ಬಾಲಿವುಡ್ ನಟ, ಗ್ರೀಕ್ ದೇವತೆ ಎಂದೇ ಬಿರುದುಳ್ಳ ಹೃತಿಕ್ ರೋಷನ್‌ಗೆ ಜಾಹೀರಾತು ಸಂಕಷ್ಟ ತಂದೊಡ್ಡಿದೆ. 'ಜಾಲಿ ತುಳಸಿ 51' ಎಂಬ ಆರೋಗ್ಯ ಉತ್ಪನ್ನವನ್ನು ಅದರ ನಿಖರ ವೈಜ್ಞಾನಿಕ ಗುಣಮಟ್ಟ ದೃಢಪಡಿಸಿ ಪ್ರಚಾರ ಮಾಡಿಲ್ಲ ಎಂಬ ಆರೋಪ ಎದುರಾಗಿದೆ.
'ಜಾಲಿ ತುಳಸಿ 51' ಎಂಬ ಆರೋಗ್ಯ ಉತ್ಪನ್ನದ ಪ್ರಚಾರ ರಾಯಭಾರಿಯಾಗಿ ಹೃತಿಕ್ ರೋಷನ್ ಸಹಿ ಹಾಕುವ ಮುನ್ನ ಅವರು ಹೇಳಿರುವ ವಿಷಯಗಳು, ವಿವರಗಳು ಮತ್ತು ಹೋಲಿಕೆಯನ್ನು ದೃಢಪಡಿಸಲಾಗಿಲ್ಲ. ಉತ್ಪನ್ನದ ಕಾರ್ಯತತ್ಪರತೆಯನ್ನು ನಿಶ್ಚಯಿಸಿದ ಬಳಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿಲ್ಲ. ಇದು ಜನರನ್ನು ತಪ್ಪು ಹಾದಿಗೆಳೆಯುವ ಸಾಧ್ಯತೆಯಿದೆ ಎಂದು ಜಾಹೀರಾತು ಮಾನದಂಡ ಮಂಡಳಿ(ASCI) ಆರೋಪಿಸಿದೆ.

ಉದ್ಯಮದ ಸ್ವಯಂ ನಿಯಂತ್ರಕ ಸಂಸ್ಥೆಯಾಗಿರುವ ಎಎಎಸ್‌ಸಿಐ 'ಜಾಲಿ ತುಳಸಿ 51' ಜಾಹೀರಾತಿನಲ್ಲಿ ಹೇಳಿರುವಂತೆ ಉತ್ಪನ್ನವು ರೋಗನಿರೋಧಕ ಶಕ್ತಿ ಮತ್ತು ರೋಗಗಳಿಂದ ರಕ್ಷಣೆ ಹೆಚ್ಚು ಮಾಡುತ್ತದೆ ಎಂಬ ಪ್ರತಿಪಾದನೆಯನ್ನು ವೈದ್ಯರು ವೈಜ್ಞಾನಿಕವಾಗಿ ದೃಢಪಡಿಸಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಐದು ಬಗೆಯ ತುಳಸಿ ಎಣ್ಣೆಯಿಂದ ತಯಾರಿಸಲ್ಪಟ್ಟ ಆಯುರ್ವೇದಿಕ್ ಉತ್ಪನ್ನವನ್ನು ಸೇವಿಸದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದು ಜಾಹೀರಾತು ಮೂಲಕ ತಿಳಿಸಿದೆ. ಆದರೆ ಈ ಉತ್ಪನ್ನದ ವಿವರಣೆಯನ್ನು ಕಂಪನಿ ಕೊಟ್ಟಿಲ್ಲ ಎಂದು ಆರೋಪ ಕೇಳಿಬಂದಿದೆ.
ಈ ರೀತಿಯ ಜಾಹೀರಾತುಗಳು ಜನರ ದಿಕ್ಕು ತಪ್ಪಿಸುವುದಲ್ಲದೆ, ಉತ್ಪನ್ನಗಳ ಮೇಲಿನ ಜನರ ನಂಬಿಕೆಯನ್ನು ಹಾಳುಮಾಡುತ್ತದೆ ಜೊತೆಗೆ ಜಾಹೀರಾತುದಾರರ ಮೇಲೂ ಪರಿಣಾಮ ಬೀರುತ್ತದೆ ಎಂದು ಎಎಎಸ್‌ಸಿಐ ಅಧ್ಯಕ್ಷ ರೋಹಿತ್ ಗುಪ್ತಾ ಹೇಳಿದ್ದಾರೆ.


Click it and Unblock the Notifications