ದಕ್ಷಿಣ ಕೊರಿಯಾದ ಖ್ಯಾತ ಮೋಟಾರ್ಸ್ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಬಹು ನಿರೀಕ್ಷಿತ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಐಯಾನಿಕ್ 5 ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ.
ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯ ಈ ಸಂದರ್ಭದಲ್ಲಿ ಈ ಪವರ್‌ಟ್ರೇನ್ ಆಯ್ಕೆಗಳು ಹೈಬ್ರಿಡ್ ಎಂಜಿನ್ ಮತ್ತು ಎಲ್ಲಾ ವಿದ್ಯುತ್ ಆಯ್ಕೆಯನ್ನು ಒಳಗೊಂಡಿವೆ. ಈ ಕಾರಿನೊಂದಿಗೆ, ಹ್ಯುಂಡೈ ತನ್ನ ಮುಂದಿನ ಮಾದರಿಗಳಿಗಾಗಿ ಇ-ಜಿಎಂಪಿ ಮೀಸಲಾದ ಇವಿ ಪ್ಲಾಟ್‌ಫಾರ್ಮ್‌ಗೆ ಬದಲಾಗುತ್ತಿದೆ.

ಜೊತೆಗೆ 2025ರ ವರೆಗೆ 23 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರನ್ನು ಫ್ಯೂಚರಿಸ್ಟಿಕ್ ವಿನ್ಯಾಸಗಳೊಂದಿಗೆ ಅಭಿವೃದ್ದಿಗೊಳಿಸಿದೆ.
ಕಾರಿನ ವೈಶಿಷ್ಟ್ಯತೆ ಏನು?
ಈ ಕಾರು 4,635 ಎಂಎಂ ಉದ್ದ, 1,890 ಎಂಎಂ ಅಗಲ ಮತ್ತು 1,605 ಎಂಎಂ ಎತ್ತರವಿದ್ದು, ಅದರ ವೀಲ್‌ಬೇಸ್ ಅನ್ನು 3,000 ಎಂಎಂ ಇರಿಸಲಾಗಿದೆ.
ಹೊಸ ಕಾರನ್ನು ಹ್ಯುಂಡೈ ಕಂಪನಿಯು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆರಂಭಿಕ ಮಾದರಿಯು 167 ಬಿಹೆಚ್‌ಪಿ ಉತ್ಪಾದಿಯೊಂದಿಗೆ ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ ನೂರು ಕಿಮೀ ವೇಗವನ್ನು ತಲುಪುತ್ತದೆ. ಕೇವಲ ಒಂದು ಚಾರ್ಜ್ ಮೂಲಕ 430 ಕಿ.ಮೀ ಚಲಿಸಬಹುದು ಕೇವಲ 18 ನಿಮಿಷದಲ್ಲಿ ಶೇಕಡಾ 80ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ.


Click it and Unblock the Notifications