ಬೆಂಗಳೂರು, ಏಪ್ರಿಲ್ 25: ಭಾರತದ ಬ್ಯಾಂಕಿಂಗ್ ವಲಯ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಕೂಡ ಭಾರತದ ಬ್ಯಾಂಕಿಂಗ್ ವಲಯಕ್ಕೆ ದೊಡ್ಡ ಹೆಸರು ಕೂಡ ಇದೆ. ಅದರಲ್ಲೂ ಭಾರತದ ಆರ್ಥಿಕ ಶಿಸ್ತು ಪಾಶ್ಚಿಮಾತ್ಯ ದೇಶಗಳಿಗೆ ಕೂಡ ಮಾದರಿ ಆಗುತ್ತಿದ್ದು, ಭಾರತದಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳು ದೊಡ್ಡ ಮಟ್ಟದಲ್ಲಿ ಲಾಭ ಮಾಡುತ್ತಿವೆ. ಈ ರೀತಿ ಆಕ್ಸಿಸ್ ಬ್ಯಾಂಕ್ ಕೂಡ ಭಾರಿ ಲಾಭ ಗಳಿಸಿದೆ.
ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳ ಪೈಕಿ ಆಕ್ಸಿಸ್ ಬ್ಯಾಂಕ್ ಕೂಡ ಒಂದಾಗಿದೆ. ಹೀಗೆ ಭಾರತದ ಆರ್ಥಿಕ ವಲಯದಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಖಾಸಗಿ ಬ್ಯಾಂಕ್‌ಗಳು ಈ ಮೂಲಕ ಪಡೆದಿವೆ. ಇದೀಗ ಆಕ್ಸಿಸ್ ಬ್ಯಾಂಕ್ 2023 & 24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭರ್ಜರಿಯಾಗಿ ಲಾಭ ಗಳಿಸಿದೆ. ಇದೀಗ ಒಟ್ಟು 7,129 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ದಾಖಲೆ ಬರೆದಿದೆ ಆಕ್ಸಿಸ್ ಬ್ಯಾಂಕ್. ಮತ್ತೊಂದು ವಿಶೇಷ ಸಂಗತಿ ಏನು ಎಂದರೆ, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಒಟ್ಟು 5,728 ಕೋಟಿ ಲಾಭ ಗಳಿಸಿತ್ತು ಆಕ್ಸಿಸ್ ಬ್ಯಾಂಕ್. ಈ ಬಾರಿ ಲಾಭ ಹೆಚ್ಚಾಗಿದೆ.

ಲಾಭದ ಜೊತೆ ವರಮಾನ ಏರಿಕೆ!
ಆಕ್ಸಿಸ್ ಬ್ಯಾಂಕ್ ಲಾಭದಲ್ಲಿ ಮಾತ್ರವಲ್ಲ ಇದೀಗ ವರಮಾನ ಎಂದರೆ ಆದಾಯದಲ್ಲಿ ಕೂಡ ದೊಡ್ಡ ಪ್ರಮಾಣದ ಏರಿಕೆ ಕಂಡು ಬಂದಿದೆ. ಇದೀಗ ಆಕ್ಸಿಸ್ ಬ್ಯಾಂಕ್ ವರಮಾನ 28,758 ಕೋಟಿ ರೂಪಾಯಿಂದ 35,990 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಮತ್ತೊಂದು ಕಡೆಯಲ್ಲಿ ಆಕ್ಸಿಸ್ ಬ್ಯಾಂಕ್ ಬಡ್ಡಿ ವರಮಾನ ಶೇ. 11 ರಷ್ಟು ಹೆಚ್ಚಳ ಆಗಿ, 13,089 ಕೋಟಿ ರೂಪಾಯಿಗೆ ಮುಟ್ಟಿದೆ. 2023 & 24ನೇ ಪೂರ್ಣ ಆರ್ಥಿಕ ವರ್ಷದಲ್ಲಿ 24,861 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಆಕ್ಸಿಸ್ ಬ್ಯಾಂಕ್. ಹಿಂದಿನ ಅವಧಿಗೆ ಹೋಲಿಕೆ ಮಾಡಿದರೆ, ಲಾಭದಲ್ಲಿಯೂ ಶೇಕಡಾ 160 ರಷ್ಟು ಹೆಚ್ಚಳ ಆಗಿದೆ ಎಂದು ಮಾಹಿತಿ ನೀಡಲಾಗಿದೆ.
12.40 ಲಕ್ಷ ಕ್ರೆಡಿಟ್ ಕಾರ್ಡ್ ವಿತರಣೆ
ಇಷ್ಟೆಲ್ಲಾ ಬೆಳವಣಿಗೆ ನಡುವೆ, ಆಕ್ಸಿಸ್ ಬ್ಯಾಂಕ್ ವಸೂಲಾಗದ ಸಾಲದ ಪ್ರಮಾಣ ಎಂದರೆ, ಎನ್‌ಪಿಎ ಪ್ರಮಾಣ ಶೇಕಡಾ 2.02 ರಿಂದ ಶೇಕಡಾ 1.43ಕ್ಕೆ ಇಳಿಕೆ ಕಂಡಿದೆ ಎಂಬುದು ಈಗ ಗಮನಾರ್ಹ ವಿಚಾರವಾಗಿದೆ. ಹಾಗೆಯೇ ಮಾರ್ಚ್ ತ್ರೈಮಾಸಿಕದಲ್ಲಿ ಹೊಸದಾಗಿ 12.40 ಲಕ್ಷ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.


Click it and Unblock the Notifications