For Quick Alerts
ALLOW NOTIFICATIONS  
For Daily Alerts

Hyundai Cars Year End Discount: ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್?

|

2020 ರ ಡಿಸೆಂಬರ್‌ನಲ್ಲಿ ಹ್ಯುಂಡೈ ಕಂಪನಿಯು ತನ್ನ ಎಲ್ಲಾ ಮಾದರಿಯ ಕಾರುಗಳ ಮೇಲೆ ಡಿಸ್ಕೌಂಟ್ ನೀಡಿದ್ದು, ಸ್ಯಾಂಟ್ರೊ, ನಿಯೋಸ್, ಎಲೈಟ್ ಐ 20, ಅಲಾಂಟ್ರಾ ಮುಂತಾದ ಮಾದರಿಗಳಿಗೆ ಸಖತ್ ಡಿಸ್ಕೌಂಟ್ ನೀಡುತ್ತದೆ.

 

ಹ್ಯುಂಡೈ ಕಂಪನಿಯ ವಿವಿಧ ಮಾಡೆಲ್‌ ಕಾರುಗಳಿಗೆ 1 ಲಕ್ಷ ರೂ.ವರೆಗೆ ರಿಯಾಯಿತಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ವೃತ್ತಿಪರರಿಗೆ ರಿಯಾಯಿತಿ ನೀಡುತ್ತಿದೆ.

ಸ್ಯಾಂಟ್ರೊಗೆ 50,000 ರೂಪಾಯಿವರೆಗೆ ಡಿಸ್ಕೌಂಟ್

ಸ್ಯಾಂಟ್ರೊಗೆ 50,000 ರೂಪಾಯಿವರೆಗೆ ಡಿಸ್ಕೌಂಟ್

ಹ್ಯುಂಡೈನ ಎಂಟ್ರಿ ಲೆವೆಲ್ ಮಾಡೆಲ್ ಸ್ಯಾಂಟ್ರೊಗೆ ಒಟ್ಟು 50,000 ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಇದರಲ್ಲಿ 30,000 ರೂ. ಕ್ಯಾಶ್ ಡಿಸ್ಕೌಂಟ್, 15 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್ ಹೊಂದಿದೆ. ಎಂಟ್ರಿ ಲೆವೆಲ್ ಎರಾ ಮಾದರಿಗೆ 20,000 ರೂ. ಕ್ಯಾಶ್ ಡಿಸ್ಕೌಂಟ್ ಮತ್ತು 15 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್ ಇದೆ.

ಹ್ಯುಂಡೈ ಐ10 ನಿಯೋಸ್

ಹ್ಯುಂಡೈ ಐ10 ನಿಯೋಸ್

ಹ್ಯುಂಡೈನ ನಿಯೋಸ್‌ಗೆ ಒಟ್ಟು 60,000 ರೂ. ವರೆಗೆ ಡಿಸ್ಕೌಂಟ್ ಇದೆ. ಅದರ ಟರ್ಬೊ ರೂಪಾಂತರಕ್ಕೆ 45,000 ರೂ ಕ್ಯಾಶ್ ಡಿಸ್ಕೌಂಟ್, 10,000 ರೂಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂ. ಹೊಂದಿದೆ. ಇತರ ರೂಪಾಂತರಗಳಲ್ಲಿ ಕೇವಲ 30,000 ರೂ.ಗಳ ಉಳಿತಾಯವನ್ನು ನೀಡಲಾಗುತ್ತಿದೆ.

ಹ್ಯುಂಡೈ ಗ್ರ್ಯಾಂಡ್ ಐ 10
 

ಹ್ಯುಂಡೈ ಗ್ರ್ಯಾಂಡ್ ಐ 10

ಹ್ಯುಂಡೈ ಗ್ರ್ಯಾಂಡ್ ಐ 10 ಗೆ 60,000 ರೂ.ಗಳ ಡಿಸ್ಕೌಂಟ್ ಹೊಂದಿದೆ. ಇದರಲ್ಲಿ 40,000 ರೂ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ 15,000 ಮತ್ತು ಕಾರ್ಪೊರೇಟ್ ರಿಯಾಯಿತಿ 5,000 ರೂ. ಆಗಿದೆ. ಎಲೈಟ್ ಐ 20 ರ ಮ್ಯಾಗ್ನಾ + ನಲ್ಲಿ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ.

ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಎಲೈಟ್ ಐ20

ಈ ಮಾದರಿಯ ಕಾರುಗಳಿಗೆ 75,000 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ, ಅದರ ಟರ್ಬೊ ರೂಪಾಂತರದಲ್ಲಿ 50,000 ರೂ. ಕ್ಯಾಶ್ ಡಿಸ್ಕೌಂಟ್, 20,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂ. ನೀಡಲಾಗುವುದು.

ಹ್ಯುಂಡೈ ಔರಾ

ಹ್ಯುಂಡೈ ಔರಾ

ಹ್ಯುಂಡೈ ಔರಾ ಮಾಡೆಲ್ ಪೆಟ್ರೋಲ್ ಟರ್ಬೊಗೆ 70,000 ರೂ.ಗಳ ಡಿಸ್ಕೌಂಟ್ ಇದೆ. ಇದರಲ್ಲಿ 50,000 ರೂ ಕ್ಯಾಶ್ ಡಿಸ್ಕೌಂಟ್, ಇತರ ಪೆಟ್ರೋಲ್‌ಗೆ 20,000 ರೂ. ಕ್ಯಾಶ್ ಡಿಸ್ಕೌಂಟ್ ಮತ್ತು ಡೀಸೆಲ್ ಮಾಡೆಲ್ ಮೇಲೆ 20,000 ರೂ. ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ರೂಪಾಂತರಗಳಲ್ಲಿ 15 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್ ಹೊಂದಿದೆ.

English summary

Hyundai Car Year End Discount: Cars Offer and Details Here

In this article explained Hyundai December 2020 car offers and discounts. Know more
Story first published: Saturday, December 5, 2020, 19:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X