ಬೆಂಗಳೂರು, ಸೆಪ್ಟೆಂಬರ್ 24: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಹೆಚ್ಚಳವಾಗಿದೆ. ಸೆಪ್ಟೆಂಬರ್ 24ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಗಳು 210 ರೂ. ಏರಿಕೆಯಾಗಿ 76,360 ತಲುಪಿದೆ. ಈ ಮೂಲಕ ಸಾರ್ವಕಾಲಿಕ ಏರಿಕೆ ಕಂಡಿದೆ. 100 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆ ಇಂದು 2,100 ರೂ ಏರಿಕೆಯಾಗಿ 7,63,600 ರೂ. ತಲುಪಿದೆ.
ದೇಶದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 200 ರೂ. ಏರಿಕೆಯಾಗಿ 70,000 ರೂ. ತಲುಪಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 2,000 ರೂ. ಏರಿಕೆಯಾಗಿ 7,00,000 ರೂ.ಗೆ ತಲುಪಿದೆ. ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಈಗ 70,000 ಮುಟ್ಟಿದೆ.

18 ಕ್ಯಾರೆಟ್ ಹಳದಿ ಲೋಹದ ಬೆಲೆ 10 ಗ್ರಾಂ 160 ರೂ. ಏರಿಕೆಯಾಗಿ 57,270 ರೂ. ಆಗಿದೆ. ಇದೇ 18 ಕ್ಯಾರೆಟ್ ಚಿನ್ನದ ಬೆಲೆ 1,600 ರೂ ಏರಿಕೆಯಾಗಿ 5,72,700 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಗೆ 21 ರೂ ಏರಿಕೆಯಾಗಿ 7,636 ತಲುಪಿದೆ. ಇನ್ನು 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 20 ರೂ ಏರಿಕೆಯಾಗಿ 7,000 ರೂ. ತಲುಪಿದೆ. ಹಾಗೆಯೇ 18 ಕ್ಯಾರೆಟ್ ಚಿನ್ನದ ಬೆಲೆ 16 ರೂ. ಏರಿಕೆಯಾಗಿ 5,727 ರೂ.ಗೆ ಏರಿಕೆಯಾಗಿದೆ.
ಸ್ಪಾಟ್ ಚಿನ್ನ, ಸ್ಪಾಟ್ ಬೆಳ್ಳಿ ಬೆಲೆ:
ಜಿಎಂಟಿ 0023 ಯಂತೆ ಪ್ರತಿ ಔನ್ಸ್‌ಗೆ 2,625.52 ಡಾಲರ್ ಸ್ಪಾಟ್ ಚಿನ್ನವು ಬದಲಾಗದೆ ಸ್ಥಿರವಾಗಿದೆ. ಬುಲಿಯನ್ ಗರಿಷ್ಠ ಪ್ರಮಾಣ 2,635.29 ಡಾಲರ್ ಅನ್ನು ಮುಟ್ಟಿದೆ. ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ 30.66 ಡಾಲರ್ ಹಾಗೂ ಪ್ಲಾಟಿನಂ ಶೇಕಡ 0.4 ಏರಿಕೆಯಾಗಿ 960.40 ಡಾಲರ್ ಹಾಗೂ ಪಲ್ಲಾಡಿಯಮ್ ಶೇಕಡ 0.6 ಇಳಿಕೆಯಾಗಿ 1,035.25 ಡಾಲರ್ ಮುಟ್ಟಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಗಳು ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಗಳು 100 ಇಳಿಕೆಯಾಗಿ 92,900 ತಲುಪಿದೆ. ದೇಶದಲ್ಲಿ ಇಂದು 100 ಗ್ರಾಂ ಬೆಳ್ಳಿಯ ಬೆಲೆಗಳು 10 ರೂ. ಇಳಿಕೆಯಾಗಿ 9,290 ರೂಪಾಯಿ ದರವಿದೆ.
ಭಾರತದಲ್ಲಿ 10 ದಿನಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಚಲನೆ:
ಭಾರತದಲ್ಲಿ ಸೆಪ್ಟೆಂಬರ್ 24ರಂದು 22 ಕ್ಯಾರೆಟ್ ಚಿನ್ನದ ಬೆಲೆ 20 ರೂ ಏರಿಕೆಯಾಗಿದೆ. ಸೆಪ್ಟೆಂಬರ್ 23 ರಂದು 20 ರೂ.ಗೆ ಏರಿಕೆಯಾಗಿದೆ. ಸೆಪ್ಟೆಂಬರ್ 22 ರಂದು ಚಿನ್ನದ ಬೆಲೆಗಳು ಸ್ಥಿರವಾಗಿದೆ. ಸೆಪ್ಟೆಂಬರ್ 21 ರಂದು 75 ರೂ. ಏರಿಕೆಯಾಗಿದೆ, ಸೆಪ್ಟೆಂಬರ್ 20 ರಂದು 60 ರೂ.ನಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ 19 ರಂದು 25 ರೂ.ನಷ್ಟು ಇಳಿಕೆಯಾಗಿದೆ. ಸೆಪ್ಟೆಂಬರ್ 18 ರಂದು 15 ರೂ. ಇಳಿಕೆಯಾಗಿದೆ. ಸೆಪ್ಟೆಂಬರ್ 17 ರಂದು 15 ರೂ. ಕಡಿಮೆಯಾಗಿದೆ. ಸೆಪ್ಟೆಂಬರ್ 16 ರಂದು 15 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 15 ರಂದು ಹಳದಿ ಲೋಹದ ಬೆಲೆ ಸ್ಥಿರವಾಗಿತ್ತು.
ಭಾರತದಲ್ಲಿ 10 ದಿನಗಳಲ್ಲಿ 1 ಕೆಜಿ ಬೆಳ್ಳಿ ಬೆಲೆಗಳು:
ದೇಶದಲ್ಲಿ ಬೆಳ್ಳಿ ಬೆಲೆಗಳು 100 ರೂ ಇಳಿಕೆಯಾಗಿದೆ. ಸೆಪ್ಟೆಂಬರ್ 23ರಂದು ಬೆಳ್ಳಿ ಬೆಲೆಗಳು ಸ್ಥಿರವಾಗಿತ್ತು. ಸೆಪ್ಟೆಂಬರ್ 22ರಂದು ಬೆಳ್ಳಿ ಬೆಲೆಗಳು ಸ್ಥಿರವಾಗಿತ್ತು. ಸೆಪ್ಟೆಂಬರ್ 21ರಂದು ಬೆಳ್ಳಿ ಬೆಲೆ 500 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 20ರಂದು 1,500 ರಂದು ಏರಿಕೆಯಾಗಿದೆ. ಸೆಪ್ಟೆಂಬರ್ 19 ರಂದು ಬೆಳ್ಳಿ ಬೆಲೆ ಸ್ಥಿರವಾಗಿತ್ತು. ಸೆಪ್ಟೆಂಬರ್ 18 ರಂದು 1,000 ರೂ ಇಳಿಕೆಯಾಗಿತ್ತು. ಸೆಪ್ಟೆಂಬರ್ 17 ರಂದು ಮತ್ತೆ 1000 ರೂ. ಕುಸಿತ ಕಂಡಿತ್ತು. ಸೆಪ್ಟೆಂಬರ್ 16ರಂದು ಬೆಳ್ಳಿ ಬೆಲೆ 1,000 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 15ರಂದು ಬೆಳ್ಳಿ ಬೆಲೆಗಳು ಸ್ಥಿರವಾಗಿದ್ದವು.
ಇಂದು 5 ಪ್ರಮುಖ ನಗರಗಳಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಗಳು:
ಚೆನ್ನೈನಲ್ಲಿ ಚಿನ್ನದ ಬೆಲೆ: ಚೆನ್ನೈನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,000 ರೂ. ಆಗಿದೆ.
ಮುಂಬೈನಲ್ಲಿ ಚಿನ್ನದ ಬೆಲೆ: ವಾಣಿಜ್ಯ ನಗರಿ ಮುಂಬೈನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,000 ರೂ. ಆಗಿದೆ.
ದೆಹಲಿಯಲ್ಲಿ ಚಿನ್ನದ ಬೆಲೆ: ದೇಶದ ರಾಜಧಾನಿ ದೆಹಲಿಯಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7015 ರೂ. ಆಗಿದೆ.
ಕೋಲ್ಕತ್ತಾದಲ್ಲಿ ಹಳದಿ ಲೋಹದ ಬೆಲೆ: ಕೋಲ್ಕತ್ತಾದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,000 ರೂ. ಆಗಿದೆ.
ಕೇರಳದಲ್ಲಿ ಚಿನ್ನದ ಬೆಲೆ: ದೇವರನಾಡು ಕೇರಳದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,000 ರೂ. ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,000 ರೂ. ಆಗಿದೆ.


Click it and Unblock the Notifications