ಕೇಂದ್ರ ಸರ್ಕಾರ ಕನಸಿನ ಯೋಜನೆಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಯೋಜನೆ ಕೂಡಾ ಒಂದು. ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲು (Vande Bharat Express) ಸೇವೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಎರ್ನಾಕುಲಂ ಮತ್ತು ಬೆಂಗಳೂರು ಸಂಪರ್ಕಿಸುವ ವಂದೇ ಭಾರತ್ ರೈಲನ್ನು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದರು. ಹೌದು, ನವೆಂಬರ್ 8 ರಂದು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಏಕಕಾಲದಲ್ಲಿ ನಾಲ್ಕು ಹೊಸ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಕೊಟ್ಟಿದ್ದರು.

ಇನ್ನು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದ ಈ ಹೊಸ ರೈಲುಗಳು ಬನಾರಸ್‌ನಿಂದ ಖಜುರಾಹೊ, ಲಕ್ನೋದಿಂದ ಸಹರಾನ್‌ಪುರ, ಪಂಜಾಬ್‌ನ ಫಿರೋಜ್‌ಪುರ್‌ನಿಂದ ದೆಹಲಿ ಮತ್ತು ಕೇರಳದ ಎರ್ನಾಕುಲಂನಿಂದ ಕರ್ನಾಟಕದ ಕೆಎಸ್‌ಆರ್ ಬೆಂಗಳೂರು ನಡುವೆ ಸಂಪರ್ಕ ಸಾಧಿಸಲಿದೆ. ಅಚ್ಚರಿಯ ವಿಷಯ ಅಂದ್ರೆ ಇವುಗಳಲ್ಲಿ ಎರ್ನಾಕುಲಂ - ಕೆಎಸ್‌ಆರ್ ಬೆಂಗಳೂರು ಸಂಚರಿಸುವ ವಂದೇ ಭಾರತ್ ರೈಲು ಆರಂಭವಾದ ಕೆಲವೇ ಗಂಟೆಗಳಲ್ಲಿ ಭರ್ತಿಯಾಗಿದೆ.
ಒಂದೇ ದಿನದಲ್ಲಿ ರೈಲು ಭರ್ತಿ!
ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ರೈಲಿನ (26651/26652) ಉದ್ಘಾಟನಾ ಸಂಚಾರ ನವೆಂಬರ್ 8 ರಂದು ನಡೆಸಲಾಯಿತು. ಇನ್ನು ನಿಯಮಿತ ಕಾರ್ಯಾಚರಣೆ ನವೆಂಬರ್ 11, 2025 ರಿಂದ ಅಂದರೆ ಸೋಮವಾರದಿಂದ ಪ್ರಾರಂಭವಾಗಲಿದೆ. ನವೆಂಬರ್ 9 ರಂದು ಬೆಳಗ್ಗೆ 8 ಗಂಟೆಗೆ ಟಿಕೆಟ್ ಬುಕಿಂಗ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ 26652 ಎರ್ನಾಕುಲಂ-ಬೆಂಗಳೂರು ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗಿರುವುದು ವಿಶೇಷ.
ಮಂಗಳವಾರದ ಎಸಿ ಚೇರ್ ಕಾರ್‌ಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಮುಂದಿನ 10 ದಿನಗಳವರೆಗೆ ಯಾವುದೇ ಸೀಟುಗಳು ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಪ್ರಸ್ತುತ, ಈ ರೈಲು ಎಂಟು ಬೋಗಿಗಳನ್ನು ಹೊಂದಿದ್ದು, ಕೊನೆಯಿಂದ ಎಸಿ ಚೇರ್ ಕಾರ್ ಟಿಕೆಟ್ ಬೆಲೆ 1615 ರೂ.ಗಳಾಗಿದ್ದು, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ಗೆ 2980 ರೂ. ಬೆಲೆ ನಿಗದಿ ಪಡಿಸಲಾಗಿದೆ
ಈ ರೈಲು ಎರ್ನಾಕುಲಂನಿಂದ ಹೊರಟು ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ ಮತ್ತು ಕೃಷ್ಣರಾಜಪುರಂ ಮೂಲಕ 7 ನಿಲ್ದಾಣಗಳನ್ನು ದಾಟಿ ಬೆಂಗಳೂರನ್ನು ತಲುಪಲಿದೆ.
ವಂದೇ ಭಾರತ್ ರೈಲಿನ ಸಂಚಾರ ಸಮಯ:
ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಎರ್ನಾಕುಲಂನಿಂದ ಮಧ್ಯಾಹ್ನ 2:20 ಕ್ಕೆ ಹೊರಟು ತ್ರಿಶೂರ್‌ಗೆ 3:17, ಪಾಲಕ್ಕಾಡ್‌ಗೆ 4:35, ಕೊಯಮತ್ತೂರಿಗೆ 5:20, ತಿರುಪ್ಪೂರ್‌ಗೆ 6:03, ಈರೋಡ್‌ಗೆ 6:45, ಸೇಲಂಗೆ 7:18, ಕೃಷ್ಣರಾಜಪುರಂಗೆ 10:25 ಮತ್ತು ಕೆಎಸ್‌ಆರ್ ಬೆಂಗಳೂರಿಗೆ ರಾತ್ರಿ 11:00 ಗಂಟೆಗೆ ತಲುಪಲಿದೆ ಎಂದು ವರದಿಯಾಗಿದೆ.
ಇನ್ನು ಮರುದಿನ ಬೆಳಗ್ಗೆ ಈ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 5:10 ಕ್ಕೆ ಹೊರಡಲಿದೆ. ಅಲ್ಲಿಂದ ಕೃಷ್ಣರಾಜಪುರಂಗೆ 5:23, ಸೇಲಂಗೆ 8:10, ಈರೋಡ್‌ಗೆ 9:00, ತಿರುಪ್ಪೂರ್‌ಗೆ 9:45, ಕೊಯಮತ್ತೂರಿಗೆ 10:33, ಪಾಲಕ್ಕಾಡ್‌ಗೆ 11:28, ತ್ರಿಶೂರ್‌ಗೆ 12:28 ಮತ್ತು ಎರ್ನಾಕುಲಂಗೆ ಮಧ್ಯಾಹ್ನ 1:50 ಕ್ಕೆ ತಲುಪಲಿದೆ ಎಂದು ವರದಿಯಾಗಿದೆ.


Click it and Unblock the Notifications