವು ಬರಬಹುದು.
ಸರಕುಗಳನ್ನು ಹೊತ್ತ ಟ್ರಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮೂಲಕ ಚಲಿಸಬಹುದು. ಟ್ರಾಫಿಕ್ ಹೆಚ್ಚಿರುವುದು ಕಂಡುಬಂದಲ್ಲಿ ಇದರಲ್ಲಿನ ಕಂಪ್ಯೂಟರ್ ಸಿಗ್ನಲ್ ಮೂಲಕ ವಾಹನದಲ್ಲಿನ ಡ್ರೋನ್ ಮೂಲಕ ಸರಕನ್ನು ಹೊತ್ತೊಯ್ಯಬಲ್ಲದು. ಮನೆಯಲ್ಲಿನ ರೊಬೊರ್ಟ್‌ಗಳು ಹೀಗೆ ಡ್ರೋನ್ ಮೂಲಕ ಬಂದ ಪ್ಯಾಕೇಜ್ ಸ್ವೀಕರಿಸಬಹುದು.
ಇನ್ನು ಕೈಗಾರಿಕೆಗಳ ಕುರಿತು ಮಾತನಾಡುವುದಾದರೆ ರೊಬೊರ್ಟ್‌ಗಳು 3ಡಿ ಪ್ರಿಂಟೆಡ್ ಉತ್ಪನ್ನಗಳನ್ನ ತಯಾರಿಸಬಲ್ಲದು. ವಾಶಿಂಗ್ ಮೆಶಿನ್, ಟಿವಿ, ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ನಗರದ 3ಡಿ ಪ್ರಿಂಟ್ ಕೂಡ ಸಾಧ್ಯವಿದೆ. ಹೀಗೆ ಜನರ ಎಲ್ಲಾ ಕೆಲಸಗಳನ್ನು ರೊಬೊರ್ಟ್ ಮಾಡಿದರೆ ನಮಗೆಲ್ಲಿ ಕೆಲಸ ಎಲ್ಲಿರುತ್ತದೆ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ವಿಶ್ಲೇಷಕರ ಮತ್ತೊಂದು ಗುಂಪಿನ ಪ್ರಕಾರ ಎಲ್ಲಾ ಕಾರ್ಮಿಕರು, ಕೆಲಸಗಾರರ ಉದ್ಯೋಗವನ್ನ ರೊಬೊರ್ಟ್‌ಗಳು ಆಕ್ರಮಿಸಲು ಸಾಧ್ಯವಿಲ್ಲ ಎಂಬ ವಾದವು ಇದೆ.


Click it and Unblock the Notifications